ನವದೆಹಲಿ, ಏ 22 ಯುದ್ಧವಿಮಾನ ಖರೀದಿ ಒಪ್ಪಂದ ಕುರಿತು ಸುಪ್ರೀಂಕೋಟರ್್ ಆದೇಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು 'ಚೌಕಿದಾರ್ ಚೋರ್ ಹೈ' ಎಂದು ಟೀಕಿಸಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ. ರಾಹುಲ್ ಗಾಂಧಿಯವರು ಪ್ರಧಾನಿಯವರನ್ನು 'ಚೋರ್' ಎಂದು ಕರೆದಿರುವುದರ ವಿರುದ್ಧ ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ ಸುಪ್ರೀಂಕೋಟರ್್ ಮೆಟ್ಟಿಲೇರಿದ್ದರು. ಈ ಸಂಬಂಧ ಜವಾಬು ನೀಡಿರುವ ರಾಹುಲ್, ಚುನಾವಣಾ ಪ್ರಚಾರದ ಕಾವಿನಲ್ಲಿ ಈ ಬಗೆಯ ಹೇಳಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ರಾಹುಲ್ ಅವರ 'ಚೌಕಿದಾರ್ ಚೋರ್ ಹೈ' ಹೇಳಿಕೆ ಕುರಿತು ಮುಖ್ಯ ನ್ಯಾಯಮೂತರ್ಿ ರಂಜನ್ ಗೊಗೊಯ್ ನೇತೃತ್ವದ ಪೀಠ ನಾಳೆ ಮಂಗಳವಾರ ವಿಚಾರಣೆ ನಡೆಸಲಿದೆ. ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ದಾಖಲೆಗಳ ಮರು ಪರಿಶೀಲನೆಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಒಪ್ಪಂದದಲ್ಲಿ ದೋಷವಿರುವ ಕಾರಣದಿಂದಲೇ ನ್ಯಾಯಾಲಯ ಮರು ಪರಿಶೀಲನೆಗೆ ಆದೇಶಿಸಿದೆ. ಈ ಆದೇಶದಿಂದ ಪ್ರಧಾನಿ, ಚೌಕಿದಾರ್ ಮೋದಿಯವರೇ ಚೋರ್ ಎಂಬುದು ಸ್ಪಷ್ಟವಾಗಿದೆ ಎಂದು ಅಮೇಥಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ್ದರು. ರಾಹುಲ್ ಅವರ ಈ ಹೇಳಿಕೆ ಪ್ರಶ್ನಿಸಿ ಮೀನಾಕ್ಷಿ ಲೇಖಿ ಸುಪ್ರೀಂಕೋಟರ್್ ಮೆಟ್ಟಿಲೇರಿದ್ದು, ನ್ಯಾಯಾಂಗದ ಆದೇಶವನ್ನು ಪ್ರಧಾನಿ ವಿರುದ್ಧದ ಟೀಕೆಗೆ ಬಳಸಿರುವ ಕಾರಣ ಕ್ರಿಮಿನಲ್ ನ್ಯಾಯಾಂಗ ನಿಂದನೆ ಆರೋಪ ದಾಖಲಿಸುವಂತೆ ಮನವಿ ಮಾಡಿದ್ದಾರೆ.