ರಥಯಾತ್ರೆ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ
Rath Yatra poster release program
ರಥಯಾತ್ರೆ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ
ತಾಳಿಕೋಟಿ 11: ಅಭಯ ರಾಣಿ ಅಬ್ಬಕ್ಕಳ 500 ನೇ ಜಯಂತೋತ್ಸವ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ 200 ನೇ ವರ್ಷದ ವಿಜಯೋತ್ಸವ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಉತ್ತರ ವಲಯದಿಂದ ಸಪ್ಟಂಬರ್ 19 ರಿಂದ 25 ರವರೆಗೆ ಹಮ್ಮಿಕೊಂಡ ರಥಯಾತ್ರೆಯ ಪೋಸ್ಟರ್ ಗಳನ್ನು ಶ್ರೀ ಬಸವೇಶ್ವರ ವೃತ್ತದಲ್ಲಿರುವ ಜಗಜ್ಯೋತಿ ಬಸವಣ್ಣನವರ ಪ್ರತಿಮೆಯ ಮುಂಭಾಗದಲ್ಲಿ ಸಮಾಜದ ಗಣ್ಯರು ಗುರುವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ನೀಲಮ್ಮಗೌಡತಿ ಪಾಟೀಲ ಅವರು ಮಾತನಾಡಿ ಈ ಇಬ್ಬರು ವೀರ ವನೀತೆಯರ ಶೌರ್ಯ ಮತ್ತು ತ್ಯಾಗವನ್ನು ಸಮಾಜ ಸದಾ ಸ್ಮರಿಸುವಂತಾಗಲು ಎಬಿವಿಪಿ ಸಂಘಟನೆಯು ಹಮ್ಮಿಕೊಂಡಿರುವ ರಥಯಾತ್ರೆ ಕಾರ್ಯಕ್ರಮವು ಶ್ಲಾಘನೀಯವಾದದ್ದು. ಸೆ.21ಕ್ಕೆ ರಥವು ಪಟ್ಟಣಕ್ಕೆ ಬರಲಿದ್ದು ಅದನ್ನು ಎಲ್ಲ ಸಮಾಜದವರು ಕೂಡಿಕೊಂಡು ಅತ್ಯಂತ ವಿಜ್ರಂಭಣೆಯಿಂದ ಸ್ವಾಗತಿಸಿ ಬೀಳ್ಕೊಡಲಾಗುವುದು ಎಂದರು. ಯುವ ಮುಖಂಡ ನಾಗರಾಜ ಬಳಿಗೇರ ಮಾತನಾಡಿ ಎಬಿವಿಪಿ ಸಂಘಟನೆಯ ಪದಾಧಿಕಾರಿಗಳು ಎಲ್ಲರೂ ವಿದ್ಯಾರ್ಥಿ ಯುವಕರಾಗಿರುವದರಿಂದ ಅವರಿಗೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಮ್ಮ ಸಮಾಜದ ಎಲ್ಲ ಹಿರಿಯರ ಸಹಕಾರದ ಅಗತ್ಯವಿದೆ ತಾವೆಲ್ಲರೂ ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ವಿನಂತಿಸುತ್ತೇನೆ ಎಂದರು. ಎಬಿವಿಪಿ ನಗರ ಕಾರ್ಯದರ್ಶಿ ಗುರುರಾಜ ವಠಾರ ಮಾತನಾಡಿ ಸೆ.21ರಂದು ಪಟ್ಟಣಕ್ಕೆ ಆಗಮಿಸಲಿರುವ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲು ತಮ್ಮೆಲ್ಲರ ಸಹಕಾರ ನಮಗೆ ಬೇಕು,ತಾವೆಲ್ಲರೂ ನಮ್ಮ ಆಮಂತ್ರಣವನ್ನು ಸ್ವೀಕರಿಸಿ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಸಂಘಟನೆ ವತಿಯಿಂದ ಅಭಿನಂದಿಸುತ್ತೇನೆ ಎಂದರು. ್ಳ
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ವಿ.ಎಸ್.ಕಾರ್ಚಿ, ವಿ.ವಿ. ಸಂಘದ ಸಹ ಕಾರ್ಯದರ್ಶಿ ಕಾಶಿನಾಥ ಮುರಾಳ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಜೈಸಿಂಗ್ ಮೂಲಿಮನಿ, ಸಜ್ಜನ ಸಮಾಜದ ಉಪಾಧ್ಯಕ್ಷ ತಿಪ್ಪಣ್ಣ ಸಜ್ಜನ, ಸಾಮಾಜಿಕ ಕಾರ್ಯಕರ್ತೆಯರಾದ ಜಗದೇವಿ ಮರತೂರ, ಜ್ಯೋತಿ ಹೊಸಳ್ಳಿ, ಅಕ್ಷತಾ ಚವಾಣ್, ಜ್ಯೋತಿ ಬಡಿಗೇರ, ಭಾಗ್ಯಾ ದೊಡ್ಡಮನಿ, ಭೂಮಿಕಾ ವಂದಾಲ, ಎಬಿವಿಪಿ ಕಾರ್ಯಕರ್ತರಾದ ನವೀನಸಿಂಗ್ ದಡೇದ, ಅಜೀತಸಿಂಗ್ ಗಂಗಾವತಿ, ಶೀತೀಜ ಅಗರವಾಲ, ಅಮಿತಸಿಂಗ್ ರಜಪೂತ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 