ಅರ್‌ಎಸ್ ಎಸ್ ಪಥ ಸಂಚಲನ : ಭಾರತೀಯತೆ ಬಿಂಬಿಸಿದ ಗಣವೇಶಧಾರಿಗಳು
RSS roadshow: Ganesh wearers portray Indian identity
ಅರ್‌ಎಸ್ ಎಸ್ ಪಥ ಸಂಚಲನ : ಭಾರತೀಯತೆ ಬಿಂಬಿಸಿದ ಗಣವೇಶಧಾರಿಗಳು
ರಾಣೆಬೆನ್ನೂರು: 27 ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರು ವರ್ಷಗಳ ಆಕರ್ಷಕ ಪಥ ಸಂಚಲನವು ಅತ್ಯಂತ ಭಕ್ತಿ ಭಾವದೊಂದಿಗೆ ಅದ್ದೂರಿಯಾಗಿ ಜರುಗಿತು. ಭಾರತ ಮತ್ತು ಸಂಸ್ಕೃತಿ ಕುರಿತಂತೆ ಆರ್ ಎಸ್ ಎಸ್ ಅಂತರ ರಾಜ್ಯಗಳ ಸಂಚಾಲಕ ಶ್ರೀಧರ ಸ್ವಾಮಿ, ತಮ್ಮ ಬೌದ್ಧಿಕ ಮಾತನಾಡಿದರು. ಸಂಘ ನಗರ ಸಹ ಕಾರ್ಯವಾಹ ಜಗದೀಶ್ ಪ್ರಜಾಪಥ್, ನಗರ ಸಂಘಚಾಲಕ ಯುವರಾಜ ಬ್ಯಾಡಗಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರ ಕಾರ್ಯಕಾರಿಣಿ ಸದಸ್ಯ ವಿನಾಯಕ ಜೋಶಿ, ಆರ್ ಎಸ್ ಎಸ್ ಮುಖಂಡರಾದ ಈಶ್ವರ್ ಹಾವನೂರ, ಗವಿಸಿದ್ದಪ್ಪ ದ್ಯಾಮಣ್ಣನವರ, ಆರ್. ಟಿ. ತಾಂಬೆ, ಶ್ರೀನಿವಾಸ ನಾಡಿಗೇರ, ಮಂಜಯ್ಯ ಚಾವಡಿ,ಪೃಥ್ವಿರಾಜ್ ಜೈನ್, ಪ್ರಕಾಶ ಬುರುಡಿಕಟ್ಟಿ,ಶ್ರೀನಿವಾಸ ಏಕ ಬೋಟೆ, ಜಿ.ಜಿ. ಹೊಟ್ಟಿಗೌಡ್ರು, ಕೆ.ಶಿವಲಿಂಗಪ್ಪ, ಡಾ, ಸಂಜಯ್ ನಾಯ್ಕ್ ಎ. ಬಿ ಪಾಟೀಲ್, ಪಾಂಡುರಂಗ ಪೂಜಾರ್, ಪವನ್ ಮಲ್ಲಾಡದ, ಸತೀಶ ಹೊಳೆಬಾಗಿಲ,ಸಂಜೀವ್ ಶಿರಹಟ್ಟಿ, ಅಜಯ್ ಮಠದ, ಭೋಜರಾಜ ದಲಬಂಜನ್, ದತ್ತಾತ್ರೆಯ ರೇವಣಕರ್, ಮಂಜುನಾಥ ಗೌಡ ಶಿವಣ್ಣನವರ, ಗುರುರಾಜ ಕುಲಕರ್ಣಿ, ಅಶೋಕ ನಾಡಗೇರ,ಅಮೋಘ ಬಾದಾಮಿ, ಚಂದ್ರು ಕೊರಗರ, ಕೈಲಾಸ್ ಮತ್ತು ಜಗದೀಶ್ ಪ್ರಜಾಪಥ್, ರಾಘವೇಂದ್ರ ದುಂಡಿ, ನಾಗರಾಜ ಮಜ್ಜಿಗಿ, ಗೀರೀಶ್ ಮಜ್ಜಿಗಿ ಮಂಜುನಾಥ ಕಾಟಿ, ಸುಭಾಸ ಸಿರಿಗೇರಿ, ಶ್ರೀಕಾಂತ ಹುಲ್ಮನಿ, ಕೆ ಎನ್ ಷಣ್ಮುಖ, ಸೇರಿದಂತೆ ಆರ್. ಎಸ್ ಎಸ್ ಮುಖಂಡರು,ಸಾವಿರಕ್ಕೂ ಹೆಚ್ಚು ಗಣವೇಶಧಾರಿಗಳು ಪಾಲ್ಗೊಂಡಿದ್ದರು ಪಥ ಸಂಚಲನದುದ್ದಕ್ಕೂ, ನಾಗರಿಕರು, ತಳಿರು ತೋರಣಕಟ್ಟೆ, ರಂಗೋಲಿ ಚಿತ್ತಾರಗಳನ್ನು ಬಿಡಿಸಿ, ಪುಷ್ಪವನ್ನು ಸಮರ್ಿಸುವುದರ ಮೂಲಕ, ಅತ್ಯಂತ ಭಕ್ತಿ ಭಾವದೊಂದಿಗೆ ಸ್ವಾಗತ ಕೋರುವ ದೃಶ್ಯವು ಎಲ್ಲೆಡೆಯೂ ಕಾಣುವುದು ಸಾಮಾನ್ಯವಾಗಿತ್ತು. ಅಶೋಕ ವೃತ್ತದಿಂದ ಆರಂಭವಾದ ಗಣವೇಶಧಾರಿಗಳ ಪಥ ಸಂಚಲನವು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಂಜೆ ನಗರ ಸಭೆ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಮಾರಂಭದೊಂದಿಗೆ ಸಾಂಗ ತ್ಯಗೊಂಡಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಸಿಪಿಐ ಜೆ. ಲೋಕೇಶ್, ಪಿಎಸ್‌ಐ ಗಡ್ಡೆಪ್ಪ ಗುಂಜುಟಿಗಿ, ಸೇರಿದಂತೆ ಇಲಾಖೆಯ ಇತರರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಗೊಳಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 