ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ
Raksha Bandhan celebration at Ghanmatheshwar Educational Institute
ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ಆಚರಣೆ
ತಾಳಿಕೋಟೆ 10: ಪಟ್ಟಣದ ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಾ ಬಂಧನ ನಿಮಿತ್ಯ ಸೋಮವಾರ 9ರಂದು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ ಅವರು ಮಾತನಾಡಿ ಶ್ರಾವಣ ಮಾಸದ ಪೂರಣಾ ತಿಥಿಯಂದು ನಡೆಯುವ ರಕ್ಷಾ ಬಂಧನವು ಸಹೋದರಿಯು ತಮ್ಮ ಸಹೋದರನಿಗೆ ಉತ್ತಮ ಆರೋಗ್ಯ, ಅಭಿವೃದ್ಧಿ ಹಾಗೂ ಯಶಸ್ಸು ಬೇಕು ಎಂಬ ಹಾರೈಕೆಯನ್ನು ವ್ಯಕ್ತಪಡಿಸುವ ಅವಕಾಶವಾಗಿದೆ. ಅದರ ಜೊತೆಗೆ, ಸಹೋದರರು ತಮ್ಮ ಸಹೋದರಿಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಪ್ರತಿಜ್ಞೆ ಮಾಡುತ್ತಾರೆ. ಭಾರತದ ಪರಂಪರೆಯಲ್ಲಿ ಹೆಚ್ಚು ಗೌರವವಾದ ಹಬ್ಬವಾದ ರಕ್ಷಾ ಬಂಧನ, ಸಹೋದರಿಯು ತಮ್ಮ ಸಹೋದರನಿಗೆ ರಕ್ಷಾ ಬಂಧನದ ತಂತಿ (ರಾಖಿ) ಹಚ್ಚುವ ಮೂಲಕ ಪ್ರೀತಿಯ ಮತ್ತು ರಕ್ಷಣೆಯ ಸಂಬಂಧವನ್ನು ಹಬ್ಬಿಸುತ್ತದೆ
ಎಲ್ಲಾ ಮಕ್ಕಳು ರಾಖಿ ಕಟ್ಟುವ ಮೂಲಕ ಹಬ್ಬವನ್ನು ಆಚರಿಸಿದರು. ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರು ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಆಯ್.ಟಿ.ಆಯ್.ಕಾಲೇಜ್ ರಾಜು ಹಜೇರಿ, ಸವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 