ಕನ್ನಡಿಗರ ವಿರುದ್ದ ಆಂದೋಲನ ನಡೆಸಲು ಸಿದ್ದತೆ: ಮರಾಠ ಬವನದಲ್ಲಿ ಸಭೆ
Ready to launch agitation against Kannadigas: Meeting at Maratha Bhavan
ಬೆಳಗಾವಿ 12: ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ನಾನುಡಿಯಂತೆ ರಾಜ್ಯ ಸರಕಾರ ಬೆಳಗಾವಿಯಲ್ಲಿ ಬರುವ ಡಿ. 8ರಂದು ನಡೆಸಲು ಉದ್ದೇಶಿಸಿರುವ ಚಳಿಗಾಲ ಅಧಿವೇಶನದ ವಿರುದ್ದ ನಾಡ ವಿರೋಧಿ ಎಮ್‌ಇಎಸ್ ಸಂಘಟನೆ ಮಹಾಮೇಳಾವಾ ನಡೆಸಲು ಸಿದ್ದತೆ ನಡೆಸಿದ್ದು, ಈ ಬಗ್ಗೆ ಬೆಳಗಾವಿಯ ಮರಾಠಾ ಭವನದಲ್ಲಿ ಸಭೆ ನಡೆಸಿದ್ದಾರೆ. ಅಲ್ಲದೆ ಕನ್ನಡಗರ ವಿರುದ್ದ ಕ್ರಮಕೈಗೊಳ್ಳದಿದ್ದರೆ ತಾವೇ ಆಂದೋಲನ ಮಾಡುವ ಬಗ್ಗೆ ಪೊಲೀಸ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಸದಾ ಒಂದಿಲ್ಲ ಒಂದು ತಗಾದೆತೆಗೆಯುವ ಮೂಲಕ ಗಡಿಜಿಲ್ಲೆ ಬೆಳಗಾವಿಯಲ್ಲಿ ಅಶಾಂತಿಯನ್ನುಉಂಟು ಮಾಡುವ ಝಾಪಾಗಳು ಮೊನ್ನೆ ರವಿವಾರ ಬೆಳಗಾವಿಯ ಮರಾಠಾ ಭವನದಲ್ಲಿ ಸಭೆ ನಡೆಸಿ ರಾಜ್ಯ ಸರಕಾರ ಬರುವ ಡಿ. 8ರಂದು ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ಚಳಿಗಾಲ ಅಧಿವೇಶನ ವಿರುದ್ದ ಮಹಾಮೇಳಾವಾ ನಡೆಸುವ ಕುರಿತುಚರ್ಚೆ ನಡೆಸಿದ್ದಾರೆ.
ಅಲ್ಲದೆ ಬೆಳಗಾವಿಯಲ್ಲಿ ಕನ್ನಡಿಗರುಅನ್ಯ ಭಾಷೆಯ ನಾಮಫಲಕಗಳ ವಿರುದ್ದ ನಡೆಸುತ್ತಿರುವ ಹೋರಾಟದ ವಿರುದ್ದ ಕ್ರಮಕೈಗೊಳ್ಳುವಂತೆ ಬೆಳಗಾವಿ ಪೊಲೀಸ್‌ಆಯುಕ್ತ ಭೂಷಣ ಬೊರಸೆಅವರಿಗೆ ಮನವಿಯೊಂದನ್ನು ಸಲ್ಲಿಸಿ, ಕನ್ನಡಿಗರ ವಿರುದ್ದ ಕ್ರಮಕೈಗೊಳ್ಳದೆ ಇದ್ದಲ್ಲಿತಾವುಆಂದೋಲನ ನಡೆಸುವದಾಗಿಆಯುಕ್ತರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಮಾಜಿ ಶಾಸಕ ಕಿಣೇಕರತಾವು ಬರುವ ಡಿ. 8ರಂದು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ವಿರುದ್ದ ಮಹಾಮೇಳಾವ ನಡೆಸಲುಅನುಮತಿ ನೀಡುವಂತೆ ಪೊಲೀಸ್‌ಆಯುಕ್ತರಿಗೆ ಮನವಿ ಮಾಡುವದಾಗಿ ಮಾಜಿ ಶಾಸಕಕಿಣೇಕರ ಹೇಳಿಕೆ ನೀಡಿದ್ದಾರೆ.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 