ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಖಂಡಿಸಿ ಇಂದು ಪ್ರತಿಭಟನೆ

Protest today condemning lathi charge on Panchmasali fighters

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್‌ ಖಂಡಿಸಿ ಇಂದು ಪ್ರತಿಭಟನೆ 

ಸಂಬರಗಿ 11: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಮಂಗಳವಾರ ಬೆಳಗಾವಿ ಸುವರ್ಣಸೌಧ ವಿಧಾನಸಭಾ ಎದುರಿಗೆ ಶಾಂತ ರೀತಿಯಿಂದ ಹೋರಾಟ ಮಾಡುತ್ತಿದ್ದ ಹೋರಾಟಗಾರರ ಮೇಲೆ ಅಮಾನುಷವಾಗಿ ಸರ್ಕಾರದ ಅಣತಿಯಂತೆ ಪೊಲೀಸರು ಲಾಟಿ ಪ್ರಹಾರ ಮಾಡಿದ್ದು ಮಾಡಿದ್ದು ಅತೀವ ದುಃಖ ಮತ್ತ ಖಂಡನೀಯವಾಗಿದೆ. ಹೋರಾಟವನ್ನು ಹತ್ತಿಕ್ಕುವ ದುರುದ್ದೇಶದಿಂದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರು ಲಾಟಿ ಪ್ರಹಾರ  ಮಾಡಿದ್ದಾರೆ ಎಂದು ಅಥಣಿ ತಾಲೂಕ ಪಂಚಮಸಾಲಿ ಅಡ್ವೋಕೇಟ್ ಪರಿಷತ್ ಅಧ್ಯಕ್ಷ ಎಸ್‌. ಎಸ್‌.ಪಾಟೀಲ್ ಬೊಮ್ಮನಾಳ ಅಸಮಾಧಾನ ವ್ಯಕ್ತಪಡಿಸಿದರು. 

ಈ ಕುರಿತು ಬೊಮ್ಮನಾಳ ಸ್ವ ಗ್ರಾಮದಲ್ಲಿ ಮಾಹಿತಿ ನೀಡಿದ ಅವರು ಪ್ರಜಾಪ್ರಭುತ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧವಾಗಿ ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹೋರಾಟವನ್ನು ಹತ್ತಿಕ್ಕುವ ಹಕ್ಕು ಯಾರಿಗೂ ಇಲ್ಲ. ನಮಗೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬರು ಶಾಸನಬದ್ಧವಾದ ಕೊಟ್ಟ ಹಕ್ಕನ್ನು ಪೊಲೀಸ ಲಾಠಿಚಾರ್ಜ್‌ ಮಾಡುವ ಮೂಲಕ ಹತ್ತಿಕ್ಕಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ನಿನ್ನೆ ಮಾಡಿದ ಲಾಟಿ ಪ್ರಹಾರದಿಂದ ತಕ್ಕ ಪಾಠ ಕಲಿಯಲಿದೆ. ಅದಕ್ಕೆ ಪಂಚಮಸಾಲಿ ಸಮಾಜದವರು ಒಗ್ಗೂಡಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಸಮಾಜದ ಮೇಲೆ ಆದ ಲಾಠಿಚಾರ್ಜ್‌ನ್ನು ಖಂಡಿಸಿ ಇದೆ ಗುರುವಾರ ದಿವಸ ತಾಲೂಕಿನಾದ್ಯಂತ ಸಮಾಜದ ಮುಖಂಡರಾದ ಅವಿನಾಶ್‌.ನಾಯಕ್, ಜಿಲ್ಲಾಧ್ಯಕ್ಷ ಧರಿಯಪ್ಪ ಟಕ್ಕನ್ನವರ್, ಹಿರಿಯ ವಕೀಲರಾದ ಬಿ. ಎಲ್‌. ಪಾಟೀಲ್, ಪಿ.ಜಿ.ಬಸಗುಪ್ಪಿ, ಕಾಂಗ್ರೆಸ್ ಮುಖಂಡರಾದ ಸುನೀಲ ಸಂಕ್, ಆನಂದ. ಹಿಪ್ಪರಗಿ, ಆರ್‌. ಎಲ್‌. ಪಾಟೀಲ್, ಎಂ.ಆರ್‌.ನಡುವಿನಮನಿ, ವಿನಯ್  ಪಾಟೀಲ್ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಹಸೀಲ್ದಾರರ ಮೂಲಕ  ರಾಜಪಾಲರು ಮತ್ತು ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.