ಲೋಕದರ್ಶನ ವರದಿ
ಇಂಡಿ 25: ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾದ ಡಾ. ಮಲ್ಲಿಕಾಜರ್ುನ ಸಂ ಮೇತ್ರಿ ಹಾಗೂ ದಂಪತಿಗಳನ್ನು ಗ್ರಾಮದ ಜನರು ಬರಮಾಡಿಕೊಂಡು ಗ್ರಾಮದ ಶ್ರೀಸಿದ್ಧಾರೂಢ ಮಠದ ಮುಂಭಾಗದಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ಎತ್ತಿನಗಾಡಿಯಲ್ಲಿ ಮೇರವಣಿಗೆ ಪ್ರಾರಂಭಿಸಿದರು.
ಮೆರವಣಿಗೆ ಗಾಡಿಗೆ ಹಾಗೂ ಎತ್ತುಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಿ ಎತ್ತುಗಳಿಗೆ ಧೂಲ ಹಾಕಿ ಮದುವಣಗಿತ್ತಿಯಂತೆ ಶೃಂಗರಿಸಿದರು.
ಗ್ರಾಮದ ಜನತೆ ಮತ್ತು ಕನ್ನಡದ ಅಭಿಮಾನಿಗಳು ಅಧ್ಯಕ್ಷರ ಸಾರೋಟದ ಮೆರವಣಿಗೆಯಲ್ಲಿ ಕನ್ನಡಪರ ಜೈಘೋಷಗಳನ್ನು ಮೊಳಗಿಸುತ್ತಾ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಹಲವಾರು ಜೈಘೋಷಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುತ್ತಾ ಸಾಗುತ್ತಿದ್ದಂತೆ ಸವರ್ಾಧ್ಯಕ್ಷರ ಎತ್ತಿನ ಚಕ್ಕಡಿಯ ಮುಂಭಾಗ ವಿವಿಧ ವಾದ್ಯ ವೈಭೋಗಗಳಾದ ಡೋಳ್ಳು ಕುಣಿತ, ನವಿಲು ಕುಣಿತ, ತಾಸ್ಯ ವಾದ್ಯ, ಚಿಟ್ಟಹಲಿಗೆ, ಕುದುರೆ, ಗೊಂಬೆಗಳ ಕುಣಿತ ಹೀಗೆ ಅನೇಕ ವಿವಿಧ ನಾದ ವಿನೋದಾವಳಿಗಳು ಮನಸೂರೆಗೊಂಡವು. ಸವರ್ಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜನತೆಗೆ ಮನತುಂಬಿ ಕೈ ಮುಗಿದು ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ಸಾಗಿದರು.
ನಂತರ ಪ್ರಮುಖ ರಸ್ತೆಗಳ ಸಂಚರಿಸಿ ವೇದಿಕೆಯತ್ತ ಅಧ್ಯಕ್ಷರನ್ನು ಬರಮಾಡಿಕೊಂಡರು. ಗ್ರಾ ಪಂ ಅಧ್ಯಕ್ಷ ವಿಠ್ಠಲಗೌಡ ಪಾಟೀಲ, ತಾಪಂ ಸದಸ್ಯ ಅಣ್ಣಾರಾಯ ಬೀದರಕೊಟಿ, ಹಣಮಂತ ಖಂಡೆಕಾರ, ತಾಲೂಕು ಕಸಾಪ ಅಧ್ಯಕ್ಷ ಡಾ.ಕಾಂತು ಇಂಡಿ, ಮಲ್ಲು ಮಡ್ಡಿಮನಿ, ಎನ್ ಎಸ್ ಜಾಧವ, ರಾಜು ಕುಲಕಣರ್ಿ ಡಾ. ಶಿವಶರಣ ಭೀರನ್ನಹಳ್ಳಿ, ಪ್ರಭು ಹೊಸಮನಿ, ಬಸವರಾಜ ರಾವೂರ, ರಮೇಶ ನಾಯಕ, ಎಂ.ಪಿ.ಭೈರಜಿ, ಜಿ.ಜಿ.ಬರಡೊಲ, ಎ.ಎಸ್.ಐ ಬಾಣಿಕೋಲ, ಆರ್ ಎಮ್ ಕನ್ನೂರ, ಸಂತೋಷ ಬಡಿಗೇರ, ಸಂಗಮೇಶ ಜುಮನಾಳ, ಸಿದ್ದಪ್ಪ ಬಂಡಗಾರ, ವೈ.ಜಿ.ಬಿರಾದಾರ, ಬಸವರಾಜ ಗೊರನಾಳ, ಪ್ರಕಾಶ ಬಿರಾದಾರ, ವಿಜಯಕುಮಾರ ಹತ್ತರಕಿ ಹಾಗೂ ಗ್ರಾಮದ ಮುಖಂಡರು ಕ.ಸಾ.ಪ ಆಡಳಿತ ಮಂಡಳಿ ಮೆರವಣಿಯಲ್ಲಿದ್ದರು.