ಕ್ಯೂಬಿಡಿ ವಿಥ್ ಡಿಸೈನ್ ಎಕ್ಸ್ಪರ್ಟ ಕಾರ್ಯಾಗಾರ

QBD with Design Expert workshop

ಕ್ಯೂಬಿಡಿ ವಿಥ್ ಡಿಸೈನ್ ಎಕ್ಸ್ಪರ್ಟ ಕಾರ್ಯಾಗಾರ 

ಬೆಳಗಾವಿ 25: ಕ್ಯೂಬಿಡಿ (ಕಿಛಆ: ಕಿಣಚಿಟಣಥಿ ಛಥಿ ಆರಟಿ) ವಿಥ್ ಡಿಸೈನ್ ಎಕ್ಸ್ಪರ್ಟ: ಹ್ಯಾಂಡ್ಸ್‌-ಆನ್ ಅಪ್ರೋಚ್ ಟು ಫಾರ್ಮುಲೇಶನ್ ಡೆವಲಪ್ಮೆಂಟ್" ಕಾರ್ಯಾಗಾರವನ್ನು ಕೆಎಲ್‌ಇ ಫಾರ್ಮಸಿ ಕಾಲೇಜಿನ ಕ್ವಾಲಿಟಿ ಅಶ್ಯೂರೆನ್ಸ್‌ ವಿಭಾಗವು 25ರಂದು ಬೆಳಗಾವಿಯಲ್ಲಿ ಆಯೋಜಿಸಿತು. ಕಾರ್ಯಕ್ರಮವನ್ನು ಡೀನ್ ಡಾ. ವಿ.ಎಸ್‌. ಮಾಸ್ತಿಹೋಳಿಮಠ ಇವರು ಉದ್ಘಾಟಿಸಿದರು. ಕೆಎಲ್‌ಇ ಫಾರ್ಮಸಿ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎಂ. ಬಿ. ಪಾಟೀಲ, ಮತ್ತು ಕಾರ್ಯಕ್ರಮ ಸಂಯೋಜಕ ಡಾ. ಬಿ.ಆರ್‌. ಶರಣ್ಣವರ ಹಾಗೂ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು  

           ಡಾ.ವಿ.ಎಸ್‌. ಮಣ್ಣೂರ ಅವರು ಸ್ವಾಗತಿಸಿದರು.  

           ಡಾ. ವಿ.ಎಸ್‌. ಮಾಸ್ತಿಹೋಳಿಮಠ ಅವರು ಕ್ಯೂಬಿಡಿಯ ಅಗತ್ಯತೆ ಮತ್ತು ಸೂತ್ರೀಕರಣ ಮತ್ತು ವಿಶ್ಲೇಷಣಾತ್ಮಕ ಅಭಿವೃದ್ಧಿಯಲ್ಲಿ ಅದರ ಅನ್ವಯದ ಬಗ್ಗೆ ಒತ್ತಿ ಹೇಳಿದರು.  

          ಸಂಪನ್ಮೂಲ ವ್ಯಕ್ತಿ ಡಾ. ಭಾಸ್ಕರ ಕುರಂಗಿ ಅವರು ಕ್ಯೂಬಿಡಿಯ ವಿಧಾನಶಾಸ್ತ್ರದ ಬಗ್ಗೆ ಆಳವಾದ ಒಳನೋಟ ನೀಡಿದರು. ಕು. ರಾಹುಲ ಕೋಳಿ ಅವರು ಆರಟಿ ಠ ಇಥಜಡಿಟಜಟಿ (ಆಓಇ) ಸಾಫ್ಟ್ವೇರ್ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಿದರು.  

        ಪ್ರಾಂಶುಪಾಲ ಡಾ. ಸುನಿಲ್ ಎಸ್ ಜಲಾಲಪುರೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಮಾರು 60 ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನಿಷಾ ಶಿರ್ಕೋಳಿ ಧನ್ಯವಾದ ಅರ​‍್ಿಸಿದರು.