ಆಕ್ಲೆೆಂಡ್,
ಜ 25: ಕೂಲ್ ಕ್ಯಾಪ್ಟನ್
ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ಭವಿಷ್ಯದ ಮಾತಿಗೆ ಪೂರ್ಣ ವಿರಾಮ ಸದ್ಯ ಬೀಳುವಂತೆ ಕಾಣುತ್ತಿಲ್ಲ. ಟೀಮ್ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಎರಡನೇ ಮಾಜಿ ನಾಯಕನ ಕ್ರಿಕೆಟ್ ಬದುಕಿನ ಬಗ್ಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಮುಂಬರುವ
ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾದಲ್ಲಿ ಎಂ.ಎಸ್ ಧೋನಿ
ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆೆ ವಿದಾಯ ಘೋಷಿಸಲಿದ್ದಾಾರೆಂಂದು ರವಿಶಾಸ್ತ್ರಿ ಭವಿಷ್ಯ ನುಡಿದಿದ್ದಾರೆ.
ರಾಂಚಿ
ಆಟಗಾರ ಎಂ.ಎಸ್ ಧೋನಿ
2019ರ ಐಸಿಸಿ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದಾರೆ. ಅಂದಿನಿಂದ ಭಾರತ ತಂಡವಾಡಿದ ಯಾವುದೇ ಸರಣಿಗಳಲ್ಲಿ ಆಡಿಲ್ಲ. ಜತೆಗೆ, ಇತ್ತೀಚೆಗೆ ಬಿಸಿಸಿಐ ಬಿಡುಗಡೆ ಮಾಡಿದ್ದ ರಾಷ್ಟ್ರೀಯ ತಂಡದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಕೂಲ್ ಕ್ಯಾಪ್ಟನ್ ಹೆಸರನ್ನು ಕೈಬಿಡಲಾಗಿತ್ತು. ಇದರೊಂದಿಗೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕನ ಕ್ರಿಕೆಟ್ ಭವಿಷ್ಯ ಇನ್ನೇನು ಮುಗಿದಂತೆ ಎಂದು ಅಭಿಪ್ರಾಯ ಪಟ್ಟಿದ್ದರು.
ಇದೀಗ
ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆೆ ಮತ್ತೊಮ್ಮೆ ತುಟಿ ಬಿಚ್ಚಿರುವ ರವಿಶಾಸ್ತ್ರಿ,‘‘ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ಬಳಿಕ ಧೋನಿ ಭವಿಷ್ಯದ ಎಲ್ಲ ಪ್ರಶ್ನೆೆಗಳಿಗೆ ಉತ್ತರ ಸಿಗಲಿದೆ. ಧೋನಿ ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಯಾವುದೇ ವಿಷಯವನ್ನು ಬೇರೆಯವರ ಮೇಲೆ ಹೇರುವ ವ್ಯಕ್ತಿಯಲ್ಲ. ಧೋನಿ ಅಭ್ಯಾಸ ಆರಂಭಿಸಿದ್ದಾರೊ ಇಲ್ಲವೂ ನನಗೆ ಗೊತ್ತಿಲ್ಲ. ಮುಂದೆ ಐಇಎಲ್ ಇರುವುದರಿಂದ ಅವರು ಅಭ್ಯಾಸ ನಡೆಸುತ್ತಿರಬಹುದು. ಈ ಟೂರ್ನಿಯಲ್ಲಿ ಅವರು
ಲಯಕ್ಕೆೆ ಮರಳದೇ ಹೋದಲ್ಲಿ ಕ್ರಿಕೆಟ್ಗೆ ಗುಡ್ ಬೈ
ಹೇಳಲಿದ್ದಾರೆ,’’ ಎಂದು ಹೇಳಿದ್ದಾರೆ.
‘‘ಅವರು
100 ಟೆಸ್ಟ್ ಪಂದ್ಯಗಳನ್ನು ಆಡಲು ಬಯಸಲಿಲ್ಲ. ಯಾಕೆಂದರೆ ತಮ್ಮ ಮೇಲೆ ಹೇರುವ ವ್ಯಕ್ತಿ ಅವರಲ್ಲ. ಐಪಿಎಲ್ ಗಾಗಿ ಅಭ್ಯಾಸ ಆರಂಭಿಸಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ಆದರೆ ನನಗೆ ಈ ಬಗ್ಗೆೆ ಖಚಿತತೆಯಿದೆ.
ಐಪಿಎಲ್ನಲ್ಲಿ ಆಸಕ್ತಿ ಹೊಂದಿದ್ದರೆ ಅವರು ಸಿದ್ಧವಾಗಿರುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಐಪಿಎಲ್ನಲ್ಲಿ ಕ್ರಿಕೆಟ್ ಆರಂಭಿಸಲಿದ್ದಾರೆ. ಈ ವೇಳೆ ಎಲ್ಲರು
ಅವರನ್ನು ಗಮನಿಸಲಿದ್ದಾರೆ. ಹಾಗೊಂದು ವೇಳೆ ಉತ್ತಮವಾಗಿ ಆಟ ಮೂಡಿ ಬರದಿದ್ದರೆ
‘ ಧನ್ಯವಾದಗಳನ್ನು ಹೇಳಲಿದ್ದಾರೆ ,’ ಎಂದು ಶಾಸ್ತ್ರಿ ಉಲ್ಲೇಖಿಸಿದರು.