ಮೈಲಾರ ಜಾತ್ರೆಯ ಪೂರ್ವ ಭಾವಿ ಸಭೆಭಕ್ತರಿಗೆ ಮೂಲಸೌಕರ್ಯ ಕಲ್ಪಿಸಿ
Provide infrastructure for the devotees who will gather before the Mylara Fair
ಹೂವಿನಹಡಗಲಿ 8: ಸುಕ್ಷೇತ್ರ ಮೈಲಾರಲಿಂಗೇಶ್ವರ ನ ಜಾತ್ರೆ ಮುಂದಿನ ತಿಂಗಳು ಫೆ.4ರಂದು ನಡೆಯುವ ಕಾರ್ಣಿಕೋತ್ಸವ ಮತ್ತು ಜಾತ್ರೆಗೆ ರಾಜ್ಯ ಹೊರ ರಾಜ್ಯದ ಲಕ್ಷಾಂತರ ಭಕ್ತರು ಸೇರುತ್ತಾರೆ ಜಿಲ್ಲಾಡಳಿತದಿಂದ ಅಗತ್ಯ ಮೂಲಸೌಕರ್ಯ ಗಳನ್ನು ಕಲ್ಪಿಸಲಾಗುವುದು ಎಂದು ಶಾಸಕ ಕೃಷ್ಣನಾಯಕ ಮತ್ತು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು. ತಾಲೂಕಿನ ಸುಕ್ಷೇತ್ರ ಮೈಲಾರ ಸಮುದಾಯ ಭವನದಲ್ಲಿ ಬುಧವಾರ ಮೈಲಾರ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೈಲಾರ ಜಾತ್ರೆ ಯ ಸಂದರ್ಭದಲ್ಲಿ ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ ಕರಣ,ಸಾರಿಗೆ, ವಿದ್ಯುತ್, ರಸ್ತೆ ಸೌಲಭ್ಯಗಳನ್ನು ಕೂಡಲೇ ಜಾತ್ರೆಯೊಳಗೆ ಪೂರೈಸಲು ಸಂಬಂಧಿಸಿದ ನಾನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು. ಬಸ್ ನಿಲ್ದಾಣ ದಲ್ಲಿ ನೆರಳು ,ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ನದಿಯ ತೀರದಲ್ಲಿ ಯಾವುದೇ ಅಪಘಾತ ಸಂಬಂಧಿಸಿದಂತೆ ಎಚ್ಚರ ವಹಿಸಬೇಕು. ಜಾತ್ರೆಯ ಲ್ಲಿ ಜನ ಮತ್ತು ಜಾನುವಾರುಗಳ ಆರೋಗ್ಯ ಕಳಾಜಿ ವಹಿಸಲು ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಾನಾ ಇಲಾಖೆಗಳಿಗೆ ವಹಿಸಿದ ಉಸ್ತುವಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರತ್ಯೇಕ ಸಭೆ ; ಜಾತ್ರೆಯ ಸಿದ್ದತೆ ಸಭೆಗೂ ಮುನ್ನ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಪತ್ರಕರ್ತರ ನ್ನೂ ಹೊರಗಿಟ್ಟು ಮೈಲಾರ ಪ್ರವಾಸಿಮಂದಿರದಲ್ಲಿ ಪ್ರತ್ಯೇಕ ಅಧಿಕಾರಿಗಳ ಸಭೆ ನಡೆಸಿದರು. 11.30ಕ್ಕೆ ನಿಗಧಿಯಾದ ಅಧಿಕೃತ ಸಭೆ 1.30ಕ್ಕೆ ಆರಂಭವಾಯಿತು. ಚರ್ಚೆ ಮಾಡದೇ ಸಭೆ ಮುಕ್ತಾಯ ಕಂಡಿತು. ದೇವಸ್ಥಾನ ಹಣ ದುರ್ಬಳಕೆ ತನಿಖೆ ಗೆ ಒತ್ತಾಯ ಪ್ರತಿವರ್ಷ ಮೈಲಾರ ಜಾತ್ರೆ ಯ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ತಮ್ಮ ಕೊಳವೆ ಬಾವಿಯಿಂದ ಉಚಿತ ನೀರು ಕೊಟ್ಟಿದ್ದೇವೆ ಆದರೆ ದೇಗುಲದ ಹಿಂದಿನ ಇಒ ಜಿಲ್ಲಾಡಳಿತ ಕ್ಕೆ ನೀರಿಗೆ ಹಣ ಕೊಟ್ಟಿದ್ದು ಹೇಳಿ ತಪ್ಪು ಮಾಹಿತಿ ನೀಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಗಂಗಾಧರ ಕಳ್ಳಿಮಠ ಆರೋಪಿಸಿದರು.
ಜಾತ್ರೆಯ ನಂತರ ಸಾಂಕ್ರಾಮಿಕ ರೋಗ, ಟ್ರಾಫಿಕ್ ಸಮಸ್ಯೆ ಸ್ಥಳೀಯ ರು ಅನುಭವಿಸಬೇಕು ಎಂದು ಎಂ.ಬಿ.ಕೋರಿ ಸಭೆ ಗಮನ ಸೆಳೆದರು. ದೇವಸ್ಥಾನ ಕ್ಕೆ ವಾರ್ಷಿಕ ? 6 ಕೋಟಿ ಆದಾಯವಿದ್ದರೂ ದೇಗುಲ ಅಭಿವೃದ್ಧಿ ಇಲ್ಲ ಜತೆಗೆ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಹೆಸರಿನಲ್ಲಿ ಹಣ ದುರ್ಬಳಕೆ ಯಾಗಿದೆ ಎಂದು ರವಿ ಕುಮಾರ್, ಅನಿಲ ದಳವಾಯಿ ಒತ್ತಾಯಿಸಿದರು. ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಉಪ ವಿಭಾಗಧಿಕಾರಿ ವಿವೇಕಾನಂದ, ಡಿವೈಎಸ್ ಪಿ ಸಂತೋಷ ಚವ್ಹಾಣ್, ತಹಶೀಲ್ದಾರ್ ಕವಿತಾ, ತಾಲ್ಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರ, ಸಿಪಿಐ ದೀಪಕ್ ಭೂಸರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಮ್ಮ ತಳವಾರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಹೆಚ್.ಸವಿತಾ, ದೇಗುಲ ಇಒ ಮಲ್ಲಪ್ಪ ಇದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 