ಕಾರ್ಮಿಕರ ಮೇಲೆ ಹಲ್ಲೆಗೈದವರನ್ನು ಉಗ್ರಶಿಕ್ಷೆಗೆ ಒಳಪಡಿಸಿ : ನ್ಯಾ.ದಾನೇಶ ಅವಟಿ

Punish those who assault workers: Justice Danesh Avati

ಕಾರ್ಮಿಕರ ಮೇಲೆ ಹಲ್ಲೆಗೈದವರನ್ನು ಉಗ್ರಶಿಕ್ಷೆಗೆ ಒಳಪಡಿಸಿ : ನ್ಯಾ.ದಾನೇಶ ಅವಟಿ 

ವಿಜಯಪುರ 22: ಗಾಂಧಿನಗರ ಸ್ಟಾರ್ ಚೌಕ್ ಹತ್ತಿರ ಇಟ್ಟಿಗೆ ಭಟ್ಟಿಯಲ್ಲಿ ಕೆಲಸಕ್ಕಿದ್ದ ಕಾರ್ಮಿಕರನ್ನು ಮಾರಣಾಂತಿಕವಾಗಿ ಹಲ್ಯೆಗ್ಯೆದ ಮಾಲಿಕ ಖೇಮೂ ರಾಠೋಡ ಹಾಗೂ ಇತರೆ ಗೂಂಡಾಗಳನ್ನು ಬಂಧಿಸಿದರೆ ಸಾಲದು ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ನ್ಯಾಯವಾದಿ ದಾನೇಶ ಅವಟಿ ಒತ್ತಾಯಿಸಿದ್ದಾರೆ.  

ವಿಜಯಪುರ ನಗರದ ಕಾರ್ಮಿಕ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು. ನ್ಯಾಯವಾದಿಗಳು, ಸಾರ್ವಜನಿಕರ ಮುಖಾಂತರ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಅರ​‍್ಿಸಿ ಮಾತನಾಡಿದ ಅವರು ವಿಜಯಪುರ ಜಿಲ್ಲೆ ಬರಗಾಲ ಪೀಡಿತ ಪ್ರದೇಶಗಳಲ್ಲಿ ಒಂದಾಗಿದ್ದು ಇಲ್ಲಿಯ ಕಾರ್ಮಿಕರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕಡೆಗೆ ಕೆಲಸಕ್ಕಾಗಿ ಅಲೆಯುವದು ಸರ್ವೇಸಾಮಾನ್ಯವಾಗಿದ್ದು. ಕೆಲವು ಕಡೆಗೆ ಕೂಲಿ ಕಾರ್ಮಿಕರ ಮೇಲೆ ದಬ್ಬಾಳಿಕೆ ಶೋಷಣೆ ಹಲ್ಲೆಗಳು ಮಿತಿ ಮೀರುತ್ತಿವೆ ಎಂದರು.  

 ಅಧ್ಯಕ್ಷರು ಜಿಲ್ಲಾ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಹಾಗೂ ಸಂಘಟಿತರ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪ್ರಕಾಶ ರಜಪೂತ ಮಾತನಾಡಿ, ಜಿಲ್ಲೆಯಲ್ಲಿ ಬಾಲಕಾರ್ಮಿಕತೆ ಹೆಚ್ಚಾಗುತ್ತಿದೆ. ಕೂಲಿಕಾರ್ಮಿಕರ ನ್ನು ಹಗಲಿರುಳು ದುಡಿಸಿಕೊಳ್ಳುವದು.ಅವರ ಜೀವಕ್ಕೆ ಶರೀರಕ್ಕೆ ತೊಂದರೆ ಆಗದಂತೆ ಭದ್ರತೆ. ಇತರೆ ಸೌಕರ್ಯಗಳನ್ನು ಒದಗಿಸದಿರುವುದು. ರಜೆ ಹಾಗೂ ಪಗಾರ ಕೊಡದೇ ಶೋಷಿಸುವದು ಹೆಚ್ಚಾಗಿರುವುದು ಕೇಳಿ ಬರುತ್ತಿದೆ. ಕಳೆದ ಒಂದು ವಾರದ ಹಿಂದೆ. ಮಹಾತ್ಮ ಗಾಂಧಿ ನಗರದ ಸ್ಟಾರ್ ಚೌಕ್ ಹತ್ತಿರ ಇರುವ ಖೇಮೂ ರಾಠೋಡ ಎಂಬ ವ್ಯಕ್ತಿಯ ಇಟ್ಟಿಗೆ ಭಟ್ಟಿಯಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸಕ್ಕಿದ್ದ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸನ ಕೂಲಿ ಕಾರ್ಮಿಕರಾದ ಸದಾಶಿವ ಮಾದರ, ಉಮೇಶ್ ಮಾದರ, ಸದಾಶಿವ ಬಬಾಲಾದಿ ಎಂಬ ಕಾರ್ಮಿಕರ ಮೇಲೆ ಕಬ್ಬಿಣದ ರಾಡು, ಪೈಪು, ಕಟ್ಟಿಗೆಯಿಂದ ಮಾಲಿಕ ಖೇಮು ರಾಠೋಡ ಹಾಗೂ ಮೂರು ನಾಲ್ಕೂ ಜನ ಗೂಂಡಾಗಳು ಸೇರಿ ಎರಡು ಮೂರು ದಿನ ಕೂಡಿಹಾಕಿ. ಕಣ್ಣಿಗೆ ಖಾರದ ಪುಡಿ ಎರಚಿ.ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವು ದೃಷ್ಯಗಳನ್ನು ವಿಡಿಯೋ ಹಾಗೂ ದೃಶ್ಯ ಮಾದ್ಯಮಗಳಲ್ಲಿ ನೋಡಿದಾಗ ಮೈ ಜೂಮ್ ಎನಿಸಿ ಆಕ್ರೋಶ ಉಕ್ಕಿ ಹರಿಯುತ್ತಿದ್ದು.ಅವರು ಪ್ರಾಣ ಬಿಕ್ಷೇ ಬೇಡಿ ಕಾಲ ಮೇಲೆ ಬಿದ್ದರೂ ಅವರ ಎದೆ ಕುತ್ತಿಗೆ ಮೇಲೆ ಕಾಲಿಟ್ಟು ಗುಂಪಾಗಿ ಹಲ್ಲೆ ನಡೆಸುತ್ತಿರುವದನ್ನು ಕಂಡಾಗ ಇವರು ಮಾನವ ರೂಪದ ರಾಕ್ಷಸರು ಎನಿಸುತ್ತದೆ.ಇದೊಂದು ನಾಗರೀಕ ಸಮಾಜ ತಲೆ ತಗ್ಗಿಸುವ ಹೇಯ ಕೃತ್ಯವಾಗಿದ್ದು ರಾಜ್ಯಾದ್ಯಂತ ನಾಗರಿಕರು ಮಮ್ಮಲ ಮರುಗಿದರಲ್ಲದೇ ಹಿಡಿ ಶಾಪ ಹಾಕುತ್ತಿದ್ದಾರೆ ಎಂದರು.  

 ವಿಜಯಪುರ ನಗರ ಕಟ್ಟಡ ಮತ್ತು ಅಸಂಘಟಿತ ಯೂನಿಯನ್‌ನಿ ರವಿ ದೊಡಮನಿ, ಹಲ್ಲೆಗೆ ಒಳಗಾದ ಅಮಾಯಕ ಅನಕ್ಷರಸ್ಥ, ದಲಿತ ಕುಟುಂಬದವರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದು.ಕೂಲಿ ನಾಲಿ ಮಾಡಿ ಜೀವನ ಸಾಗಿಸುವ ಜನ ಇಂದು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಸರ್ಕಾರ ಅವರ ಕುಟುಂಬ ವರ್ಗದವರಿಗೆ ಸೂಕ್ತ ಪರಿಹಾರ ನೀಡಬೇಕು.ಹಾಗೂ ಭದ್ರತೆ ನೀಡಬೇಕು. ತೆರೆಯ ಮರೆಯಲ್ಲಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸುವವರಿಗೆ ಅವಕಾಶ ನೀಡದೆ.ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಯಾಗಲೆಂದು ಆಕ್ರೋಶ ವ್ಯಕ್ತಪಡಿಸಿದರು.  

 ನ್ಯಾಯವಾದಿ ಬಾಬು ಹಿಪ್ಪರಗಿ, ಸಿದ್ದು ಅವಟಿ, ಕಿರಣ ಮಠಪತಿ, ಐಎನ್‌ಟಿಯುಸಿ ಜಿಲ್ಲಾಧ್ಯಕ್ಷ ಪರಸನಗೌಡ ಪಾಟೀಲ, ಸಮಾಜ ಸೇವಕ ಯಲ್ಲಪ್ಪ ಇರಕಲ್, ಬಸವರಾಜ ಆರ್‌.ಕೆ. ಸಂತೋಷ ಮುಂಜಣ್ಣಿ, ಈರಣ್ಣ ಡೆಂಗಿ, ಜಮೀರ ಕೊಡಗಾನೂರ, ಮಲ್ಲಿಕಾರ್ಜುಣ ದೊತ್ರೆ, ಆನಂದ ಹಿರೇಮಠ, ಶ್ರೀಶೈಲ ಗೊರನಾಳ, ಸಿದ್ದು ಅವಟಿ, ಕಿರಣ ಮಠಪತಿ, ಸತೀಶ ಯಂಕಟಿ, ಶ್ರೀಶೈಲ ಗೊರನಾಳ, ಗುರುನಾಥ ವಾಲಿಕಾರ ಇನ್ನಿತರರು ಇದ್ದರು.