ಮಾರ್ಚ-15 ರಂದು ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ

Protest from Mahatma Gandhi Circle in the city to the District Collector's office on March 15

ಮಾರ್ಚ-15 ರಂದು  ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಪ್ರತಿಭಟನೆ  

ಗದಗ 12: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಾಕಷ್ಟು ಅವ್ಯವಹಾರ ನಿರಂತರ ಬಡ್ಡಿ ವ್ಯವಹಾರ ನಡೆಯುತ್ತಿದ್ದು,  ಫೈನಾನ್ಸ ದಂಧೆ ಕೋರರು ಅಮಾಯಕ ಜನರನ್ನ ಸುಲಿಗೆ  ಮಾಡುತ್ತಾ ಬಂದಿದ್ದು,ಅವರ ವಿರುದ್ಧ ಅನೇಕ ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದರು ಯಾವುದೇ ಪ್ರಯೋಜನವಾಗಿಲ್ಲ.ಆದ್ದರಿಂದ ಮಾರ್ಚ-15 ರಂದು  ನಗರದ ಮಹಾತ್ಮ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿ ,ವರೆಗೆ ಪ್ರತಿಭಟನೆ ಮಾಡುವುದಾಗಿ  ಅಂಬಿಕಾ ಕಬಾಡಿ ತಿಳಿಸಿದರು.  ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿಭಟನೆ ಮಾಡಿದರೆ ಜೀವ ಬೆದರಿಕೆ ನಿರಂತರವಾಗಿ 6 ದಿನದಿಂದ ನಡೆಯುತ್ತಿದ್ದು,  ಬಡ್ಡಿ ದಂಧೆಕೋರರು ಅಮಾಯಕ ಜನರಿಂದ ದಬ್ಬಾಳಿಕೆಯಿಂದ ಆಸ್ತಿಯನ್ನ ಬರೆಸಿಕೊಂಡು ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವುದಾಗಿ ಆರೋಪ ಮಾಡಿದ ಅವರು ಅಮಾಯಕರ ಆಸ್ತಿ ಲಪಟಾಯಿಸಲು ನಕಲಿ ಸಹಿ ಮಾಡಿರುತ್ತಾರೆ.ಇಂಥವರ ವಿರುದ್ಧ ಮಾರ್ಚ-15 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ಇವರ ಬೆದರಿಕೆಗೆ ನಾವು ಹೆದರುವುದಿಲ್ಲ, ಸಾಕ್ಷಿಗಳಿದ್ದರು ಸರಕಾರ ಕ್ರಮ ವಹಿಸುತ್ತಿಲ್ಲ ಎಂದರು. ನಕಲಿ ಆಧಾರ್ ಸೃಷ್ಟಿಸಿ  ಅಮಾಯಕರ ಆಸ್ತಿ ಪೋಡಿ ಮಾಡುವ ಅಧಿಕಾರಿಗಳು ನೊಂದಣಿ ಇಲಾಖೆಯಲ್ಲಿದ್ದಾರೆ. ಅಮಾಯಕ ಬಡವರಿಗೆ ನ್ಯಾಯ ಒದಗಿಸಬೇಕೆಂದು ನಾನು ಅಂದುಕೊಂಡಿರುವುದಾಗಿ ಅಂಬಿಕಾ ಕಬಾಡಿ ಹೇಳಿದರು. ಬಡ್ಡಿ ದಂಧೆ ಕೋರರು ಗದಗ ಜಿಲ್ಲೆಯಿಂದ ಇತರೆ ಜಿಲ್ಲೆಯಲ್ಲಿಯೂ ತಮ್ಮ ವ್ಯವಹಾರ ನಡೆಸಿರುವುದಾಗಿ ಆರೋಪಿಸಿದರು.  ಪತ್ರಿಕಾ ಗೋಷ್ಠಿ ವೇಳೆ ಗಣಪತಿ ಹಬೀಬ,ದಾವಲ ಮುಳಗುಂದ ಸಮೀರ ವಕ್ಕಲಿ ಸೇರಿದಂತೆ ಇತರರಿದ್ದರು.