ಬಾಲಕ, ಬಾಲಕಿಯರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ: ಡಾ. ಪಾಸ್ತೆ
Puberty is a stage of development for boys and girls: Dr. Paste
ಬಾಲಕ, ಬಾಲಕಿಯರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ: ಡಾ. ಪಾಸ್ತೆ
ಧಾರವಾಡ 06: ಬಾಲಕಿಯರು ಹಾಗೂ ಬಾಲಕರು ಪ್ರೌಢಾವಸ್ಥೆಗೆ ಬರುವದು ಬೆಳವಣಿಗೆಯ ಒಂದು ಹಂತ. ಆಗ ದೈಹಿಕ ಮತ್ತು ಮಾನಸಿಕ ಸ್ಥಿತಿಗಳಲ್ಲಿ ಬದಲಾವಣೆಗಳು ಆಗುವದು ಸಹಜ. ಆಗ ತಮಗಾಗುವ ನೋವುಗಳನ್ನು ಪಾಲಕರ ಜೊತೆ ಹಂಚಿಕೊಳ್ಳಬೆಕೇಂದು ಡಾ.ಶ್ರೇಯಾ ಪಾಸ್ತೆ ಹೇಳಿದರು.
ಇಲ್ಲಿಯ ಮಾಳಮಡ್ಡಿಯ ಸರಕಾರಿ ಪ್ರಾಥಮಿಕ ಶಾಲೆ 11ರಲ್ಲಿ ಧಾರವಾಡ ಲಯನ್ಸ್ ಸಂಸ್ಥೆಯು ಆಗಸ್ಟ್ 6 ರಂದು ಏರಿ್ಡಸಿದ ಹದಿಹರೆಯ ಬಾಲಕ - ಬಾಲಕಿಯರ ಸಮಾಲೋಚನೆ ಹಾಗೂ ಸ್ಯಾನಟರಿ ನ್ಯಾಪಕಿನ್ಸ್ ಮತ್ತು ನೋಟಬುಕ್ಸ್, ಪೆನ್ನುಗಳ ಉಚಿತ ವಿತರಣೆಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಹುಡುಗಿಯರು ಸ್ವಚ್ಛತೆಗೆ ಹಾಗೂ ಪೌಷ್ಟಿಕ ಆಹಾರದ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ 47 ಬಾಲಕಿಯರಿಗೆ ಸ್ಯಾನಿಟರಿ ನ್ಯಾಪಕಿನ್ಸ್ ಮತ್ತು ನೋಟಬುಕ್ಸ್ ಪೆನ್ನು ಹಾಗೂ 59 ಬಾಲಕರಿಗೆ ನೋಟಬುಕ್ಸ್, ಪೆನ್ನುಗಳನ್ನು ಧಾರವಾಡ ಲಯನ್ಸ್ ಸಂಸ್ಥೆವತಿಯಿಂದ ಉಚಿತವಾಗಿ ವಿತರಿಸಲಾಯಿತು.
ಲಯನ್ಸ್ ಅಧ್ಯಕ್ಷ ಅಶ್ವಿನ್ ಕೊಪ್ಪಿಕರ ಅಧ್ಯಕತೆ ವಹಿಸಿದ್ದರು. ಶಾಲಾ ಪ್ರದಾನ ಗುರುಮಾತೆ ವೀಣಾ ಪಾಟೀಲ ಮಾತನಾಡಿ ,ಧಾರವಾಡ ಲಯನ್ಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಇಂಜಿನಿಯರ್ ಎಂ.ಎಸ್. ಫರಾಸ್ ಮಾತನಾಡಿದರು.
ವಲಯ ಅಧ್ಯಕ್ಷೆ ಶೈಲಾ ಕರಗುದರಿ,ಹರ್ಷ ದೇಸಾಯಿ, ಹರ್ಷ ಡಂಬಳ,ಆನಂದ ಕಮಲಾಪುರ, ಅರವಿಂದ ಹೆಬಸೂರ, ಅನುಪಮಾ ಶೆಟ್ಟಿ, ಆರತಿ ಕಮಲಾಪುರ,ಡಾ.ಅನಿರುಧ್ ಕುಲಕರ್ಣಿ, ವನಿತಾ ಹೆಬಸೂರ, ರಶ್ಮೀ ಭಾರದ್ವಾಜ್, ಅಮೃತಾ ಜೋಶಿ ಮತ್ತು ಶಾಲೆಯ ಸಿಬ್ಬಂದಿ ಹಾಜರಿದ್ದರು.
ಲಯನ್ಸ್ ಕಾರ್ಯದರ್ಶಿ ಪ್ರೊ.ಸುರೇಶ ಗುದಗನವರ ಸ್ವಾಗತಿಸಿದರು.ಡಾ.ರಾಜಶ್ರೀ ಗುದಗನವರ ನಿರೂಪಿಸಿದರು. ಖಜಾಂಚಿ ಶ್ರೀಕಾಂತ ದೇವಗಿರಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 