ಪ್ರಾ. ಆ. ಕೇಂದ್ರದ ಸದುಪಯೋಗ ಪಡೆದುಕೊಳ್ಳಿ: ಶಾಸಕ ಕಟಕದೋಂಡ
Prof. That. Take advantage of the Centre: MLA Katakadonda
ಪ್ರಾ. ಆ. ಕೇಂದ್ರದ ಸದುಪಯೋಗ ಪಡೆದುಕೊಳ್ಳಿ: ಶಾಸಕ ಕಟಕದೋಂಡ
ಚಡಚಣ 11: ಮೂಲಭೂತ ಸೌಭ್ಯಗಳಲ್ಲಿ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆದಕಾರಣ ನೂತನವಾಗಿ ಪ್ರಾರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು” ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.
ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ರೂ. 4.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಸರ್ಕಾರಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು.
ದೇವರ ನಿಂಬರಗಿ ಗ್ರಾಮದ ಹಿರಿಯ ಮುಖಂಡ ಈ ಆಸ್ಪತ್ರೆ ಆರಂಭಕ್ಕೆ ರೂ. 1ಲಕ್ಷ ದಾನ ನೀಡಿದ ಹಾಸಿಂಪೀರ ಮುಲ್ಲಾ ಮಾತನಾಡಿ ಈ ದೇವರ ನಿಂಬರಗಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲದ ಕಾರಣ ರೋಗಿಗಳು ಚಡಚಣ, ವಿಜಯಪೂರ ಮತ್ತಿತರೆಡೆ ಇರುವ ಆಸ್ಪತ್ರೆಗೆ ಅಲೆದಾಡುವಂತಾಗುತ್ತಿತ್ತು, ಈಗ ಬಹಳ ವರ್ಷಗಳಿಂದ ಬಡದಾಡಿ ಕಷ್ಟ ಪಟ್ಟು ತರಲಾದ ಆಸ್ಪತ್ರೆಯ ಬಹುದಿನಗಳ ಬೇಡಿಕೆ ಈಡೇರಿಕೆಯ ಕನಸು ನನಸಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ದೇವರ ನಿಂಬರಗಿ ಗ್ರಾ.ಪಂ ಅಧ್ಯಕ್ಷ ಭೀಮನಗೌಡ ಕ.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಆಸ್ಪತ್ರೆ ಆಗಲು ನಮ್ಮ ಗ್ರಾಮದ ಹಿರಿಯರ ಸತತ ಪ್ರಯತ್ನದಿಂದ ಈಗ ಅದು ಈಡೇರಿದೆ. ಗ್ರಾಮಸ್ಥರು ಮತ್ತು ಸಾರ್ವಜನಿಕರು ಈ ನೂತನ ಆಸ್ಪತ್ರೆಯ ಪ್ರಯೋಜನ ಪಡೆದುಕೊಂಡು ಶಿಸ್ತು ಮತ್ತು ಸ್ವಚ್ಚತೆ ಕಾಪಾಡಿಕೊಂಡು ಬರಬೇಕು ಎಂದು ಮನವಿ ಮಾಡಿದರು.
ವಿಜಯಪುರ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ ಕುಮಾರ ಗುಣಾರಿ ಮಾತನಾಡಿ, ಈ ಆಸ್ಪತ್ರೆಯ ಸುತ್ತಲೂ ಕಂಪೌಂಡ ಮತ್ತು ಇನ್ನೂ ಅವಶ್ಯವಿರುವ ಸೌಲಭ್ಯ ಒದಗಿಸಿಕೊಡುವುದಾಗಿ ಹೇಳಿದರು.
ಇಂಡಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಕೃಷ್ಣಕುಮಾರ್ ಜಾಧವ, ದೇವರ ನಿಂಬರಗಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಎನ್.ಅಗರಖೇಡ, ಪಿಡಿಒ ವಿ ಪಿ.ರಾಠೋಡ, ಹಾಶಿಂಪಿರ ಮುಲ್ಲಾ ಚಡಚಣ ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ರವಿದಾಸ ಜಾಧವ, ನಿರ್ದೇಶಕ ಮಸ್ತಾಕ ಮುಲ್ಲಾ, ಧಾರವಾಡ ಎಇಇ ಮಹಾಂತೇಶ ಕೆ, ವಿಜಯಪುರ ಎಇಇ ಎಂ ಎಂ.ಕಟ್ಟಿಮನಿ, ರಾಜು ಲೋಗಿ, ಭೀಮಾಶಂಕರ ಬಿರಾದಾರ, ಮಹಾದೇವ ಪೌಟಿ, ರಮೇಶ ಭೂಸನೂರ, ರಾಜೇಂದ್ರ ಸಿಂಗೆ ಮತ್ತು ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 