ಕುಡಿಯುವ ನೀರಿಗಾಗಿ ಸಾರ್ವಜನಿಕರಿಂದ ಕಡಕೋಳ ಗ್ರಾಮ ಪಂಚಾಯತಿಗೆ ಮುತ್ತಿಗೆ

ಕುಡಿಯುವ ನೀರಿಗಾಗಿ ಸಾರ್ವಜನಿಕರಿಂದ  ಕಡಕೋಳ ಗ್ರಾಮ ಪಂಚಾಯತಿಗೆ ಮುತ್ತಿಗೆ Public besieges Kadakola Gram Panchayat for drinking water

        ಶಿರಹಟ್ಟಿ 10 : ತಾಲೂಕಿನ ಕಡಕೋಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಜಲ್ಲಿಗೆರಿ ಗ್ರಾಮಕ್ಕೆ ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗಿದೇ ಇರುವ ಹಿನ್ನೆಲೆ ಸಾರ್ವಜನಿಕರು ಮಂಗಳವಾರ ಕಡಕೋಳ ಗ್ರಾಮ ಪಂಚಾಯತ್ ಮುಂದೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ಜರುಗಿತು. ಕಳೆದ ಕೆಲವು ದಿನಗಳಿಂದ ಕುಡಿಯುವ ನೀರು ಬಂದಿರುವದಿಲ್ಲ  ಎಂದು ಗ್ರಾಮ ಪಂಚಾಯತಿ ಅಧಿಕಾರಿಯನ್ನು ಕೇಳಿದರೆ ಅವರು ಹತ್ತಾರು ಸುಳ್ಳಿನ ಆಶ್ವಾಸನೆಯನ್ನು ಕೊಟ್ಟು ಗ್ರಾಮಸ್ಥರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಜನರ ಕುಡಿತಯುವ ನೀರಿನ ಸಮಸ್ಯೆ ಮಾತ್ರ ಬಗೆ ಹರಿದಿಲ್ಲ. ಇದೇ ತಿಂಗಳಲ್ಲಿ ಜಲ್ಲಿಗೇರಿ ಗ್ರಾಮದಲ್ಲಿ ದ್ಯಾಮವ್ವ ದೇವಿ ಜಾತ್ರೆ ಇರುವದರಿಂದ ನೀರಿಗಾಗಿ ಹಾಹಾಕಾರ ಪಡುತ್ತಿದ್ದೇವೆ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಗ್ರಾಮ ಸ್ವಚ್ಛತೆಗೆ ಹಾಗೂ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ದಿಂಗಾಲೇಶ ಹಿರೇಮಠ ಹೇಳಿದರು. 

        ಕಡಕೋಳ ಗ್ರಾಮ ಪಂಚಾಯತ್ ಮುಂದೆ ಬೆಳಿಗ್ಗೆ ಕುಡಿಯುವ ನೀರಿಗಾಗಿ ನೂರಾರು ಸಾರ್ವಜನಿಕರು ಜಮಾಯಿಸಿ ತಮ್ಮ ಬೇಡಿಕೆ ಈಡೇರುವವರೆಗೆ ಸ್ಥಳ ಬಿಟ್ಟು ಹೊರಡುವದಿಲ್ಲ ಎಂದು ಹಠ ಹಿಡಿದರು. ಕೆಲಹೊತ್ತು ನಂತರ ಗ್ರಾಮ ಪಂಚಾಯತ್ ಅಭಿವೃದ್ದ ಅಧಿಕಾರಿ ಮಾಳವಾಡ ಅಗಮಿಸುತ್ತಿದ್ದಂತೆ ಜಲ್ಲಿಗೇರಿ ಗ್ರಾಮಸ್ಥರು ಕುಡಿಯುವ ನೀರು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಅವರು ಮಾತನಾಡುತ್ತಾ, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು. ಈ ಸಂದರ್ಭದಲ್ಲಿ ಶಶಿಧರ ಸಾಳೊಂಕೆ, ಓಬಳೆಪ್ಪ ಬಳ್ಳಾರಿ, ವಿರುಪಾಕ್ಷಿ ಅಂಗಡಿ, ರವಿ ಸಾಳೊಂಕೆ, ಲಕ್ಷ್ಮಣ ಕಳಸದ, ಮಲ್ಲೇಶ ವಡ್ಡರ, ಪರಶುರಾಮ ಕಟಗಿ, ಮರಿಯಪ್ಪ ಬಳ್ಳಾರಿ, ಮಂಜು ಮ. ಕಂಬಾರ ಮಹಾಂತೇಶ ಅಂಗಡಿ, ವಿನಾಯಕ್ ಮಹಾದಿಕ್, ಮಂಜು ಕಂಬಾರ ಹಾಗೂ ಅನೇಕರು ಇದ್ದರು.