ವೃತ್ತಿ ರಂಗಭೂಮಿ ನಟ ರಾಜು ತಾಳಿಕೋಟೆ ರಂಗ ನಮನ

ವೃತ್ತಿ ರಂಗಭೂಮಿ ನಟ ರಾಜು ತಾಳಿಕೋಟೆ ರಂಗ ನಮನ Professional theatre actor Raju Talikote pays tribute to Ranga Namana

ವೃತ್ತಿ ರಂಗಭೂಮಿ ನಟ ರಾಜು ತಾಳಿಕೋಟೆ ರಂಗ ನಮನ  

ಹೂವಿನ ಹಡಗಲಿ  14:   ಹಾಸ್ಯ ನಟ ವೃತ್ತಿ ರಂಗಭೂಮಿ ದಿಗ್ಗಜ ರಾಜು ತಾಳಿಕೋಟೆ ನಿಧನದಿಂದ ರಂಗಭೂಮಿಗೆ ತುಂಬಲಾರದ ನಷ್ಟ ಎಂದು ರಂಗಭೂಮಿ ಪೋಷಕ ಬೀರಬ್ಬಿ ಬಸವರಾಜ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಇಲ್ಲಿನ ರಂಗಭೂಮಿ ಗೆಳೆಯರು ಸಾಹಿತ್ಯಾಸಕ್ತರು ಪತ್ರಕರ್ತರುಒಡನಾಡಿಗಳು ಸಹಯೋಗದಲ್ಲಿ ರಾಜು ತಾಳಿಕೋಟೆ ರಂಗ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲಿಯುಗದ ಕುಡಕ ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆ ನಿರ್ಮಿಸಿದ ನಾಟಕ.ಕುಡುಕನ ಪಾತ್ರ ಕ್ಯಾಸೆಟ್ ರಾಜು ತಾಳಿಕೋಟೆ ರವರಿಗೆ ಬಹಳಷ್ಟು ಹೆಸರು ತಂದು ಕೊಟ್ಟಿತ್ತು ಎಂದು ತಿಳಿಸಿದರು.ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ಸಾಕಷ್ಟು ನಷ್ಟ ಏಳು ಬೀಳುಗಳ ನಡುವೆ ಜನರಿಗೆ ಮನರಂಜನೆ ನೀಡುವ ಪರಂಪರೆ ಮುಂದುವರೆಸಿವೆ ಎಂದು ಹೇಳಿದರು.ಕನ್ನಡ ಜಾಗೃತಿ ಸಮಿತಿ ಜಿಲ್ಲಾ ಸದಸ್ಯ ಸುರೇಶ ಅಂಗಡಿ ಸಿನಿಮಾಗಳಲ್ಲಿ ಉತ್ತರ ಕನ್ನಡ ಭಾಷೆಯ ಸೊಗಡನ್ನು ಉಣಬಡಿಸಿದ ಅಪರೂಪದ ನಟ ಎಂದು ಬಣ್ಣಿಸಿದರು.ಪತ್ರಕರ್ತರಾದ ಬಿಚ್ಚುಗತ್ತಿ ಖಾಜಾ ಹುಸೇನ್, ಎಂ ದಯಾನಂದ, ದೇವೇಂದ್ರ​‍್ಪ ಎಲ್ ಖಾದರಬಾಷಾ ನಾಗರಾಜ್ ಮಲ್ಕಿಒಡೆಯರ್ ಗಾಯಕ ನಾಗೇಶ್ ರಾಜು ತಾಳಿಕೋಟೆ ರಂಗ ಸೇವೆ ಕುರಿತು ಮಾಹಿತಿ ಹಂಚಿಕೊಂಡರು.ಶಾಖಾ ಗ್ರಂಥಾಲಯಾಧಿಕಾರಿ ಬಿ ನಾರಾಯಣ್, ಎಐಟಿಯುಸಿ ಸುರೇಶ ಹಲಗಿ ಗುರುಸ್ವಾಮಿ ಡಿ ಎಂ ವೀರಯ್ಯ ಸ್ವಾಮಿ, ಸುಭಾಷ್ ಹೊಳಲು ಇತರರು ಇದ್ದರು.