ರಾಚವಿವಿ ಹಾಕಿ ಅಂತರ್ ಕಾಲೇಜುಗಳ ಪಂದ್ಯಾವಳಿ
Rachavuvy Hockey Inter-College Tournament
ಬೆಳಗಾವಿ 19: ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಅಂತರ್ ಕಾಲೇಜುಗಳ ಏಕವಲಯದ ಮಹಿಳಾ ಹಾಗೂ ಪುರುಷ ಹಾಕಿ ಪಂದ್ಯಾವಳಿ ಗಳು ಆರ್. ಪಿಡಿ ಕಾಲೇಜಿನ ಕ್ರೀಡಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿ ಒಕ್ಕೂಟಗಳ ಸಂಯೋಜನೆಯಲ್ಲಿ ಇಂದು ಬೆಳಗಾವಿಯ ಆರ್. ಪಿ. ಡಿ. ಮಹಾವಿದ್ಯಾಲಯದ ಮೈದಾನದಲ್ಲಿ ಆರಂಭಗೊಂಡವು.
ಪಂದ್ಯಾವಳಿಗಳ ಉದ್ಘಾಟನೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್. ಪಿ. ಡಿ. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾದ ಆನಂದ ಸರಾಫ್ ಅವರು ಪಂದ್ಯಗಳನ್ನು ಉದ್ಘಾಟಿಸಿ ಸದೃಢ ಶರೀರ ಮತ್ತು ಮನಸ್ಸಿಗೆ ಕ್ರೀಡೆಗಳು ತುಂಬಾ ಅಗತ್ಯವಾದವುಗಳು, ಹಾಕಿ ಆಟದಲ್ಲಿ ಧ್ಯಾನಚಂದ್ ರವರು ಮಾಡಿದ ಸಾಧನೆ ಬಹಳ ದೊಡ್ಡದು. ವಿದ್ಯಾರ್ಥಿಗಳು ಕ್ರೀಡೆ ಯಲ್ಲಿಯೂ ಸಾಧನೆ ಮಾಡಿ ಕೀರ್ತಿ ಗಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ. ಅಭಯ ಪಾಟೀಲ ಅವರು ವಹಿಸಿದ್ದರು. ಸಂಯೋಜಕ ಡಾ. ರಾಮಕೃಷ್ಣ ಎನ್. ಡಾ. ಎಸ್. ಎಚ್. ಪಾಟೀಲ್, ಪ್ರಶಾಂತ್ ಮಾಂಕಾಳೆ, ಹಾಗೂ ಬೆಳಗಾವಿ, ವಿಜಯಪುರ ಮತ್ತು ಚಿಕ್ಕೋಡಿ ವಿಭಾಗದ ವಿವಿಧ ಕಾಲೇಜುಗಳಿಂದ ಆಗಮಿಸಿದ ಕ್ರೀಡಾ ಪಟುಗಳು, ತರಬೇತುದಾರರು, ಅನೇಕ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇಂದು ಸಂಜೆ ಪಂದ್ಯಾವಳಿಗಳ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವೂ ಜರುಗಲಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 