ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಧರಣಿ

ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಧರಣಿ Protest to start a medical college

ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಧರಣಿ

ವಿಜಯಪುರ 16 : 29 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸಮಿತಿಯ ಅನಿರ್ದಿಷ್ಟ ಧರಣಿಯನ್ನು ಉದ್ದೆಶಿಸಿ ದಲಿತ ಸಂಘಟನೆಯ ರಾಜ್ಯ ಸಂಚಾಲಕ ಸಮಿತಿಯ ಅಧ್ಯಕ್ಷರಾದ ರಮೇಶ ಅಸಂಗಿಯವರು ಮಾತನಾಡುತ್ತಾ ಬಡ ಮತ್ತು ಹಿಂದುಳಿದ ಮಕ್ಕಳು ಕಲಿಯಲು ಸರಕಾರಿ ವೈದ್ಯಕೀಯ ಕಾಲೇಜಿನ ಅವಶ್ಯಕತೆ ಇದೆ ಅದಕ್ಕಾಗಿ ಸರಕಾರ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಅವಕಾಶ ಮಾಡಿಕೊಡಬಾರದು ಎಂದು ಒತ್ತಾಯಿಸಿದರು. ಮುಂದುವರೆದು ಮಾತನಾಡುತ್ತಾ ಅವರು ಕಡಿಮೆ ಕರ್ಚಿನಲ್ಲಿ ನಮ್ಮ ಊರಿನಲ್ಲಿ ಮಕ್ಕಳು ಕಲಿಯುತ್ತಾರೆ ಮತ್ತು ದುಬಾರಿ ಬೆಲೆ ತೆತ್ತು ಓದಿಸುವ ಸಾಮರ್ಥ್ಯ ಪಾಲಕರಿಗೆ ಇರುವುದಿಲ್ಲ ಅದಕ್ಕಾಗಿ ಎಲ್ಲಾ ದೃಷ್ಟಿಕೋನದಿಂದಲೂ ಸಾಕಷ್ಟು ಅವಕಾಶವಿರುವ ಜಾಗ ನಮ್ಮಲ್ಲಿದೆ ಅದಕ್ಕಾಗಿಯೇ ಸರಕಾರ ಹೆಚ್ಚೆತ್ತು ಕಾಲೇಜು ಆರಂಭಿಸಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಕಟ್ಟಬೇಕಾಗುತ್ತದೆ ಎಂದು ಕರೆ ನೀಡಿದರು. ಚಂದ್ರಕಾಂತ ಸಿಂಗೆ,ಚೆನ್ನು ಕಟ್ಟಿಮನಿ, ಶರಣು ಶಿಂದೆ, ಅಶೋಕ ಛಲವಾದಿ, ಪರಶುರಾಮ ದಿಂಡವಾರ, ವಿನಾಯಕ ಗುಣಸಾಗರ, ಪ್ರಕಾಶ ಗುಡಿಮನಿ, ಶ್ರೀನಿವಾಸ ಓಲೆಕಾರ, ರವಿ ಅಲಹಳ್ಳಿ, ಮಹೇಶ ಜವಳಿಗಿ ಇದ್ದರು.ಹೋರಾಟ ಸಮಿತಿಯ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅಕ್ರಂಮಷಳಕರ, ಅಣ್ಣರಾಯ ಈಳಗೇರ, ಸಿ.ಬಿ ಪಾಟೀಲ, ವಿ.ಎ ಪಾಟೀಲ, ಅಬ್ದುಲ್ ರೆಹಮಾನ್ ನಾಸಿರ್, ಚಂದ್ರಶೇಖರ್ ಘಂಟೆಪ್ಪಗೋಳ್, ಲಲಿತಾ ಬಿಜ್ಜರಗಿ, ಭರತಕುಮಾರ ಹೆಚ್ ಟಿ, ವಿದ್ಯಾವತಿ ಅಂಕಲಗಿ,ಕೆಎಫ್ ಅಂಕಲಗಿ, ಸುರೇಶ ಬಿಜಾಪುರ, ಶ್ರೀನಾಥ್ ಪೂಜಾರಿ, ಲಕ್ಷಣ ಹಂದ್ರಾಳ,ಬೋಗೇಶ್ ಸೋಲಾಪುರ, ಬಾಬು ಬಿಜಾಪುರ, ಅವಿನಾಶ್ ಐಹೊಳೆ, ಸಂಜು ಶೆಟಗಾರ, ಸೋಮು ಅಟ್ಟಿ, ಉಮೇಶ್ ಪಟ್ಟಣಶೆಟ್ಟಿ, ಶ್ರೀಶೈಲ, ಸಲಿಂ ಹೊಕ್ರಾನಿ , ಮಲ್ಲಿಕಾರ್ಜುನ ಹೆಚ್ ಟಿ, ಲಕ್ಷ್ಮಣ ಕಂಬಾಗಿ, ಸಿದ್ರಾಮ ಹಳ್ಳೂರ, ಮಲ್ಲಿಕಾರ್ಜುನ ಬಟಗಿ, ಗೀರೀಶ ಕಲಘಟಗಿ, ಜಗದೇವ ಸೂರ್ಯವಂಶಿ, ಶಿವಬಾಳಮ್ಮ ಕೊಂಡಗೂಳಿ, ಮೀನಾಕ್ಷಿ ಸಿಂಗೆ, ಕಾಮಿನಿ ಕಸಬೆ, ದಸ್ತಗಿರಿ ಉಕ್ಕಲಿ, ಗೀತಾ ಕಟ್ಟಿ,ಗೀತಾ ಹೆಚ್, ಗೀತಾ, ಕಾವೇರಿ ರಜಪೂತ, ಸುನೀತಾ ಮೋರೆ ಮುಂತಾದವರು ಭಾಗವಹಿಸಿದ್ದರು.