ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವೆಟ್ ಲಿಪ್ಟಿಂಗ್ ಚಾಂಪಿಯನ್ಶಿಪ್

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವೆಟ್ ಲಿಪ್ಟಿಂಗ್ ಚಾಂಪಿಯನ್ಶಿಪ್  Rani Channamma University Weightlifting Championship

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವೆಟ್ ಲಿಪ್ಟಿಂಗ್ ಚಾಂಪಿಯನ್ಶಿಪ್  

ಬೆಳಗಾವಿ 25: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಹಾಗೂ ಅಂಜುಮಾನ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೆಳಗಾವಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಏಕವಲಯ ವೆಟ್ ಲಿಪ್ಟಿಂಗ್  ಪಂದ್ಯಾವಳಿಯಲ್ಲಿ ಲಿಂಗರಾಜ ಮಹಾವಿದ್ಯಾಲಯ ಒಟ್ಟು 38 ಅಂಕಗಳೊಂದಿಗೆ ಪಂದ್ಯಾವಳಿಯ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು.   ಪುರುಷರ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ, ಒಂದು ಬೆಳ್ಳಿ ಪದಕ, ಒಂದು ಕಂಚಿನ ಪದಕ ಪಡೆದು 19 ಅಂಕದೊಂದಿಗೆ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಹಿಳೆಯರ ವಿಭಾಗದಲ್ಲಿ ಎರಡು ಚಿನ್ನದ ಪದಕ ಮೂರು ಬೆಳ್ಳಿ ಪದಕ ಪಡೆದರು.  

ಬಿ.ಕಾಂ ಐದನೇ ಸೆಮಿಸ್ಟರ್ನ ಕಾವ್ಯಾ ಮೊಕಾಶೀ, ಬಿ.ಎ ಐದನೇ ಸೆಮಿಸ್ಟರ್ನ ಚನ್ನವೀರೇಶ ಹಿಕ್ಕಿಮಠ, ಬಿ.ಎ ಮೂರನೇ ಸೆಮಿಸ್ಟರ್ನ ಸಿ ಶಿವಮಣಿ ಯುನಿವರ್ಸಿಟಿ ಬ್ಲೂ ಪ್ರಶಸ್ತಿ ಪಡೆದುಕೊಂಡರು.  ಮಹಿಳೆಯರ ವಿಭಾಗದಲ್ಲಿ ಲಕ್ಮ್ಷೀ ಕಾಂಬಳೇ 48 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಅನಿತಾ ದಡ್ಡಿ53 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಕಾವ್ಯಾ ಮೊಕಾಶಿ 58 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಸ್ಪುರಾ ನಾಯಿಕ್ 77 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ,  ಶೈಲಾ ಅರ್ಜುನಗಿ 86 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡರು.  

ಪುರುಷರ ವಿಭಾಗದಲ್ಲಿ ಪ್ರವೀಣ ಕುದ್ರಿಮೋತಿ 60 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ, ಸಂಜಯ ಪಾಟೀಲ 65 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ, ಸಿ ಶಿವಮಣಿ 71 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, ಸೌರಭ ಪಾಟೀಲ  88 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ,  ಪ್ರಜ್ವಲ್ ಹಲ್ಲೋಳ್ಳಿ 110 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ, 110 ಕೆ.ಜಿ ಮೇಲ್ಪಟ್ಟ ವಿಭಾಗದಲ್ಲಿ ಚನ್ನವೀರೇಶ್ ಹಿಕ್ಕಿಮಠ ಚಿನ್ನದ ಪದಕ ಪಡೆದುಕೊಂಡರು.  ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ ದೈಹಿಕ ಶಿಕ್ಷಣ ನಿರ್ದೇಶಕ ಡಾಚಿ.ರಾಮಾ ರಾವ್ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ಅಭಿನಂದಿಸಿದರು.