ತರಬೇತಿ ಕಾರ್ಯಕ್ರಮದ ಉದ್ಘಾಟನೆ

Inauguration of training programme

ತರಬೇತಿ ಕಾರ್ಯಕ್ರಮದ ಉದ್ಘಾಟನೆ 

ಗದಗ    22:  ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ನಿ., ಗದಗ ಹಾಗೂ ಸಹಕಾರ ಇಲಾಖೆ, ಇವರುಗಳ ಸಯುಕ್ತ ಆಶ್ರಯದಲ್ಲಿ ಗದಗ ಜಿಲ್ಲೆಯ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮವು  ಬುಧವಾರ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ದಲ್ಲಿ  ಜರುಗಿತು. 

ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿ., ಬೆಂಗಳೂರು  ನಿರ್ದೇಶಕರಾದ ಎಚ್‌. ಜಿ. ಹಿರೇಗೌಡ್ರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಸ್ಫರ್ಧಾತ್ಮಕ ಜಗತ್ತಿನಲ್ಲಿ ಖಾಸಗೀಕರಣ, ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣಗಳ ನಡುವೆ ಬಲವಾಗಿ ಬೇರು ಬಿಟ್ಟಿರುವ ಸಹಕಾರ ಕ್ಷೇತ್ರವೂ ಸದಸ್ಯರ ಆರ್ಥಿಕ ಬಲವರ್ಧನೆಗಾಗಿ ಸುಧಾರಿತ ತಂತ್ರಜ್ಷಾನ ಆಧಾರಿತ ಸೇವೆಗಳನ್ನು ನೀಡುತ್ತಾ ಬಂದಿದೆ ಎಂದರು.  

ಸಹಕಾರ ಕ್ರೇತ್ರ ಪ್ರಾರಂಭವಾದಾಗಿನಿಂದ ರೈತರಿಗೆ, ಕಾರ್ಮಿಕರಿಗೆ, ಆರ್ಥಿಕವಾಗಿ ಅಬಲರಾದ ಜನರಿಗೆ ನೆರವಾಗಲು ತಾನೇ ರಚಿಸಿಕೊಂಡು ತಾನೇ ಮುನ್ನೆಡೆಸುವ ಉದ್ದೇಶದಿಂದ ಪ್ರಾರಂಭಗೊಂಡಿದೆ. ಇಂದು ಸಹಕಾರ ಕ್ಷೇತ್ರ ಪ್ರವೇಶಿಸದ ಯಾವುದೇ ವಲಯವಿಲ್ಲ ಅಷ್ಟರಮಟ್ಟಿಗೆ ಸಹಕಾರ ಕ್ಷೇತ್ರ ವಿಸ್ತಾರವಾಗಿ ಬೆಳೆದು ನಿಂತಿದೆ. ಸಹಕಾರ ಕ್ಷೇತ್ರವು ಎಲ್ಲಾ ವರ್ಗದ ಎಲ್ಲಾ ಜನರ ಆಶೋತ್ತರಗಳನ್ನು ಪೂರೈಸುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಾ ಒಂದು ಆರ್ಥಿಕ ಶಕ್ತಿಯಾಗಿ ರೂಪಿತವಾಗಿದೆ. ಅದು ಕಾರ್ಮಿಕ ಕ್ಷೇತ್ರವಾಗಿರಬಹುದು, ವ್ಯವಸಾಯ, ಹಾಲು ಉತ್ಪಾದನೆ ಕ್ಷೇತ್ರವಾಗಿರಬಹುದು ಹೀಗೆ ಕೈಗಾರಿಕೆ, ವಾಣಿಜ್ಯ, ಉತ್ಪಾದನಾ, ಮಾರಾಟ ಕ್ಷೇತ್ರಗಳನ್ನೂಳಗೊಂಡು “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ಗಾದೆ ಮಾತಿನಂತೆ ಸಹಕಾರ ಕ್ಷೇತ್ರ ವ್ಯಾಪಕ ಸೇವೆ ಸಲ್ಲಿಸುತ್ತಿದೆ  ಎಂದು ತಿಳಿಸಿದರು. 

ಗದಗ ಜಿಲ್ಲೆಯ ಸಹಕಾರ ಸಂಘಗಳ ಉನಿಬಂಧಕರಾದ ಎಸ್‌.ಎಸ್‌. ಕಬಾಡೆ ಅವರು ಮಾತನಾಡಿ  ಜನರಲ್ಲಿ ಉಳಿತಾಯ ಮನೋಭಾವನೆ ಬೆಳೆಸಲು ಹಾಗೂ ಆರ್ಥಿಕವಾಗಿ ಸ್ವಾವಲಂಭಿಗಳನ್ನಾಗಿಸಲು ಮಹಿಳೆಯರು, ಬಡವರು, ಸೇರಿದಂತೆ ಸಮಾಜದ ಕಡೆಯ ವ್ಯಕ್ತಿಗೂ ತಲುಪಲು ಸಹಕಾರ ಕ್ಷೇತ್ರವು ಸೂಕ್ತ ಮಾರ್ಗವಾಗಿದೆ. ಗ್ರಾಮೀಣ ಸಹಕಾರ ಸಂಘಗಳ ಅಥವಾ ಸ್ವ ಸಹಾಯ ಗುಂಪುಗಳ ನಾಲ್ಕು ಸದಸ್ಯರ ಕುಟುಂಬ ಒಂದಕ್ಕೆ ವರ್ಷಿಕ ರೋ500.00ಗಳ ವಂತಿಗೆ ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.100.00 ಪಾವತಿಸತಕ್ಕದ್ದು ನಗರ ಸಹಕಾರ ಸಮಘಗಳ ಗರಿಷ್ಠ ನಾಲ್ಕು ಸದಸ್ಯ ಕುಟುಂಬ ಒಂದಕ್ಕೆ ವಾರ್ಷಿಕ ರೂ.1000/-ಗಳ ವಂತಿಗೆ ಮತ್ತು ನಾಲಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬದ ಪ್ರತಿಸದಸ್ಯರಿಗೆ ಶೇ.20 ರಷ್ಟು ಹೆಚ್ಚುವರಿಯಾಗಿ ಅಂದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ರೂ.200.00 ಪಾವತಿಸತಕ್ಕದು ಎಂದರು. 

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸದಸ್ಯರುಗಳಿಗೆ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಸಹಾಯ ಧನ ನೀಡುವ ಮೂಲಕ ಅವರ ವಾರ್ಷಿಕ ಸದಸ್ಯತ್ವದ ವಂತಿಗೆಯನ್ನು ಸರ್ಕಾರವೇ ಭರಿಸುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಈ ಯೊಜನೆ ಎಲ್ಲರಿಗೂ ಅನ್ವಯಿಸುತ್ತದೆ. ಯಾವುದೇ ವಯೋಮಿತಿ ನಿರ್ಭಂಧ ಇರುವುದಿಲ್ಲ  ನವಜಾತ ಶಿಶುವಿನಿಂದ ಹಿಡಿದು ವೃಧ್ಧರವರೆಗೆ ಸದಸ್ಯತ್ವ ಪಡೆಯಲು ಅವಕಾಶ ಪ್ರಧಾನ ಅರ್ಜಿದಾರರು ಸಹಕಾರ ಸಂಘದ ಸದಸ್ಯರಾಗಿದ್ದರೆ ಸಾಕು ಅವರ ಮೂಲಕ ಅವಲಂಬಿತ ಕುಟುಂಬ ಸದಸ್ಯರು ಯೊಜನೆಗೆ ಸೇರಿಕೊಳ್ಳಲು ಅರ್ಹರಿರಿತ್ತಾರೆ ಅವಲಂಬಿತರು ಸಹಕಾರ ಸಂಘದ ಸದಸ್ಯರಾಗುವ ಅಗತ್ಯ ಇರುವದಿಲ್ಲ.  ಯಶಸ್ವಿನಿ ಯೊಜನೆ ಸದಸ್ಯರು ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಯೊಜನೇಯಡಿ ಗುರುತಿಸಲ್ಪಟ್ಟಿರುವ ನೆಟ್ವರ್ಕ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಶಸ್ತ್ರಚಿಕಿತ್ಸೆಗೆ ಸೌಲಭ್ಯ ಪಡೆಯಲು ಅವಕಾಶ ಈ ಮೇಲಿನ ಎಲ್ಲ ವಿಷಯಗಳು ಯಶಸ್ವಿನಿ ಯೊಜನಯ ವೈಶಿಷ್ಟತೆಗಳಾಗಿವೆ ಎಂದರು. 

ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಸಿ. ಎಂ. ಪಾಟೀಲ ರವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಹಕಾರ ಸಂಘಗಳಲ್ಲಿ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ, ಸಹಕಾರ ಸಂಘಗಳಲ್ಲಿ ಆಡಳಿತಾತ್ಮಕ ನಿರ್ವಹಣೆ, ಮತ್ತು ಯಶಸ್ವಿನಿ ಯೋಜನೆ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಿಂದ ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಂಡು ಸಂಘದಲ್ಲಿ ಅಳವಡಿಸಿಕೊಂಡು ಸಂಘದ ಏಳಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ “ ಸಹಕಾರ ಸಂಘಗಳಲ್ಲಿ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಲೆಕ್ಕಪರಿಶೋಧನೆ ” ಕುರಿತು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕರಾದ ಅರವಿಂದ ಎನ್‌. ನಾಗಜ್ಜನವರ,  “ಸಹಕಾರ ಸಂಘಗಳಲ್ಲಿ ಆದಳಿತಾತ್ಮಕ ನಿರ್ವಹಣೆ” ಕುರಿತು ರೋಣ ಸಹಕಾರ ಅಭಿವೃಧ್ಧಿ ಅಧಿಕಾರಿಗಳಾದ ಪ್ರಶಾಂತ ಮುಧೋಳ ಅವರು ಹಾಗೂ  “ಯಶಸ್ವಿನಿ ಯೋಜನೆ “ ಕುರಿತು  ಗದಗ ಯಶಸ್ವಿನಿ ಕೋ-ಆರ್ಡಿನೇಟರ್  ಪ್ರಮೋದ ಕುಶಬಿ ಇವರು  ಉಪನ್ಯಾಸ ನೀಡಿದರು 

        

ರಾಣಿ ಚನ್ನಮ್ಮ ಮಾನಿನಿ ಸಹಕಾರ ಸಂಘದ ನಿರ್ದೇಶಕರಾದ   ಸಾವಿತ್ರಿ ಮೊರಬದ ಹಾಗೂ ಸಂಗಡಿಗರು ಇವರು ಪ್ರಾರ್ಥಸಿದರು. ಗದಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಂದ್ರಶೇಖರ ಎಸ್‌. ಕರಿಯಪ್ಪನವರ ಇವರು ನಿರೂಪಿಸಿ, ಮಹಿಳಾ ಸಹಕಾರ ಶಿಕ್ಷಕಿ ರಶೀದಾಬಾನು ಸಿ. ಯಲಿಗಾರ  ವಂದಿಸಿದರು.