ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳುತ್ತದೆ-ತಾಹಿರ್ ಅಲಿ
ಕೊಪ್ಪಳ 16: ಇಂದಿನ ಮಕ್ಕಳೇ ನಾಡಿನ ಭಾವಿ ಪ್ರಜೆಗಳಾಗಿದ್ದು ಅವರ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದು ಮೈಸೂರಿನ ಎನ್ ಈ ಟಿ ನಭಾ ಒರಿಯನ್ ಸ್ಕೂಲ್ ನ ಅಧ್ಯಕ್ಷ ಹಾಗೂ ಉದ್ಯಮಿ ಎಂ ತಾಹಿರ್ ಅಲಿ ಅಭಿಪ್ರಾಯ ಪಟ್ಟರು, ಅವರು ಶನಿವಾರ ಸಂಜೆ ನಗರದ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಏರಿ್ಡಸಿದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ ಯ 25ನೇ ವರ್ಷ ರಜತ ಮಹೋತ್ಸವ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಮುಂದುವರೆದು ಮಾತನಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು, ಅವರು ಉತ್ತಮ ನಾಗರಿಕರಾಗಿ ತಮ್ಮ ಬದುಕು ಕಟ್ಟಿಕೊಂಡು ಜೀವನ ಸಾಗಿಸುವುದರ ಜೊತೆಗೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವಂತಹ ಗುಣ ಮತ್ತು ಸಂಸ್ಕಾರ ಮಕ್ಕಳಲ್ಲಿ ಬೆಳೆಸಬೇಕು, ಶಿಕ್ಷಕರಷ್ಟೇ ಪಾಲಕರ ಮೇಲೆ ಕೂಡ ಹೆಚ್ಚಿನ ಜವಾಬ್ದಾರಿ ಇದೆ ಅದನ್ನು ಪ್ರತಿಯೊಬ್ಬರು ನಿಭಾಯಿಸಬೇಕು ಎಂದು ಎಂ ತಾಹಿರ್ ಅಲಿ ಹೇಳಿದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಶಿಕ್ಷಕರು ಸಮಾಜದ ನಿರ್ಮಾಪಕರು ಒಳ್ಳೆಯ ಸಮಾಜ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ, ಮಕ್ಕಳಲ್ಲಿ ದೇಶ ಅಭಿಮಾನ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಭಾತೃತ್ವವನ್ನು ಬೆಳೆಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ರವರು ಮಾತನಾಡಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ ಮೊದಲು ನಾವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡಿದ್ದ ಸಮಾಜ ಸೇವಕ ಉದ್ಯಮಿ ಕರೀಂ ಪಾಷಾ ಗಚ್ಚಿನಮನಿ ಅವರು ಮಾತನಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಿಗೆ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.ಕೊಪ್ಪಳ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ್ ಪಾಷಾ ಪಲ್ಟನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಲ್ಲಿನ ಮಿಲತ್ ಶಿಕ್ಷಣ ಸಂಸ್ಥೆ ಸಮಾಜ ಸೇವ ಕಾರ್ಯದಲ್ಲಿ ಮತ್ತು ಶೈಕ್ಷಣಿಕರಂಗದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ ಇಂಥ ಸಂಸ್ಥೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಉದ್ಯಮಿ ಗಳಾದ ಫಕ್ರುದ್ದೀನ್ ನದಾಫ್ ಚುಕುನಕಲ್ ಇಮ್ತಿಯಾಜ್ ಅತ್ತಾರ್, ಎಂಡಿ ಇಬ್ರಾಹಿಂ ಪಟೇಲ್, ಅಂಜುಮನ್ ಕಮಿಟಿ ಅಧ್ಯಕ್ಷ ಎಂ ಡಿ ಆಸಿಫ್ ಕರ್ಕಿಹಳ್ಳಿ, ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಸಂಸ್ಥಾಪಕ ಸೈಯದ್ ಗೌಸ ಪಾಷಾ ಖಾಜಿ, ಮುಖ್ಯ ಸಲಹೆಗಾರ ಎಂ ಸಾಧಿಕ್ ಅಲಿ ,ಮುಖ್ಯ ಶಿಕ್ಷಣ ಸಲಹೇಗಾರ ಸೈಯದ್ ನಜೀರ್ ಅಹ್ಮದ್ ಅತ್ತಾರ್, ಆಡಳಿತ ಮಂಡಳಿ ಸದಸ್ಯರಾದ ಎಂಡಿ ಜಹೀರ್ ಅಲಿ ,ದಾವುದ ಹುನಗುಂದ್ ರೇಷ್ಮಾ ಅಲ್ಲಾಭಕ್ಷ್ ಇಳಿಯಾಳ, ಕಾರ್ಯನಿರ್ವಾಹಕ ಸಂಚಾಲಕರಾದ ಅಬ್ದುಲ್ ಅಜೀಜ್ ಮಾನ್ವಿಕರ್ ಮತ್ತು ಇಮಾಮ್ ಹುಸೇನ್ ಸಿಂದೋಗಿ, ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ, ಪಾಲಕರ ಪ್ರತಿನಿಧಿ ಫತಹೆ ಸಾಬ್ ಚುಟ್ಟದ್, ಅನೇಕರು ಪಾಲ್ಗೊಂಡಿದ್ದರು ನಂತರ ಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ಜನಮನ ರಂಜಿಸಿತು ಅತಿಥಿ ಗಣ್ಯರೆಲ್ಲರನ್ನು ಶಾಲೆಯ ಪರವಾಗಿ ಅಭಿನಂದಿಸಲಾಯಿತು ಅಲ್ಲದೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ10 ಜನ ಹಳೆಯ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರನ್ನು ಸನ್ಮಾನಿಸಲಾಯಿತು ಮತ್ತು 9 ಜನ ಮಕ್ಕಳನ್ನು ಬೆಸ್ಟ್ ವಿದ್ಯಾರ್ಥಿಗಳೆಂದು ಪ್ರಮಾಣ ಪತ್ರ ನೀಡಲಾಯಿತು ಹಾಗೂ ಶಾಲೆಯ ಹಿರಿಯ ಶಿಕ್ಷಕಿ ಅಹಮದಿ ಬೇಗಮ್ ರವರಿಗೆ ಬೆಸ್ಟ್ ಶಿಕ್ಷಕಿ ಎಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನ ಮನೋರಂಜಿಸಿತು,