ಗುರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರಾಮೋತ್ಸವ: ಪುಣ್ಯ ಜಟೋತ್ಸವ
ಮಹಾಲಿಂಗಪುರ 23: ಕಳೆದ ವರ್ಷ ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೊಂಡ ವರ್ಷಾಚರಣೆ ಸವಿ ನೆನಪಿನಲ್ಲಿ ಬುಧವಾರ ಪಟ್ಟಣದ ಗುರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ಥಳೀಯ ಮಂತ್ರಾಲಯ ಪಾದ ಯಾತ್ರಾ ಕಮಿಟಿ ವತಿಯಿಂದ ರಾಮೋತ್ಸವ ಪ್ರಯುಕ್ತ ಮಹಾಲಿಂಗೇಶ್ವರರ ಪುಣ್ಯ ಜಟೋತ್ಸವ ಕಾರ್ಯವು ಪೀಠಾಧಿಪತಿ ರಾಜೇಂದ್ರ ಮಹಾಸ್ವಾಮಿಗಳಿಂದ ನೆರೆವೇರಿತು.
ಈ ಕಾರ್ಯಕ್ರಮಕ್ಕೆ ಗೋಕಾಕ ತಾಲೂಕಿನ ಕುಲಗೋಡ ಗ್ರಾಮದಿಂದ ನೂರಾರು ಹಣುಮ ಮಾಲಾಧಾರಿಗಳು ಬಾಲರಾಮನ ಮೂರ್ತಿಯನ್ನು ಹೊತ್ತು ತಂದರು. ಬಸವೇಶ್ವರ ವೃತ್ತಕ್ಕೆ ಆಗಮಿಸಿದ ರಾಮನ ಮೂರ್ತಿಗೆ ಸ್ಥಳೀಯ ಭಕ್ತರು ಅದ್ಧೂರಿ ಸ್ವಾಗತ ನೀಡಿ ಅಲ್ಲಿಂದ ಜೋಡು ರಸ್ತೆ ಮೂಲಕ ನಡುಚೌಕಿ ಮಾರ್ಗದೊಂದಿಗೆ ಮಾಲಾಧಾರಿಗಳು ರಾಮ ಘೋಷ ಮೊಳಗಿಸುತ್ತ ಗುರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರೆ ತಂದರು.
ಬುಧವಾರ ಮಠದಲ್ಲಿ ಪಾದಯಾತ್ರೆ ಕಮಿಟಿ ವತಿಯಿಂದ ಸದ್ಭಕ್ತರಿಗೆ ಮುಂಜಾನೆ ಉಪಹಾರ ಮಧ್ಯಾಹ್ನ ಸಜ್ಜಕ, ಅನ್ನ ಸಾರು ಪೂರೈಸಲಾಯಿತು. ಈ ಸಮಯದಲ್ಲಿ ಕಮಿಟಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಊರಿನ ಸಾರ್ವಜನಿಕರು ಉಪಸ್ಥಿತರಿದ್ದರು.