ರವಿ ಕಿರಣ್ ಚಲನಚಿತ್ರದ ಭಿತ್ತಿಚಿತ್ರಗಳ ಬಿಡುಗಡೆ


ಹುಬ್ಬಳ್ಳಿ 14:  ಮೈತ್ರಾ ಫಿಲಂಸ್ ಹುಬ್ಬಳ್ಳಿ ಲಾಂಛನದಲ್ಲಿ ಮೂಡಿಬರುತ್ತಿರುವ   ರವಿ ಕಿರಣ್ ಮಕ್ಕಳ ಚಲನ ಚಿತ್ರದ ಭಿತ್ತಿಚಿತ್ರಗಳ(ಪೋಸ್ಟರ್)ನ್ನು ಬುಧವಾರ ನಗರದ ಗೋಕುಲ ರಸ್ತೆಯ ವಿಘ್ನೇಶ್ವ್ವರ ಶಾಲೆಯಲ್ಲಿ  ಬಿಡುಗಡೆ ಮಾಡಲಾಯಿತು.

        ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಆಗಮಿಸಿ, ರವಿಕಿರಣ ಚಿತ್ರವು ಅಂಧ ಮಕ್ಕಳ ಬಾಳಿಗೆ ಬೆಳಕು ನೀಡುವ ಸಂದೇಶ ಹೊಂದಿದ್ದು ನೇತ್ರದಾನ ಮಹಾದಾನ ಎಂಬ ಸಂದೇಶದ ಜೊತೆಗೆ ನೇತ್ರತಜ್ಞರಾದ ಡಾ.ಎಂ.ಎಂ.ಜೋಶಿ ಹಾಗೂ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರ ಸಂದೇಶ ಕೂಡ ಚಿತ್ರದಲ್ಲಿರುವದು ವಿಶೇಷವಾಗಿದೆ ಎಂದರು. 

        ನಿಮರ್ಾಪಕ ಹಾಗೂ ನಟರಾದ ಜೆ.ಜಿ.ಸಂಸ್ಥಾನಮಠ ಮಾತನಾಡಿ ಚಿತ್ರವು ಈ ತಿಂಗಳು 30ರಂದು ಕನರ್ಾಟಕದಾದ್ಯಂತ  ಬಿಡುಗಡೆ   ಮಾಡುತ್ತಿದ್ದೇವೆ. ಈಗಾಗಲೇ ಸೆನ್ಸಾರ್ದಿಂದ ಯು ಸಟರ್ಿಫಿಕೇಟ್ ಪಡೆದಿದೆ. ಸಂಪೂರ್ಣ ಉತ್ತರ ಕನರ್ಾಟಕದಲ್ಲೇ ಚಿತ್ರೀಕರಣ ನಡೆಸಿದ್ದು, ಹುಬ್ಬಳ್ಳಿಯ ಎರಡು ಶಾಲೆಗಳ ವಿದ್ಯಾಥರ್ಿ, ವಿದ್ಯಾಥರ್ಿನಿಯರೂ  ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು,  ಉತ್ತರ ಕನರ್ಾಟಕದ ಕಲಾವಿದರೇ ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದರು.  

ಸಮಾರಂಭದಲ್ಲಿ ಎಸ್.ವಿ.ಕವಲೂರ, ಮಂಜುನಾಥ ಕವಲೂರ, ಶಾಲೆಯ ಅಧ್ಯಕ್ಷ ದಾಕ್ಷಾಯಣಿ ಅಳವಂಡಿ, ರಾಜೇಶ್ವರಿ ಬ್ಯಾಹಟ್ಟಿ, ಐಶ್ವರ್ಯ, ವಾಣಿಶ್ರಿ, ಮೇಘನಾ, ರಮ್ಯ, ಅಕ್ಷತಾ ಚಿತ್ರತಂಡದ ಡಾ. ವೀರೇಶ ಹಂಡಿಗಿ, ಡಾ.ಪ್ರಭು ಗಂಜಿಹಾಳ, ಸುಭಾಷ್ ಪೂಜಾರ, ದಾವಲಸಾಬ ಮುಳಗುಂದ, ಬಾಲನಟರಾದ ಸಾಕ್ಷಿ, ಅಷ್ಟವಿನ್ ಇತರರು ಪಾಲ್ಗೊಂಡಿದ್ದರು. ಮಕ್ಕಳ ದಿನಾಚರಣೆ ಅಂಗವಾಗಿ ನೆಹರೂ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

           ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ, ನಿದರ್ೇಶನ ಗುರುರಾಜ್ ಕಾಟೆ     ಅವರದಿದ್ದು, ಚಿತ್ರದಲ್ಲಿ ನಿಮರ್ಾಪಕ ಜೆ.ಜಿ.ಸಂಸ್ಥಾನಮಠರು ಆಸ್ಪತ್ರೆಯ ವಾರ್ಡಬಾಯ್ ಅಲ್ಲದೆ ಯಮನಪಾತ್ರದಲ್ಲೂ ಅಭೂತ ಪೂರ್ವವಾಗಿ ಅಭಿನಯಿಸಿದ್ದಾರೆ.  ಕಲಾವಿದರೂ ಹಾಗೂ ವೈದ್ಯರಾದ  ಡಾ.ಗೋವಿಂದ ಮಣ್ಣೂರ ಅಂಧನ ಪಾತ್ರ ನಿರ್ವಹಿದ್ದಾರೆ. ಕಲಾವಿದರಾದ ಸಾಕ್ಷಿ, ಅಷ್ಟವಿನ್, ನಂದಿನಿ, ನವೀನ, ಅಶ್ವಿನಿ, ಚನ್ನವೀರಸ್ವಾಮಿ, ಪ್ರಕಾಶ್ ಧೂಳೆ, ಶೇಖರ ಹುಬ್ಬಳ್ಳಿ, ಓಂಕಾರೇಶ, ಶೋಭಾ, ಭಾರತಿ, ಪೂಜಾ, ಸ್ನೇಹ, ಕಾಜಲ, ರೋಸಲಿನ್,  ಆಶ್ರಫ್, ಎನ್. ಭುಜಂಗ್ ಮೋಯ್ಲಿ, ಜಿ.ಸಿ.ಶೇಖರ, ಮಹಾಂತೇಶ್ ವಜ್ರಮಟ್ಟಿ, ಶಫೀ, ಆಯ್.ಆಯ್.ನವಲೂರ, ಅಬ್ದುಲ್ ಮಕಾನದಾರ, ಎಂ.ಆಯ್.ಚಿತ್ತೇವಾಲಿ, ಮಂಜು ಮರಿಹುಚ್ಚಣ್ಣವರ, ಸುಭಾಸ್ ಪೂಜಾರ ಮೊದಲಾದವರು ಅಭಿನಯಿಸಿದ್ದಾರೆ. 

ಜೆ.ಇ.ಶಂಕರ್ ಛಾಯಾಗ್ರಹಣ, ಪ್ರಕಾಶ್ ಅವರ ನೃತ್ಯ, ಅಭಿನಂದನ್ ಪ್ರಸಾಧನ,  ಆಕಾಶ್ ಸಂಗೀತ, ಡಾ.ಪ್ರಭು.ಗಂಜಿಹಾಳ, ಡಾ. ಸಿಮ್ಸ್ ವೀರೇಶ್ ಪತ್ರಿಕಾ ಸಂಪರ್ಕ  ಚಿತ್ರಕ್ಕಿದ್ದು, ವೀರಣ್ಣ ವಿಠಲಾಪೂರ, ದಾವಲಸಾಬ್ ಹಂಚಿನಾಳ ನಿಮರ್ಾಣದ ನಿರ್ವಹಣೆ ಹೊತ್ತಿದ್ದಾರೆ.