ರಾಯಣ್ಣನ ದೇಶ ಭಕ್ತಿ ಇಂದಿನ ಯುವ ಜನತೆಗೆ ಆದರ್ಶಪ್ರಾಯ : ಮಾಧುಲಿಂಗ ಸ್ವಾಮೀಜಿ
Rayanna's patriotism is a role model for today's youth: Madhulinga Swamiji
ಮಹಾಲಿಂಗಪುರ 27: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ದೇಶ ಭಕ್ತಿ ಎಲ್ಲರಿಗೂ ಆದರ್ಶಪ್ರಾಯ ಎಂದು ಜಕನೂರಿನ ಪ ಪೂ ಡಾ ಮಾಧುಲಿಂಗ ಸ್ವಾಮೀಜಿ ಹೇಳಿದರು. ನಗರದ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ 195 ನೇ ಪುಣ್ಯಾರಾಧನೆ ಕಾರ್ಯಕ್ರಮವನ್ನು ಅವರು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಸಿ ಮಾತನಾಡಿ ರಾಯಣ್ಣ ತನ್ನ ಮರಣಕ್ಕೆ ಸಮೀಪವಿದ್ದರೂ ಸ್ವತಂತ್ರಕ್ಕಾಗಿ ಹಾತೋರೆಯುತ್ತಿದ್ದರು.ಬ್ರಿಟಿಷರು ರಾಯಣ್ಣನ್ನು ಗಲ್ಲಿಗೆರಿಸುವ ಮುನ್ನ ನಿನ್ನ ಕೊನೆಯ ಮಾತು ಏನಾದರೂ ಹೇಳುತ್ತೀಯಾ ಎಂದು ಕೇಳಿದಾಗ " ನೀವು ನನ್ನನ್ನು ಗಲ್ಲಿಗೇರಿಸಬಹುದು ಆದರೆ ನೆನಪಿರಲಿ ನಮಗೆ ಸ್ವಾತಂತ್ರ್ಯ ಬರುವವರೆಗೂ ಈ ದೇಶದ ಪ್ರತಿಯೊಂದು ಮನೆಯಿಂದಲೂ ಒಬ್ಬ ರಾಯಣ್ಣ ಹುಟ್ಟುತ್ತಾನೆ "ಎಂದು ರಾಯಣ್ಣ ಬ್ರಿಟಿಷರಿಗೆ ಎಚ್ಚರಿಕೆ ಕೊಟ್ಟಿದ್ದರು ಎಂದರು.
ನಂತರ ಮಾತನಾಡಿದ ಬಾಗಲಕೋಟ ಜಿಲ್ಲಾ ಪಂಚಾಯತ್ ಮಾಜಿ ಹಂಗಾಮಿ ಅಧ್ಯಕ್ಷರಾದ ಮಹಾಂತೇಶ ಹಿಟ್ಟಿನಮಠ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನ್ನಾಗಿದ್ದ ಸಂಗೊಳ್ಳಿ ರಾಯಣ್ಣ ಅಂದಿನ ಕಿತ್ತೂರು ಸಾಮ್ರಾಜ್ಯದ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಆಗಸ್ಟ್ 15 1798 ರಲ್ಲಿ ಭರಮಪ್ಪ ಹಾಗೂ ಕೆಂಚವ್ವರ ಮಗನಾಗಿ ಜನಿಸಿದರು ಭಾರತೀಯರಾದ ನಾವು ಭರತ ಭೂಮಿ ಇರುವವರೆಗೆ ರಾಯಣ್ಣನ್ನು ಮರೆಯುವಂತಿಲ್ಲ ಎಂದರು.
ಈ ಸಂಧರ್ಭದಲ್ಲಿ ಯುವ ಅಧ್ಯಾತ್ಮ ಚಿಂತಕ ಮಹೇಶ ಇಟಕನ್ನವರ ಮುಖಂಡರಾದ ರಂಗಣ್ಣಗೌಡ ಪಾಟೀಲ, ಜಯರಾಮ್ ಶೆಟ್ಟಿ ಮಾತನಾಡಿದರು. ಗಿರೆಪ್ಪ ಸಂಶಿ, ಸಿದ್ದರಾಮ ಯರಗಟ್ಟಿ, ಸದಾಶಿವ ಕಂಬಳಿ, ಸತ್ಯಪ್ಪ ಹುದ್ದಾರ, ವೇದಿಕೆ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಮಹಾಲಿಂಗಪ್ಪ ಜಕ್ಕಣ್ಣವರ, ಗಂಗಾಧರ ಮೇಟಿ, ಕರೆಪ್ಪ ಮೇಟಿ, ಶ್ರೀಶೈಲ್ ಅವಟಿ, ಹಣಮಂತ ಅವಟಿ, ಕರೆಪ್ಪ ಪೂಜಾರಿ, ಮುತ್ತು ದಿವಾನ, ಮುತ್ತು ಸಾಲಿಮನಿ, ಮಾರುತಿ ದಳವಾಯಿ, ಅರ್ಜುನ್ ಮೇಟಿ, ಪರಶಪ್ಪ ಬಂಡಿ ಯಲ್ಲಪ್ಪ ಪಟ್ಟಣಕೋಡಿ, ವಿಜಯ್ ಸಂಶಿ, ಈರ್ಪ ಜಕ್ಕಣ್ಣವರ, ಪರಸು ಕೊಣ್ಣೂರ, ಶ್ರೀಶೈಲ್ ಕಳ್ಯಾಗೋಳ, ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಪತ್ರಕರ್ತ ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 