ರಾಜೇಂದ್ರ ಸಣ್ಣಕ್ಕಿ ಸಾಧನೆ ಶೂನ್ಯ!

ಮುಗಳಖೊಡ, 19: ಡಾ. ರಾಜೇಂದ್ರ ಸಣ್ಣಕ್ಕಿಯವರು ಕನರ್ಾಟಕ ಪ್ರದೇಶದ ಕುರುಬರ ಸಂಘದ ಅಧ್ಯಕ್ಷರಾಗಿ ಕೆಳದ ಐದು ವರ್ಷಗಳ ಕಾಲ ಸಂದಿದ್ದೆ. ಸೋಜಿಗವೆಂದರೆ ರಾಜಾಧ್ಯಕ್ಷರಾಗಿಯೂ ಹಾಗೂ ಬೆಳಗಾವಿ ಜಿಲ್ಲೆ ಕುರುಬ ಸಂಘದ ಅಧ್ಯಕ್ಷರಾಗಿಯೂ ಏಕಕಾಲದಲ್ಲಿ ಎರಡು ಹುದ್ದೆಯಲ್ಲಿಯೂ ಮುಂದು ಮುಂದುವರೆಸಿದ್ದಾರೆ, ಆದರೆ ಇವರ ಸಾಧನೆ ಮಾತ್ರ ಶೂನ್ಯವಾಗಿದೆ. 

      ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಸಮಾಜದ ಯುವಕರು ಆಗ್ರಹಿಸುತ್ತಿದ್ದಾರೆ. ಹಿಂದುಳಿದ ಉತ್ತರ ಕನರ್ಾಟಕದಿಂದ ರಾಜ್ಯಾಧಕ್ಷರಾಗಿ ಆಯ್ಕೆಯಾಗದ ಸಣ್ಣಕ್ಕಿಯವರು ಕುರುಬ ಸಮಾಜದ ಬಹುದಿನಗಳ ಬೇಡಿಕೆ ಕುರಿತು ಹೋರಾಟ ರೂಪಿಸುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು, ಆದರೆ ಅವರು ಅಪ್ಪಿ ತಪ್ಪಿಯು ಈ ಕುರಿತು ಪ್ರಯತ್ನಿಸುವ ಗೊಡವೆಗೆ ಹೋಗದಿರುವದು ಸಮಾಜದ ದೌಭರ್ಾಗ್ಯವಾಗಿದೆ. ಇವರು ಕುರುಬ ಸಮಾಜದ ಯುವಕರ ಭವಿಷ್ಯದ ಬಗ್ಗೆ ಚಿಂತನೆ ಮಾಡುವ ಬದಲು ಸದಾಕಾಲ ತಾವೇ ರಾಜಕೀಯ ಅಧಿಕಾರದಲ್ಲಿ ಮುಂದುವರೆಯುವ ಕುರಿತು ಚಿಂತಿಸುತ್ತಾರೆ.ಇವರು , ಸಿದ್ದರಾಮಯ್ಯನವರಿಗೆ ಮಂಕು ಬುದಿ ಎರಚಿ ಕಾಂಗ್ರೆಸ್ ಕೊಟಾದಲ್ಲಿ ಕೃಷಿ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿರುತ್ತಾರೆ. ಆದರೆ ವಿಧಾನ ಸಭೆ ಚುನಾವಣಾ ಬಂದಾಗ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಾರೆ. ಇವರು ಊಸರವಳ್ಳಿಯ ತರಹ ಬಣ್ಣ ಬದಲಾಯಿಸುವ ವ್ಯಕ್ತಿಯಾಗಿದ್ದಾರೆ. ತನಗೆ ಅಧಿಕಾರ ಬೇಕಾದಾಗ ಸಿದ್ದರಾಮಯ್ಯನವರ ಕಾಲು ಹಿಡಿಯುತ್ತಾರೆ. ಆನಂತರ ಇವರು ಕವಡೆ ಕಾಸಿನ ಕಿಮತು ಇಲ್ಲದ ಹಾಗೆ ನೋಡುವದು ಇವರ ಗುಣವಾಗಿದೆ. 

      ರಾಜ್ಯ ಕುರುಬ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಪೂರ್ವದಲ್ಲಿ ಬೆಳಗಾವಿ ಜಿಲ್ಲೆಯ ಕುರುಬ ಸಂಘ ಅಧ್ಯಕ್ಷರಾಗಿದ್ದ ಸಣ್ಣಕ್ಕಿಯವರು ರಾಜ್ಯಾಧಕ್ಷರಾದ ನಂತರ ಜಿಲ್ಲಾಧ್ಯಕ್ಷರ ಹುದ್ದೆಗೆ ರಾಜೀನಾಮೆ ಕೊಡುವರು ಎಂದು ನಿರೀಕ್ಷಿಸಲಾಗಿತ್ತು ಆದರೆ, ಇದುವರೆಗೆ ಅವರು ರಾಜೀನಾಮೆ ನೀಡದೆ ಇರುವದು ಅವರ ಅಧಿಕಾರದ ದಾಹವನ್ನು ತೊರಿಸುತ್ತದೆ. 

      ಜಿಲ್ಲಾಧಕ್ಷರಾಗಲು ಬೆಳಗಾವಿ ಜಿಲ್ಲೆಯಲ್ಲಿ ಸಮರ್ಥ ವ್ಯಕ್ತಿಗಳು ಇಲ್ಲವೆಂದು ಅವರು ಹೇಳಿಕೊಂಡು ತಿರಗಾಡುತ್ತಿರುವದು ಇಡೀ ಸಮಾಜಕ್ಕೆ ಮಾಡಿದ ಅಪ ಪ್ರಚಾರವಾಗಿದೆ, ಸಮಾಜದಲ್ಲಿ ಅನೇಕ ದಕ್ಷ ಪ್ರತಿಭಾವಂತ ಮತ್ತು ಅನುಭವಿ ಯುವಕರು ಮತ್ತು ಹಿರಿಯರು ಇದ್ದು ಅವರನೆಲ್ಲ ನಿರ್ಲಕ್ಷತ್ತಿರುವದು ಅಕ್ಷಮ್ಯ ಅಪರಾದವಾಗಿದೆ. ಸಣ್ಣಕ್ಕಿಯವರು ರಾಜ್ಯಾದಕ್ಷರಾದ ಮೇಲೆ ಉತ್ತರ ಕನರ್ಾಟಕದ ಕುರುಬರ ಬೇಡಿಕಗಳಾದ ಶ್ರೀ ರೇವಣಸಿದ್ದೆಶ್ವರ ಸ್ಮಾರಕ ಪ್ರಾಧಿಕಾರ ಮತ್ತು ಶ್ರೀ ಅಮೊಘಸಿದ್ದೇಶ್ವರ ಪ್ರಾಧಿಕಾರ ರಚನೆ ಕುರಿತು ಪ್ರಯತ್ನಿಸುವವರೆಂದು ನಿರೀಕ್ಷಿಸಲಾಗಿತ್ತು ಈ ಕುರಿತು ಅವರು ಈವರೆಗೂ ಚಕಾರವೇತದಿರುವದು ಸೋಜಿಗವಾಗಿದೆ. ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ರಚನೆಯಲ್ಲೂ ಇವರ ಪಾತ್ರ ಶೂನ್ಯವಾಗಿದೆ ಇಂತವರು ಮತ್ತೊಮ್ಮೆ ಕನರ್ಾಟಕ ಪ್ರದೇಶ ಕುರುಬರ ಸಂಘದ ಚುನಾವಣೆಗೆ ಸಿದ್ದತೆ ನಡೆಸಿರುವದು ಖಂಡನಿವಾಗಿದೆ. ಸಮಾಜ ಬಾಂಧವರು ಸಹಕರಿಸಬಾರದೆಂದು ಈ ಮೂಲಕ ಅಗ್ರಹಿಸುತ್ತೆವೆಂದು ಸಂಗೊಳ್ಳಿ ರಾಯಣ್ಣ ಸ್ಮಾರಕ ಪ್ರಾಧಿಕಾರ ಹೋರಾಟ ರಚನಾ ಸಮಿತಿ ಬೆಳಗಾವಿ, ಬಾಳು ತೇರದಾಳ, ಎಲ್ಲಾ ಸದಸ್ಯರು ಸಂಗೊಳ್ಳಿ ರಾಯಣ್ಣ ಕಛೇರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.