ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ರಾಪ್ಟಿಂಗ್ ಜಲಕ್ರೀಡೆಗೆ ಅನುಮತಿ
Rafting water sports permitted with a view to developing tourism
ದಾಂಡೇಲಿ ಫೇ 8 : ಕಾಳಿನದಿಯ ತೀರದಲ್ಲಿರುವ ಗಣೇಶಗುಡಿಯಿಂದ ಮೌಳಂಗಿಯವರೆಗೆ ಕಳೆದ 20 ವರ್ಷಗಳಿಂದ ರಾಪ್ಟಿಂಗ್ ಜಲಕ್ರೀಡೆಯನ್ನು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಂಗಲ್ ಲಾಡ್ಜಸ್‌ನವರು ರಾಪ್ಟಿಂಗ್ ಜಲಕ್ರೀಡೆಯನ್ನು ನಡೆಸಿಕೊಂಡು ಬಂದಿದೆ. ಪ್ರವಾಸೋದ್ಯಮದ ಅಭಿವೃದ್ದಿಯ ದೃಷ್ಟಿಯಿಂದ ಜಿಲ್ಲಾಡಳಿತದಿಂದ ಖಾಸಗಿಯವರಿಗೂ ಸೂಕ್ತ ದಾಖಲೆಗಳನ್ನು ಪರೀಶೀಲಿಸಿ ಷರತ್ತುಗಳನ್ನು ವಿಧಿಸಿ, ಸರ್ಕಾರಕ್ಕೆ ಆದಾಯ ಬರುವಂತೆ ಮಾಡಿ ಅನುಮತಿಯನ್ನು ನೀಡಲಾಗಿದೆ. ಇದರೊಟ್ಟಿಗೆ ಶಾರ್ಟ ರಾಪ್ಟಿಂಗ್, ಮಿಡ್ ರಾಪ್ಟಿಂಗ್, ಬೋಟಿಂಗ್ ಮತ್ತಿತರೆ ಜಲಕ್ರೀಡೆಗಳು ಹಲವಾರು ವರ್ಷಗಳಿಂದ ಕಾಳಿನದಿಗುಂಟ ನಡೆದಿದೆ. ಈ ಜಲಕ್ರೀಡೆಗಳು ಪ್ರವಾಸಿಗರನ್ನ ಆಕರ್ಷಿಸುತ್ತಿದ್ದು ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ರಲು ಕಾರಣವಾಗಿದೆ.
ಕೆಲವರ್ಷಗಳ ಹಿಂದೆ ಬೇಕಾಬಿಟ್ಟಿಯಾಗಿ ನಡೆಯುತ್ತಿದ್ದ ಜಲಕ್ರೀಡೆಗಳಿಗೆ ಕಾರವಾರದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ದಿ ಸಮಿತಿಯಿಂದ ಕೆಲ ಮಾರ್ಗಸೂಚಿಗಳನ್ನು ರಚಿಸಿ ಅನುಷ್ಠಾನಕ್ಕೆ ತರಲಾಗಿದೆ. ಆದರೂ ಕೆಲ ರೆಸಾರ್ಟ ಮಾಲೀಕರು ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಆಕ್ರಮ ರಾಪ್ಟಿಂಗ್‌ನಲ್ಲಿ ತೊಡಗಿರುವದು ಕಂಡು ಬಂದಿದೆ. 9 ಕಿ.ಮಿ ರಾಪ್ಟಿಂಗ್‌ನಲ್ಲಿ ಕಳೆದ 20 ವರ್ಷಗಳಿಂದ ಪಾರುಪತ್ಯ ಮೆರೆದ ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜಸ್ ್ಘ ರೆಸಾರ್ಟನವರು ಗಣೇಶಗುಡಿ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಕಾಳಿ ತೀರದಲ್ಲಿ ರಾಪ್ಟಿಂಗ್ ಪ್ರಾರಂಭಿಸಿ ಮೌಳಂಗಿಯ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ರಾಪ್ಟ್ ಬೋಟನ್ನು ಎತ್ತಲಾಗುತ್ತಿದೆ. ಖಾಸಗಿಯವರಿಗೆ ಜಿಲ್ಲಾಡಳಿತ ಖಾಸಗಿ ಒಡೆತನದ ವಾಣಿಜ್ಯೊದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡ ಜಮೀನಿನ ಕಾಳಿ ನದಿ ತೀರದಲ್ಲಿ ರಾಪ್ಟಿಂಗ್ ಪ್ರಾರಂಭಿಸಲು ಅನುಮತಿಸಿದ್ದು, ಮೌಳಂಗಿಯ ವಾಣಿಜ್ಯೊದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡ ಜಮೀನಿನಲ್ಲಿ ರಾಪ್ಟ್ ಬೋಟ್‌ನ್ನು ಎತ್ತಲಾಗುತ್ತದೆ.
ಇದು ಕಾನೂನುಬದ್ದವಾಗಿದೆ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಷರತ್ತುಗಳನ್ನು ವಿಧಿಸಿ ಸರ್ಕಾರಿ ಶುಲ್ಕ ಪಡೆದು ಕರಾರುನಾಮೆ ಮಾಡಿ ಅನುಮತಿ ನೀಡಿದೆ. ಇತ್ತಿಚೆಗೆ ಜಂಗಲ್ ಲಾಡ್ಜ್ ರಾಪ್ಟಿಂಗ್ ನಡೆಸಲು ಮೂರನೇ ವ್ಯಕ್ತಿಗೆ ಟೆಂಡರ್ ಕರೆದಿದ್ದು, ಸ್ಥಳೀಯ ಸಂಸ್ಥೆಯೊಂದು ಟೆಂಡರ್ ಪಡೆದಿದೆ. ಈ ಸಂಸ್ಥೆಯ ವ್ಯಕಿ,್ತ ಜಂಗಲ್ ಲಾಡ್ಜ್ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯವರು ಸೇರಿ ಖಾಸಗಿಯವರಿಗೆ ಜಿಲ್ಲಾಡಳಿತ ನೀಡಿರುವ ರಾಪ್ಟಿಂಗ್ ರದ್ದು ಪಡಿಸುವಂತೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಹಾರ್ನಬಿಲ್‌ಗಳ ಸುರಕ್ಷತೆ, ಅವುಗಳ ಆವಾಸ ಸ್ಥಾನಕ್ಕೆ ತೊಂದರೆಯಾಗುತ್ತಲಿದೆ ಎಂಬ ಕಾರಣ ತೋರಿಸಿ ಖಾಸಗಿಯವರ ರಾಪ್ಟಿಂಗ್ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಕಳೆದ 20 ವರ್ಷಗಳಿಂದ ಜಂಗಲ್ ಲಾಡ್ಜ್‌ನವರು ರಾಪ್ಟಿಂಗ್ ನಡೆಸುತ್ತಿದ್ದರೂ ಹಾರ್ನಬಿಲ್‌ಗಳ ಆವಾಸ ಸ್ಥಾನಕ್ಕೆ, ಸುರಕ್ಷತೆಗೆ ಧಕ್ಕೆಯಾಗಿಲ್ಲವೇ ಎಂದು ಪ್ರವಾಸೋದ್ಯಮಿಗಳು ಪ್ರಶ್ನಿಸುತ್ತಿದ್ದಾರೆ.
ಟೆಂಡರ್ ಪಡೆದ ಮೂರನೇ ವ್ಯಕ್ತಿಗೆ ರೆಸಾರ್ಟ, ಜಲಕ್ರೀಡೆಗಳ ಜಟ್ಟಿಯನ್ನು ಹೊಂದಿದ್ದು ತಾವೊಬ್ಬರೇ ರಾಪ್ಟಿಂಗ್ ದಂಧೆ ನಡೆಸಬೇಕು ಎನ್ನುವ ಮನೋಭಾವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಒಡೆತನದ ಜಲಕ್ರೀಡೆ ಮಾಡುವವರಿಗೆ ತೊಂದರೆ ನೀಡುತ್ತಿರುವದಾಗಿ ಆಪಾದಿಸಲಾಗಿದೆ. ಶಿಸ್ತುಬದ್ದ ಪ್ರವಾಸೋದ್ಯಮ ಬೆಳೆಯುವುದರೊಂದಿಗೆ ಎಲ್ಲರೂ ವಿವಾದಗಳಿಲ್ಲದೇ ಬದುಕು ನಡೆಸುವಂತಹ ರೀತಿಯಲ್ಲಿ ಪ್ರವಾಸೋದ್ಯಮ ಸಮಿತಿಯ ಮಾರ್ಗಸೂಚಿಗಳಿರಲಿ ಎಂದು ಒತ್ತಾಯಿಸಿದ್ದಾರೆ. ಇದು ಸಾವಿರಾರು ಜನರ ಬದುಕಿನ ಪ್ರಶ್ನೆಯಾಗಿದ್ದು ಪ್ರವಾಸೋದ್ಯಮವನ್ನೇ ನಂಬಿ ದಾಂಡೇಲಿ ಜೋಯಿಡಾ ಸುತ್ತಮುತ್ತಲಿನ ಜನ ಅವಲಂಬಿತರಾಗಿದ್ದಾರೆ. ಜಿಲ್ಲಾಡಳಿತ ಪರೀಶೀಲನೆಯಿಂದ ಕ್ರಮ ಜರುಗಿಸಿ ಸ್ಥಳೀಯ ಪ್ರವಾಸೋದ್ಯಮ ಜಲಕ್ರೀಡೆಗಳು ಶಿಸ್ತುಬದ್ದವಾಗಿ ನಡೆಯುವಂತೆ ಗಮನ ಹರಿಸಬೇಕಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 