ರಾಜ್ಯ ಸರ್ಕಾರದಿಂದ ಎಸ್.ಐ.ಆರ್ ತಿರಸ್ಕರಿಸಿ ನಿರ್ಣಯ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ
Protest demanding a decision from the state government rejecting the SIR
ಗದಗ-11, ಕೇಂದ್ರ ಸರ್ಕಾರವು ಚುನಾವಣಾ ಆಯೋಗಯೋಗವನ್ನು ತಮ್ಮ ಕೈಗೊಂಬೆಯಾಗಿ ದುರಪಯೋಗಿಸಿ ಎಸ್.ಐ.ಆರ್. ವಿಶೇಷ ತೀವ್ರ ಪರಿಷ್ಕರಣೆ ಪ್ರಕಿಯೆಯನ್ನು ನಡೆಸುವ ಮೂಲಕ ನಮ್ಮ ದೇಶದ ಕೊಟ್ಯಾಂತರ ಮೂಲ ನಿವಾಸಿಗಳ ಸಂವಿಧಾನಬದ್ದ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ, ಇದನ್ನು ವಿರೋಧಿಸುವ ಮೂಲಕ ರಾಜ್ಯ ಸರ್ಕಾರದಿಂದ ಎಸ್.ಐ.ಆರ್ ತಿರಸ್ಕರಿಸಿ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಮಿತಿ ಕರೆಯ ಮೇರೆಗೆ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ ನಮ್ಮ ದೇಶದ ಬಡಜನ ವಿರೋಧಿ, ಕಾರ್ಮಿಕ ವಿರೋಧಿ, ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಹಾಗೂ ಮಹಿಳೆಯರ ವಿರೋಧಿ ಕರಾಳ ಕಾಯ್ದೆಯನ್ನು ರಾಜ್ಯ ಸರ್ಕಾರದಿಂದ ಇದಕ್ಕೆ ವಿರೋಧ ವ್ಯಕ್ತ ಪಡಿಸಿ ನಮ್ಮ ರಾಜ್ದದ ಮುಖ್ಯಮಂತ್ರಿಗಳು ಎಸ್.ಐ.ಆರ್ ಪ್ರಕ್ರ್ರಿಯೆಗೆ ನಾವು ಅವಕಾಶ ನೀಡುವುದಿಲ್ಲ ಎಂದು ಭಹಿರಂವಾಗಿ ಹೇಳಿಕೆ ನೀಡಬೇಕು. ಚುನಾವಣೆ ಆಯೋಗವು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಬಿಟ್ಟು ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ.
ಇತ್ತಿಚಿಗೆ ಬಿಹಾರದಲ್ಲಿ ಚುನಾವಣಾ ಆಯೋಗವು ಎಸ್.ಐ.ಆರ್ ಪ್ರಕ್ರಯೆದಿಂದ ಸರಿಸುಮಾರು 65 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ. ಹಾಗೂ ಎಸ್.ಐ.ಆರ್ ಸಮೀಕ್ಷೆಯಿಂದ ಉತ್ತರ ಪ್ರದೇಶದಲ್ಲಿ ಸುಮಾರು 2.89 ಕೋಟಿ ಅಂದರೆ ಶೇ:18.70 ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇದರಲ್ಲಿ ಹೆಚ್ಚಿಂದಾಗಿ ಬಡವರು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸಂವಿಧಾನಬದ್ದ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಬಗೊಂಡಿದ್ದು ಇಲ್ಲಿಯು ಕೂಡಾ ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ದಲಿತ ಸಂಘರ್ಸ ಸಮಿತಿ ಸಂಚಾಲಕರಾದ ವೆಂಕಟೇಶಯ್ಯ ಮಾತನಾಡಿ ಈ ಪ್ರಕ್ರಿಯೆಯಿಂದ ಕೇವಲ 12 ರಾಜ್ಯಗಳಲ್ಲಿ 7.89 ಕೋಟಿಗೊ ಹೆಚ್ಚು ಮತದಾರರನ್ನು ತೆಗೆದುಹಾಕುವ ಕುತಂತ್ರವನ್ನು ನಡೆಸಲಾಗಿದೆ. ಈಗ ಇದೇ ಮಾದರಿಯನ್ನು ಕರ್ನಾಟಕದಲ್ಲಿ ಈಗಾಗಲೇ ಎಸ್.ಐ.ಆರ್ ಪ್ರಕ್ರಿಯೆ ಪ್ರಾರಂಭವಾಗಿದ್ದು ಲಕ್ಷಾಂತರ ಮತದಾರರು ಪಟ್ಟಿಯಿಂದ ಹೊರಬೀಳುವ ಭೀತಿ ಎದುರಾಗಿದೆ.
ಮತದಾರರ ಹಕ್ಕು ಕಸಿಯುವ ಸಂಚು ಪರಿಷ್ಕರಣೆಯ ಹೆಸರಿನಲ್ಲಿ ಒಂದು ವರ್ಗದ ಹಾಗೂ ಒಂದು ಸಮುದಾಯದ ಮತಗಳನ್ನು ಕಡಿತಗೊಳಿಸುವ ಸಂಚು ಮಾಡಲಾಗುತ್ತಿದೆ. ಈ ಪ್ರಕಿಯೆಗೆ ಬೇಕಾಗುವ ಎಲ್ಲ ದಾಖಲೆಗಳನ್ನು ಸಲ್ಲಿಸಿದರು ಸಹ ಸುಮಾರು 22.7 ಲಕ್ಷ ಮಹಿಳಾ ಮತದಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಅದರಲ್ಲಿ ಅಧಿಕವಾಗಿ ದಲಿತರು, ಮುಸ್ಲಿಂ ಸಮುದಾಯದ ಜನರು ಮತದಾನದ ಹಕ್ಕನ್ನು ಕಳೆದಕೊಂಡಿದ್ದಾರೆ ಎಂದು ಹೇಳಿದರು. ಸಿ.ಐ.ಟಿ.ಯು ಸಂಘಟನೆ ಜಿಲ್ಲಾ ಅಧ್ಯಕ್ಷರಾದ ಮಹೇಶ ಹಿರೇಮಠ ಮಾತನಾಡಿ ಎಸ್.ಐ.ಆರ್ ಪ್ರಕ್ರಿಯೆ ಬಗ್ಗೆ ಆತಂಕರಹಿತರಾಗಿ ಮಾತನಾಡಿರುವ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಎಸ್.ಐ.ಆರ್. ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷವು ರಾಜಕೀಯ ದೃಷ್ಠಿಕೋನದಿಂದ ನೋಡುವುದಿಲ್ಲ ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ ಈಗಾಗಲೇ ಬೇರೆ-ಬೇರೆ ರಾಜ್ಯಗಳಲ್ಲಿ ಈ ಎಸ್.ಐ.ಆರ್ ಪ್ರಕ್ರಿಯೆಯಿಂದ ಮೂಲ ನಿವಾಸಿಗಳಿಗೆ ಆಗುತ್ತಿರುವದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ರಾಜ್ಯದಲ್ಲಿ ಯಾವುದೇ ಕಾರಣಕ್ಕೊ ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಬೇಕು ಎಂದು ಹೇಳಿದರು.
ಎಸ್.ಎಫ್.ಐ ಸಂಘಟನೆ ಮುಖಂಡರಾದ ಗಣೇಶ ರಾಠೋಡ ಮಾತನಾಡಿ ವಿಶೇಷ ಮತಪಟ್ಟಿ ಪರಿಷ್ಕರಣೆ ಹಿಂದೆ ಕೇಂದ್ರದ ಬಿಜೆಪಿ ಸರ್ಕಾರದ ಕುತಂತ್ರವಿದೆ. ಚುನಾವಣಾ ಆಯೋಗವನ್ನು ದುರಪಯೋಗ ಪಡಿಸಿಕೊಂಡು ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿರಿಸಿ ಚುನಾವಣೆ ಗೆಲ್ಲಲು ಬಿಜೆಪಿ ಈ ಪರಿಷ್ಕರಣೆ ನಡೆಸುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಮೈಕ್ರೋ ಅಬ್ಸರ್ವರಗಳು ಸ್ಥಳೀಯ ಸಿಬ್ಬಂದಿಗಳನ್ನು ಬದಿಗೊತ್ತಿ ಮನಬಂದಂತೆ ಮತದಾರರ ಪಟ್ಟಿಯಲ್ಲಿ ಹೆಸೆರಗಳನ್ನು ಅಳಿಸುತ್ತಿದ್ದಾರೆ. ಮದುವೆಯ ನಂತರ ಉಪನಾಮ ಬದಲಿಸದ ಮಹಿಳೆಯರು ಹಾಗೂ ಕೆಲಸಕ್ಕೆ ಒಲಸೆ ಹೋದವರನ್ನು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪರಿಗಣಿಸಿ ಮತದಾನದ ಹಕ್ಕಿನಿಂದ ವಂಚಿಸಲಾಗುತ್ತಿದೆ. ಇಂತಹ ಗಂಭೀರವಾಗಿರುವ ವಿಷಯವನ್ನು ಮುಖ್ಯಮಂತ್ರಿಗಳು ಅರಿತುಕೊಂಡು ಪಶ್ಚಿಮ ಬಂಗಾಲ, ಕೇರಳ, ತಮೀಳನಾಡು ಹಾಗೂ ಬೇರೆ-ಬೇರೆ ರಾಜ್ಯ ಸರ್ಕಾರಗಳು ಮಾಡಿರುವ ಮಾದರಿಯಂತೆ ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೊ ಎಸ್.ಐ.ಆರ್ ಪ್ರಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಸರ್ಕಾರದಿಂದ ನಿರ್ಣಯವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಸಾಗಿದೆ.
ಮಹೇಶ ಹಿರೇಮಠ, ಗಣೇಶ ರಾಠೋಡ, ಜಮಾಯಿತೆ ಉಲ್ಲಮಾ ಕಮೀಟಿ ಮುಖಂಡರಾದ ಮೌಲಾನಾ ಶಬ್ಬೀರಹ್ಮದ ಬೋದ್ಲೇಖಾನ ಗದಗ-ಬೆಟಗೇರಿ ಅಂಜುಮನ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಹ್ಮದಯುಸುಫ ನಮಾಜಿ, ಬಾಬಾಜಾನ ಬಳಗಾನೂರ, ಕೃಷ್ಣಾ ಹಡಪದ, ಲೈಂಗಿಕ ಅಲ್ಪಸಂಖ್ಯಾತರ ಸಂಘಟನೆ ಅಧ್ಯಕ್ಷರಾದ ಪುಷ್ಪಾ ಬಿಜಾಪೂರ, ಆರಾಧನಾ ಬಣಕಾರ, ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ. ಮಹಿಳಾ ಸಮಿತಿ ಅಧ್ಯಕ್ಷರಾದ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ಆಶಾ ಜೊಲಗುಡ್ಡ, ಸಾಕ್ರುಬಾಯಿ ಗೋಸಾಯಿ, ರಫೀಕ ಜಮಾಲಖಾನವರ, ಸಲೀಂ ಹರಿಹರ, ಫೈರುಜಾ ಗುಳಗುಂದಿ, ಮಹ್ಮದಸಾಬ ಗಡಾದ, ಬಾಷಾಸಾಬ ಡಂಬಳ, ರೇಶ್ಮಾ ನಾಗನೂರ, ಖಾಜಾಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಜಂದಿಸಾಬ ಢಾಲಾಯತ, ಮಲೀಕ ಉಮಚಗಿ, ಮೆಹಬೂಬ ಮುಲ್ಲಾ, ಗೌಸಸಾಬ ಅಕ್ಕಿ, ನಾರಾಯಣ ಗಾಯಕವಾಡ ಹಾಗೂ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 