ಪ್ರೊ. ಬಿ.ಕೆ.ರವಿ ಅವರಿಗೆ ವಿ.ವಿಯ ಬೋಧಕ ಬೋದಕೇತರ ಸಿಬ್ಬಂಧಿವತಿಯಿಂದ ಸನ್ಮಾನಿನ ಕಾರ್ಯಕ್ರಮ

ಪ್ರೊ. ಬಿ.ಕೆ.ರವಿ ಅವರಿಗೆ ವಿ.ವಿಯ ಬೋಧಕ ಬೋದಕೇತರ ಸಿಬ್ಬಂಧಿವತಿಯಿಂದ ಸನ್ಮಾನಿನ ಕಾರ್ಯಕ್ರಮ Prof. B.K. Ravi felicitated by the faculty and non-teaching staff of the university

              ಕೊಪ್ಪಳ 11:   ಕೊಪ್ಪಳ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳು ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಕ ಆಗಿರುವ  ಪ್ರೊ. ಬಿ.ಕೆ.ರವಿ ಅವರಿಗೆ  ಶನಿವಾರ ಸಂಜೆ ಸಾಕಷ್ಟು ಅಭಿಮಾನಿಗಳು, ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರು, ವಿ.ವಿಯ ಬೋಧಕ ಬೋದಕೇತರ ಸಿಬ್ಬಂಧಿ, ಇನ್ನಿತರರು ಗೌರವಪೂರ್ವಕವಾಗಿ ಶಾಲು ಹಾರಗಳಿಂದ ಸನ್ಮಾನಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಸದ್ಯ ಬೆಂಗಳೂರು ಉತ್ತರ ವಿ.ವಿ ಕುಲಪತಿಗಳಾಗಿರುವ ಪ್ರೊ.ಬಿ.ಕೆ.ರವಿಯವರು, ಶನಿವಾರ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದಾರೆ ಎಂದು ಮಾಹಿತಿ ತಿಳಿಯುತ್ತಲೇ ಮಧ್ಯಾಹ್ನದ ವೇಳೆಗೆ ಭಾರಿ ಪ್ರಮಾಣದಲ್ಲಿ  ಅಭಿಮಾನಿಗಳ ಬಳಗ ವಿಶ್ವವಿದ್ಯಾಲಯಕ್ಕೆ ಅಗಮಿಸಿತ್ತು.

             ಪ್ರೊ.ಬಿ.ಕೆ. ರವಿಯವರ ಆಡಳಿತ, ಪ್ರೋತ್ಸಾಹ, ಪ್ರೀತಿ ಸ್ಮರಿಸಿ, ಮೆಚ್ಚಿಗೆ ವ್ಯಕ್ತಪಡಿಸಿ, ಸನ್ಮಾನಿಸಿತು. ಈ ವೇಳೆ   ಸಿಂಡಿಕೇಟ್ ಸದಸ್ಯರಾದ  ಡಾ.ಕೆ.ಸಿ.ಕುಲಕರ್ಣಿ, . ವಿನೋದ ಹುಲಿ,  ಕೆ.ಹೆಚ್‌.ಛತ್ರದ  ಇನ್ನಿತರ ಸಿಂಡಿಕೇಟ್ ಸದಸ್ಯರು, ಇನ್ನಿತರರು ಉಪಸ್ಥಿತರಿದ್ದರು.  ನಂತರ ಮಾತನಾಡಿದ  ಪ್ರೊ. ಬಿ.ಕೆ. ರವಿಯವರು ಕೊಪ್ಪಳ ವಿಶ್ವವಿದ್ಯಾಲಯವನ್ನು  ಅಭಿವೃದ್ದಿಗೊಳಿಸಲು ತಾವು ಅಡಿಪಾಯ ಹಾಕಿದ್ದು, ಮುಂದಿನ ದಿನಗಳಲ್ಲಿ ಅದು ಹೆಚ್ಚಿನಪ್ರಗತಿ ಸಾಧಿಸಲಿದೆ. ಹಿಂದುಳಿದ ಕೊಪ್ಪಳ ಭಾಗದ ವಿದ್ಯಾರ್ಥಿಗಳ ಜ್ಞಾನಾಸಕ್ತಿಯನ್ನು  ತಣಿಸಲಿದೆ.   ವಿದ್ಯಾರ್ಥಿಗಳ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಗೆ ನೆರವಾಗಲಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕೆಂದು ತಿಳಿಸಿದರು. ನೂತನ ಪ್ರಭಾರಿ ಕುಲಪತಿಗಳಾದ ಪ್ರೊ. ಎಸ್‌.ವಿ.ಡಾಣಿಯವರು ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.