ಭೂ ಮಾಲಿಕನ ದಬ್ಬಾಳಿಕೆ ಖಂಡಿಸಿ 11 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ-ಇಮ್ತಿಯಾಜ ಮಾನ್ವಿ

ಭೂ ಮಾಲಿಕನ ದಬ್ಬಾಳಿಕೆ ಖಂಡಿಸಿ 11 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ-ಇಮ್ತಿಯಾಜ ಮಾನ್ವಿ Protest in front of the District Collector's office on the 11th to condemn the oppression of the la


ಗದಗ-7 :   ಗದಗ ನಗರದ ರಹಮತನಗರ ಹತ್ತಿರವಿರುವ ನವನಗರ ಸ್ಲಂ ಪ್ರದೇಶ ರಿ.ಸ.ನಂ:594 ರಲ್ಲಿ ಸುಮಾರು 78 ಬಡ ಹಾಗೂ ಕೊಲಿಕಾರ್ಮಿಕ ಕುಟುಂಬಗಳು ಕಳೆದ 2000 ಇಸ್ವಿ ಮತ್ತು 2009 ರಲ್ಲಿ ಭೂ ಮಾಲಿಕನಿಂದ ನಿವೇಶನಗಳನ್ನು ಖರೀದಿ ಮಾಡಿದ್ದಾರೆ. ಈಗ ಸ್ಥಳೀಯ ಕುಟುಂಬಗಳು ಸರ್ಕಾರದ ವಿವಿಧ ಯೋಜನೆಗಳಲ್ಲಿ ಮನೆಗಳನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಆದರೆ ಭೂ ಮಾಲಿಕ ಇಲ್ಲಿಯ ಕುಟುಂಬಗಳಿಗೆ ನಿವೇಶನಗಳನ್ನು ಬಿಟ್ಟು ಕೊಡದೇ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿಯ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ದಲ್ಲಿ ಇದೇ ದಿನಾಂಕ:11-11-2025 ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಭೂ ಮಾಲಿಕನಿಂದ ರಕ್ಷಣೆ ನೀಡಬೇಕೆಂದು ಆಗ್ರಹಿಸಲಾಗುವುದೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್‌.ಮಾನ್ವಿ ತಿಳಿಸಿದರು. ಅವರು ನವನಗರ ಸ್ಲಂ ಪ್ರದೇಶದಲ್ಲಿ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿ ಸುಮಾರು 25 ವರ್ಷಗಳಿಂದ ನವನಗರ ಪ್ರದೇಶದ ಜನರು ತಮ್ಮ ನಿವೇಶನಗಳನ್ನು ಬಿಟ್ಟು ಕೊಡಬೇಕೆಂದು ಭೂ ಮಾಲಿಕನಿಗೆ ಹೇಳುತ್ತಾ ಬಂದರು ಸಹ ಭೂ ಮಾಲಿಕ ಮಾತ್ರ ಬಡವರ ಮತ್ತು ಕೊಲಿಕಾರ್ಮಿಕರ ಭೂಮಿಯನ್ನು ಕಬ್ಬಳಿಸಿಕೊಳ್ಳುವ ಉದ್ದೇಶದಿಂದ ಪದೇ-ಪದೇ ಜನರ ಮೇಲೆ ದಬ್ಬಾಳಿಕೆಯನ್ನು ನಡೆಸುತ್ತಿರುವುದು ನಾವು ಖಂಡಿಸುತ್ತೇವೆ ಎಂದು ಹೇಳಿದರು. ಮೋಹನ ಭಜಂತ್ರಿ ವಕೀಲರು ಮಾತನಾಡಿ ನವನಗರ ಪ್ರದೇಶದಲ್ಲಿ ನೂರಾರು ಬಡ ಹಾಗೂ ಕೊಲಿಕಾರ ಕುಟುಂಬಗಳು ತಮ್ಮ ಸ್ವಂತ ಮನೆಯ ಕನಸು ಕಾಣುತ್ತ ಸುಮಾರು ವರ್ಷಗಳಿಂದ ಕೊಡಿ ಇಟ್ಟಿರುವ ಹಣದಲ್ಲಿ ಮನನೆಗಳನ್ನು ಕಟ್ಟಿಕೊಳ್ಳಲು ಮುಂದಾಗಿದ್ದಾರೆ, ಇನ್ನು ಕೆಲವು ಕುಟುಂಬಗಳು ತಮ್ಮ ಆರ್ಥಿಕ ಸ್ಥಿತಿ ಸರಿ ಇಲ್ಲದ ಕಾರಣ ಚಿಕ್ಕ-ಚಿಕ್ಕ ಮನೆಗಳಲ್ಲಿ ಜೀವನ ನಡೆಸುತ್ತ ಬಂದಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಭೂ ಮಾಲಿಕನಿಂದ  ಆಗಿನ ಮಾರುಕಟ್ಟೆ ಬೆಲೆ ಪ್ರಕಾರ 25 ರಿಂದ 50 ಸಾವಿರ ವರೆಗೊ ಹಣವನರನ್ನು ನೀಡಿ ನಿವೇಶನಗಳನ್ನು ಖರೀದಿ ಮಾಡಿಕೊಂಡಿದ್ದಾರೆ. ಈಗ ಸುಮಾರು 3 ವರ್ಷಗಳಿಂದ ಸರ್ಕಾರದ ವಸತಿ ಯೋಜನೆಯಾದ ಪ್ರಧಾನ ಮಂತ್ರಿಗಳ ಆವಾಸ್ ಯೋಜನೆಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ ಭೂ ಮಾಲಿಕ ಬಡವರ ಹಾಗೂ ಕೊಲಿಕಾರ್ಮಿಕರ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದ್ದು. ಇದನ್ನು ಖಂಡಿಸಿ ಸ್ಲಂ ಸಮಿತಿಯಿಂದ ದಿನಾಂಕ: 11-11-2025 ರಂದು ಹಮ್ಮಿಕೊಂಡಿರುವ ಹೋರಾದಲ್ಲಿ ಎಲ್ಲರೂ ತಪ್ಪದೇ ಭಾಗವಹಿಸಿ ಭೂ ಮಾಲಿಕನ ದೌರ್ಜನ್ಯವನು ಖಂಡಿಸಬೇಕೆಂದು ಹೇಳಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೆಹಬೂಬಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ಸೈಯದಅಲ್ತಾಫ ರಾಣೆಬೆನ್ನೂರ, ಶರಣಪ್ಪ ಸೂಡಿ, ಸಲೀಂ ಹರಿಹರ, ಖಾಜಾಸಾಬ ಇಸ್ಮಾಯಿಲನವರ, ಮೌಲಾಸಾಬ ಗಚ್ಚಿ, ಬಸವರಾಜ ಕಳಸದ, ಶೇಖಪ್ಪ ಶೆಗಣಿ, ಮೆಹಬೂಬ ಮುಲ್ಲಾ, ಗೌಸಸಾಬ ಅಕ್ಕಿ, ರಿಜ್ವಾನ ಮುಲ್ಲಾ, ರಫೀಕ ಬರದೂರ, ನಾರಾಯಣ ಅಂಜಿಖಾನೆ, ಖಾಜಾಸಾಬ ಉಮಚಗಿ, ಯಾಸೀನ ನದಾಫ, ಮೋಮಿನ ಶೇಖ, ಕಸ್ತೂರಿ ಹಳ್ಳಿ, ಮೆಹಬೂಬ ಹುಯಿಲಗೋಳ, ದಾದಾಪೀರ ನರಗುಂದ, ಜಂದಿಸಾಬ ಢಾಲಾಯತ, ಅಶೋಕ ಗುಮಾಸ್ತೆ, ಹಜರತಅಲಿ ಹಾವೇರಿ, ಗೌಸ ಉಮಚಗಿ, ಖಾಜಾಸಾಬ ಗಬ್ಬೂರ ಹಾಗೂ ನವನಗರ ಪ್ರದೇಶದ ನೂರಾರು ನಿವಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.