ಸಮಾನ ನ್ಯಾಯ ವಿತರಣೆಯಲ್ಲಿ ಪ್ರವಾದಿಗಳು ಕಟ್ಟುನಿಟ್ಟಾಗಿದ್ದರು- ಗೋನಾಳ
Prophets were strict in distributing equal justice - Gonala
ಸಮಾನ ನ್ಯಾಯ ವಿತರಣೆಯಲ್ಲಿ ಪ್ರವಾದಿಗಳು ಕಟ್ಟುನಿಟ್ಟಾಗಿದ್ದರು- ಗೋನಾಳ
ಕೊಪ್ಪಳ 05: ನ್ಯಾಯ ನಿರಾಕರಣೆಯಾಗದ ಸಾಮಾಜಿಕ ವ್ಯವಸ್ಥೆ ನಿರ್ಮಾಣವಾಗಬೇಕು ಪ್ರವಾದಿ ಮಹಮ್ಮದ್ (ಸ) ರವರು ಸಮಾನ ನ್ಯಾಯ ವಿತರಣೆಯ ಬಗ್ಗೆ ಅತೀವ ಕಟ್ಟು ನಿಟ್ಟಾಗಿದ್ದರು ಎಂದು ಹಿರಿಯ ಸಾಹಿತಿ ಪತ್ರಕರ್ತ ಜಿ,ಎಸ್, ಗೋನಾಳ ಹೇಳಿದರು ಅವರು ರವಿವಾರ ನಗರದ ರೈಲ್ವೆ ನಿಲ್ದಾಣ ಹತ್ತಿರ ಇರುವ ಮಸ್ಜಿದೆ ಆಲಾ ಆವರಣದಲ್ಲಿ ಜಮಾತೆ ಇಸ್ಲಾಮಿ ಹಿಂದ್, ಕೊಪ್ಪಳ ಘಟಕ ಏರಿ್ಡಸಿದ ನ್ಯಾಯದ ಹರಿಕಾರ ಪೈಗಂಬರ್ ಮೊಹಮ್ಮದ್ (ಸ) ರವರ ಜೀವನ ಚರಿತ್ರೆ, ಸೀರತ್ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಏರಿ್ಡಸಿದ ಪ್ರಬಂಧ ಸ್ಪರ್ಧೆ ಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡುತ್ತಾ ನ್ಯಾಯದ ಹರಿಕಾರ ಪೈಗಂಬರ್ ಪ್ರವಾದಿ ಮೊಹಮ್ಮದ್ (ಸ ) ರವರ ವಿಚಾರಧಾರೆ ಯುವ ಪೀಳಿಗೆಗೆ ಪರಿಚಯಿಸುವಂಥ ಕೆಲಸ ನಡೆಯಬೇಕು ಎಂದರುಮುಂದುವರೆದು ಮಾತನಾಡಿ ಜೀವನ ಎಂಬುದು ಇಹಲೋಕಕ್ಕೆ ಮುಗಿಯದ ಮತ್ತು ಪರಲೋಕದವರಿಗೆ ವಿಸ್ತರಿಸುವ ಒಂದು ಪ್ರಯಾಣ ವಾಗಿದ್ದು ಅಲ್ಲಿ ದೇವನು ಪ್ರತಿಯೊಬ್ಬರನ್ನು ವಿಚಾರಿಸುತ್ತಾನೆ ಅಲ್ಲಿ ತಾರತಮ್ಯ ಇರುವುದಿಲ್ಲ ಎಂದು ಹೇಳಿದರು, ಜಮಾತೆ ಇಸ್ಲಾಮಿ ಹಿಂದ್ ಸಮಿತಿಯವರು ರಾಜ್ಯದ್ಯಂತ ಸೌಹಾರ್ದತೆ ಬೆಳೆಸುವ ಕೆಲಸ ಮಾಡುತ್ತಿದ್ದಾರೆ, ಪರಸ್ಪರ ಸಹೋದರತ್ವ ಭಾವನೆ ಬೆಳೆಸಿಕೊಂಡು ನಮ್ಮ ನಮ್ಮ ಬದುಕು ಕಟ್ಟಿಕೊಂಡರೆ ಜೀವನ ಸಾರ್ಥಕವಾಗುತ್ತದೆ,
ಸಮಾಜಕ್ಕೆ ನಿಸ್ವಾರ್ಥದ ಸೇವೆ ಅವಶ್ಯಕತೆ ಇದೆ ಈ ದಿಶೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಕೈಗೊಂಡಿರುವ ಹಲವಾರು ಜನಪರ ಕಾರ್ಯಕ್ರಮಗಳು ಸಮಾಜಕ್ಕೆ ತಲುಪಿದೆ, ಮಾನವೀಯ ಮೌಲ್ಯ ಬೆಳೆಸಿಕೊಂಡು ಪ್ರವಾದಿಗಳು ಸೂಫಿ ಸಂತರು ಮಹಾಪುರುಷರು ತೋರಿಸಿದ ಮಾರ್ಗದಲ್ಲಿ ನಾವು ನಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದು ಸಾಹಿತಿ ಹಿರಿಯ ಪತ್ರಕರ್ತ ಜಿ.ಎಸ್. ಗೋನಾಳ್ ವಿವರಿಸಿದ್ದರು,ಸಮಾರಂಭದ ಅಧ್ಯಕ್ಷತೆ ವಹಿಸಿದ ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯದ ಸಹ ಕಾರ್ಯದರ್ಶಿ ರಿಯಾಜ್ ಅಹಮದ್ ರೋಣ ಮಾತನಾಡಿ ಅಸಮಾನತೆ ಹೋಗಲಾಡಿಸಿ ಸಮಾನತೆ ಕಾಣುವ ಸುಂದರ ಸಮಾಜ ನಿರ್ಮಾಣ ಮಾಡುವ ಕೆಲಸ ಪ್ರತಿಯೊಬ್ಬರು ಮಾಡಬೇಕು, ಸಮ ಸಮಾಜ ನಿರ್ಮಾಣವಾಗಬೇಕು ನ್ಯಾಯದಿಂದ ಅನ್ಯಾಯ ಕೊನೆಗಾಣಿಸಬೇಕು ಪ್ರೀತಿ ವಿಶ್ವಾಸ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಜೀವನ ಸಾಗಿಸಬೇಕು, ಪ್ರವಾದಿಗಳು ತೋರಿದ ಮಾರ್ಗ ನಾವುಗಳು ಅನುಸರಿಸಬೇಕು ಉತ್ತಮ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಅವರು ಹೇಳಿದರು, ಕಾರ್ಯಕ್ರಮದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ರಾಜ್ಯ ಸಹ ಕಾರ್ಯದರ್ಶಿ ಹೂಮೇರಾ ಫಾರೂಕ್, ಶಿಕ್ಷಕ ಫಯಾಜ್ ಷರೀಫ್ ಮಾತನಾಡಿದರು, ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ಅಧ್ಯಕ್ಷ ಸೈಯದ್ ಹಿದಾಯತ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ತಾಜುದ್ದೀನ್ ರವರು ಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು, ಮೌಲಾನ ನಬಿಲ್ ಉಮರಿ ಆರಂಭದಲ್ಲಿ ಕುರಾನ್ ಪಟಣ ಮಾಡಿದರು,
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 