ವನ್ಯಜೀವಿಗಳ ರಕ್ಷಣೆ ನಿಮ್ಮೆಲ್ಲರ ಹೊಣೆ: ಸಂಜೀವ ಸಂಸುದ್ದಿ

ವನ್ಯಜೀವಿಗಳ ರಕ್ಷಣೆ ನಿಮ್ಮೆಲ್ಲರ ಹೊಣೆ: ಸಂಜೀವ ಸಂಸುದ್ದಿ Protecting wildlife is everyone's responsibility: Sanjeeva Sansuddi

ಯರಗಟ್ಟಿ 09 : ಸಮೀಪದ ಸತ್ತಿಗೇರಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಸವದತ್ತಿ ವಲಯ ಇವರು ಆಯೋಜಿಸಿದ್ದ ವಿಶ್ವ ವನ್ಯಜೀವ ದಿನಾಚರಣೆ ಆಚರಿಸಲಾಯಿತು.ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ವನ್ಯ ಜೀವಿಗಳ ಸಂರಕ್ಷಣಾ ಮಹತ್ವದ ಜಾಗೃತಿ ಜಾಥಾ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.ಕಾರ್ಯಕ್ರಮ ಉದ್ದೇಶಿಸಿ ಆರ್‌.ಎಫ್‌.ಓ ಸಂಜೀವ ಸಂಸುದ್ದಿ ಮಾತನಾಡಿದ ಅವರು ಅಳಿಯುತ್ತಿರುವವನ್ಯಜೀವಿಗಳು ಮತ್ತು ಅರಣ್ಯ ಸಂಪತ್ತನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಪ್ರಕೃತಿಯ ಸಮತೋಲನ, ಜೀವವೈವಿಧ್ಯದ ಉಳಿವಿಗೆ ಮತ್ತು ಮುಂದಿನ ಪೀಳಿಗೆಯ ಸುಸ್ಥಿರ ಭವಿಷ್ಯಕ್ಕಾಗಿ ವನ್ಯಜೀವಿ ಸಂರಕ್ಷಣೆ ಅತ್ಯಗತ್ಯ.

ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಿ, ಅಳಿವಿನಂಚಿನಲ್ಲಿರುವ ಪ್ರಾಣಿ-ಸಸ್ಯಗಳನ್ನು ರಕ್ಷಿಸುವ ಸಂಕಲ್ಪ ಮಾಡೋಣ.ಜೀವವೈವಿಧ್ಯದ ರಕ್ಷಣೆ ವನ್ಯಜೀವಿಗಳು ಮತ್ತು ಅರಣ್ಯಗಳು ನಮ್ಮ ಭೂಮಿಯ ಅಮೂಲ್ಯ ಆಸ್ತಿಯಾಗಿದ್ದು, ಪರಿಸರ ವ್ಯವಸ್ಥೆಯ ಸಮತೋಲನಕ್ಕೆ ಅಗತ್ಯ. ಹವಾಮಾನ ಬದಲಾವಣೆ ತಡೆ ವನ್ಯಜೀವಿಗಳ ಸಂರಕ್ಷಣೆಯು ಹವಾಮಾನ ಬದಲಾವಣೆಯನ್ನು ಎದುರಿಸಲು ಪರಿಸರವನ್ನು ನಿಯಂತ್ರಿಸಲು ನೇರವಾಗಿ ಸಹಾಯ ಮಾಡುತ್ತದೆ ಎಂದು ಹೇಳಿದರು.ನಂತರ ಸಂಪನ್ಮೂಲ ವ್ಯಕ್ತಿಯಾದ ವಾಯ್‌. ಆರ್‌. ನದಾಫ ಮಾತನಾಡಿ ಮನುಷ್ಯನ ಚಟುವಟಿಕೆಗಳಿಂದಾಗಿ ಅನೇಕ ಪ್ರಾಣಿ ಸಂಕುಲಗಳು ಅಳಿವಿನ ಅಂಚಿನಲ್ಲಿವೆ,

ಇವುಗಳನ್ನು ಉಳಿಸುವುದು ನಮ್ಮ ಆದ್ಯತೆ.ಇದು ಕೇವಲ ಸರ್ಕಾರದ ಕೆಲಸವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೆ ಪ್ರೀತಿ ಹಾಗೂ ಕಾಳಜಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ಶಾಲಾ ಪ್ರಾಂಶುಪಾಲರಾದ ವಿ. ವೈ. ಕಲ್ಯಾಣಿ, ಮಾಜಿ ಗ್ರಾ. ಪಂ. ಉಪಾಧ್ಯಕ್ಷ ಗುರು ವಾಲಿ, ಎಸ್‌.ಡಿ.ಎಂ.ಸಿ ಉಪಾಧ್ಯಕ್ಷ ಬಸಯ್ಯ ಸಾಲಿಮಠ, ಉಪ ವಲಯ ಅರಣ್ಯಾಧಿಕಾರಿ ಸೋಮಶೇಖರ ಪಾವಟೆ, ಡಿಆರ್‌.ಎಫ.ಓ. ಎಂ. ಬಿ. ಬಾಗವಾನ, ಸಾಮಾಜಿಕ ಉಪ ವಲಯ ಅರಣ್ಯಾಧಿಕಾರಿ ಬಿ. ಎಮ್‌. ಉಪ್ಪಾರ, ಗ್ರಾ. ಪಂ. ಕಾರ್ಯದರ್ಶಿ ಸುರೇಶ ತೋಟದ, ಉಮೇಶ ಮಾಗುಂಡನವರ, ವಿಠ್ಠಲ ಭಾಂಗಿ, ಶಿಕ್ಷಕರಾದ ಎ. ಎಂ. ಸಿಂಗಾಡೆ, ವಾಯ್‌. ಆರ್‌. ಕೋಟಗಿ, ಎಸ್‌. ಸಿ. ಹೊಸಟ್ಟಿ, ಎಚ್‌. ಎಸ್‌. ಶೆಟ್ಟಪ್ಪನವರ, ಗಸ್ತು ಅರಣ್ಯಪಾಲಕರಾದ ದುರುಗಪ್ಪ ಅರಟಗಲ್, ಮಹಾಂತೇಶ ಡೊಂಬರ, ಆನಂದ ಹನಸಿ, ಮಹಾಂತೇಶ ತೇಲಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.