ಡಿ.30 ರಂದು ಹಿಂದೂಗಳ ಮೇಲಿನ ಹಿಂಸಾಚಾರ ಖಂಡಿಸಿ ಪ್ರತಿಭಟನೆ: ಪಾಟೀಲ
Protest on December 30th condemning violence against Hindus: Patil
ತಾಳಿಕೋಟಿ 28: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ತಾಳಿಕೋಟಿ ಪಟ್ಟಣದಲ್ಲಿ ಡಿಸೆಂಬರ್ 30 ರಂದು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಎಲ್ಲ ನಾಗರಿಕರ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದರು. ರವಿವಾರ ಪಟ್ಟಣದ ವಿಠಲ್ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿ ಹಿಂದೂ ಯುವಕ ದೀಪ ಚಂದ್ರದಾಸ್ ಅವರನ್ನು ಕಾರ್ಖಾನೆ ಆವರಣದಲ್ಲಿ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಇದು ಅತ್ಯಂತ ಅಮಾನವೀಯವಾದ ಕೃತ್ಯವಾಗಿದೆ.
ಹಿಂದೂ ಸಮಾಜವನ್ನು ಗುರಿಯಾಗಿರಿಸಿ ಅವರ ಮೇಲೆ ಹಲ್ಲೆ ಮತ್ತು ದೇವಸ್ಥಾನಗಳನ್ನು ದ್ವಂಸಗೊಳಿಸ ಲಾಗುತ್ತಿದೆ. ಇದನ್ನು ಇಡೀ ಮಾನವ ಸಮಾಜ ಖಂಡಿಸಿದೆ. ಭಾರತೀಯರಾದ ನಾವು ಶಾಂತಿಪ್ರಿಯರು ನಾವೆಂದೂ ಹಿಂಸೆಯನ್ನು ಪ್ರಚೋದಿಸಿದವರಲ್ಲ ಭಾರತಕ್ಕೆ ನಿರಾಶ್ರಿತರಾಗಿ ಬಂದ ಎಲ್ಲರನ್ನು ಆಶ್ರಯ ನೀಡಿ ಅಪ್ಪಿಕೊಂಡ ದೇಶ ನಮ್ಮದು, ಪಾಕಿಸ್ತಾನದವರ ಹಿಂಸೆಯಿಂದ ಬಾಂಗ್ಲಾದೇಶದವರನ್ನು ರಕ್ಷಿಸಿದವರು ನಾವು, ಅದನ್ನು ಇಂದು ಅವರು ಮರೆತಿರುವುದು ಅವರ ಕೃತಘ್ನತೆ ಯನ್ನು ಎತ್ತಿ ತೋರಿಸುತ್ತದೆ. ಈಗಾಗಲೇ ಜಗತ್ತಿನಾದ್ಯಂತ ಈ ಹೇಯ ಕೃತ್ಯವನ್ನು ಎಲ್ಲರೂ ಖಂಡಿಸಿದ್ದಾರೆ.
ನಮ್ಮ ದೇಶದಲ್ಲಿಯೂ ಸಹ ಈ ಘಟನೆ ಖಂಡಿಸಿ ಎಲ್ಲಡೆಯೂ ಪ್ರತಿಭಟನೆಗಳು ನಡೆಯುತ್ತಿವೆ ಆದ್ದರಿಂದ ನಾವು ಕೂಡಾ ಪಟ್ಟಣದಲ್ಲಿ ಡಿಸೆಂಬರ್ 30 ರಂದು ಈ ಘಟನೆಯನ್ನು ಖಂಡಿಸಿ ಶಾಂತ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಅಂದು ಬೆಳಿಗ್ಗೆ 10.30 ಗಂಟೆಗೆ ಅಂಬೇಡ್ಕರ್ ಸರ್ಕಲ್ ದಲ್ಲಿರುವ ಡಾಕ್ಟರ್ ಅಂಬೇಡ್ಕರ್ ಅವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಪ್ರತಿಭಟನೆ ಆರಂಭವಾಗುವುದು ಅಲ್ಲಿಂದ ಪ್ರತಿಭಟನಾ ಮೆರವಣಿಗೆ ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಬಸ್ ನಿಲ್ದಾಣದ ಮಾರ್ಗವಾಗಿ ಹಾದು ಶ್ರೀ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಮಾನ್ಯ ತಹಸಿಲ್ದಾರರಿಗೆ ಮನವಿ ಸಲ್ಲಿಸಲಾಗುವುದು
ಪಟ್ಟಣದ ಎಲ್ಲ ಹಿಂದೂ ಬಾಂಧವರು ಹಾಗೂ ಸರ್ವ ಸಮಾಜದ ನಾಗರಿಕರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಸಮಾಜದ ಮುಖಂಡರಾದ ಸುರೇಶ್ ಹಜೇರಿ, ಮಾನಸಿಂಗ್ ಕೊಕಟನೂರ, ತಮ್ಮಣ್ಣ ದೇಶಪಾಂಡೆ, ರಾಘವೇಂದ್ರ ಚವಾಣ್, ಪ್ರಕಾಶ ಹಜೇರಿ, ರಾಮು ಜಗತಾಪ, ಚನ್ನಬಸ್ಸು ದೇಸಾಯಿ, ಮುದಕಪ್ಪ ಬಡಿಗೇರ, ಕಳಕೂಸ ರಂಗರೇಜ, ಈಶ್ವರ್ ಹೂಗಾರ, ರಾಘು ಮಾನೆ, ರಾಜು ಅಲ್ಲಾಪೂರ, ಬಂಡು ದಾಯಫುಲೆ, ಸುಭಾಷ್ ಮಹೀಂದ್ರಕರ್, ಶಿವಾಜಿ ಸೇವಳಕರ್, ರವಿ ಕಟ್ಟಿಮನಿ, ರಾಮಣ್ಣ ಕಟ್ಟಿಮನಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 