ನವದೆಹಲಿ, ಅ 22: ಕಾಂಗ್ರೆಸ್ನ ಮಾಜಿ ರಾಜ್ಯಸಭಾ ಸದಸ್ಯ ಕೆ ಸಿ ರಾಮಮೂರ್ತಿ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಸಿಂಗ್, ಭೂಪೇಂದ್ರ ಯಾದವ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೀತಿಗಳನ್ನು ಶ್ಲಾಘಿಸಿದ ರಾಮಮೂರ್ತಿ, ಮೋದಿ ಅವರ ಯೋಜನೆಗಳು ದೇಶಾದ್ಯಂತ ಯಶಸ್ವಿಯಾಗಿ ಗೌರವಿಸಲ್ಪಟ್ಟಿವೆ ಎಂದು ಸಮಥರ್ಿಸಿಕೊಂಡರು.
ಸೇರ್ಪಡೆಯಾದ ನಂತರ ರಾಮಮೂರ್ತಿ ಪಕ್ಷದ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ
ಅವರನ್ನು ಭೇಟಿಯಾದರು. ರಾಮಮೂರ್ತಿ ಅವರು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದರು.