ಕಲ್ಲೇಶ್ವರ ಅಜ್ಜನವರ ಪುಣ್ಯರಾಧನೆ ಅಂಗವಾಗಿ ರಥಯಾತ್ರೆ- ಬೈಕ್ರ್ಯಾಲಿ: ಬೆಡಸಗಾವ್ ತಪೋಭೂಮಿಗೆ ಭಕ್ತರ ಭೇಟಿ!
Rath Yatra-Bike Rally as part of the puja of Kalleshwara Ajjan: Devotees visit Bedasagaon Tapobhoom
ಲೋಕದರ್ಶನ ವರದಿ
ಮುಂಡಗೋಡ 08 : ಶ್ರೀ ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳ ಪುಣ್ಯರಾಧನೆ ಕಾರ್ಯಕ್ರಮದ ಅಂಗವಾಗಿ ಕಲ್ಲೇಶ್ವರ ಅಜ್ಜನವರ ರಥಯಾತ್ರೆ ಹಾಗೂ ಸದ್ಭಕ್ತರ ಬೈಕ್ ರ್ಯಾಲಿ ಭಾನುವಾರ ಮಧ್ಯಾಹ್ನ ಬೇಡಸಗಾಂವ ಗ್ರಾಮಕ್ಕೆ ಆಗಮಿಸಿತು. ಬನವಾಸಿಯ ಮಧುಕೇಶ್ವರ ದೇವಸ್ಥಾನದಿಂದ ಆರಂಭವಾದ ಈ ಬೈಕ್ ರ್ಯಾಲಿ ಗುಡ್ನಾಪೂರ ಮಾರ್ಗವಾಗಿ ಕೊರ್ಲಕಟ್ಟಾ, ಬೀಳೂರ, ಬಿಸಲಕೊಪ್ಪ ಮೂಲಕ ಬೇಡಸಾಗಾಂವ ತಲುಪಿತು. ಈ ವೇಳೆ ಭಕ್ತರು ಬೆಡಸಗಾವ್ನ ರಾಮಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಕಲ್ಲೇಶ್ವರ ಮಹಾಸ್ವಾಮೀಜಿಗಳ ತಪೋಭೂಮಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಅನ್ನಪ್ರಸಾದವನ್ನು ಸ್ವೀಕರಿಸಿದರು.
ಮಾರ್ಚ್ 19, 2026ರಂದು ನಡೆಯಲಿರುವ ಕಲ್ಲೇಶ್ವರ ಗುರುಮಠದ ಜಾತ್ರಾ ಮಹೋತ್ಸವಕ್ಕೆ ಭಕ್ತರನ್ನು ಆಹ್ವಾನಿಸುವ ಉದ್ದೇಶದಿಂದ ಈ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಬೇಡಸಗಾಂವ ಪ್ರವೇಶಿಸಿದ ಬಳಿಕ ರ್ಯಾಲಿ ತೋಗರಳ್ಳಿ, ಕುರ್ಲಿ, ಮಳಗಿ ಮಾರ್ಗವಾಗಿ ಸಿರಸಿ ತಾಲೂಕಿನ ಗುರುಮಠ ಅಂಡಗಿ ಮಠದವರೆಗೆ ಸಾಗಲಿದೆ. ಬೆಡಸಗಾಂವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತೀಶ್ ನಾಯ್ಕ್ ಉಮ್ಮುಡಿ, ಶಶಿ ಉಮ್ಮುಡಿ, ಉಮಾಕಾಂತ್ ನಾಯ್ಕ್ ಕುಪ್ಪಳ್ಳಿ, ವಿಧ್ಯಾಧರ ಮಾಳಂಜಿ, ಚಂದ್ರು ಮರಗುಂಡಿ, ಸುನಿಲ್ ಅಂಡಗಿ, ಸಂತೋಷ್ ಬಿಳೂರು, ಜನಾರ್ಧನ್ ಕಲಕರಡಿ, ಹರೀಶ್ ಕಂಡ್ರಾಜಿ, ಪವನ್ ಮತ್ತಿಹಳ್ಳಿ, ರಘುಪತಿ ಭಾಶಿ, ಸುರೇಶ್ ಕ್ಯಾದಗಿಕೊಪ್ಪ, ಮಹೇಶ್ ನಾಯ್ಕ್ ಕಾಂಡ್ರಾಜಿ (ವಕೀಲರು), ಗಣೇಶ್ ನಾಯ್ಕ್ ಮಳಲಗಾಂವ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 