ಕಾರವಾರ 25: ವಿವಿಧ ವ್ಯಸನದಿಂದ ಸಮಾಜ ದುರಂತದೆಡೆಗೆ ನಡೆಯುತ್ತಿದೆ ಮತ್ತು ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಡಿಶನಲ್ ಎಸ್ಪಿ ಡಾ.ಗೋಪಾಲ ಎಂ.ಬ್ಯಾಕೋಡ್ ಅಭಿಪ್ರಾಯಪಟ್ಟರು.
ಇಲ್ಲಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸುರಭಿ ಸಮಗ್ರ ಮದ್ಯ ವ್ಯಸನ ಮುಕ್ತ ಕೇಂದ್ರ , ಕಾರವಾರದ ನಿಗಳ ಪುನರ್ವಸತಿ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರ ಕನ್ನಡ ಜಿಲ್ಲೆ ಕಾರವಾರ, ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಅಂತರರಾಷ್ಟ್ರೀಯ ಮಾದಕ ವಸ್ತುಗಳ ಸೇವನೆಯ ತಡೆ ಹಾಗೂ ಅಕ್ರಮ ಕಳ್ಳಸಾಗಾಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಮಾದಕ ವ್ಯಸನವನ್ನು, ಅಕ್ರಮ ಕಳ್ಳ ಸಾಗಣೆ ತಡೆಗಟ್ಟುವುದು ಇಂದಿನ ತುತರ್ು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯ ಎಂದ ಅವರು ಹೇಳಿದರು.
ಕಾರವಾರ ಕಿಮ್ಸನ ಸಹ ಪ್ರಾಧ್ಯಾಪಕ ಡಾ.ವಿಜಯರಾಜ್ ಮಾತನಾಡಿ ಮಾದಕ ವ್ಯಸನದಿಂದ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಅಪಾರ ತೊಂದರೆಗಳು ಉಂಟಾಗುತ್ತವೆ ಮತ್ತು ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗಲು ಕುಟುಂಬದಲ್ಲಿನ ಪ್ರೀತಿಯ ಕೊರತೆ ಕಾರಣ. ಯುವ ವಯಸ್ಸಿನ ಮಕ್ಕಳ ಮೇಲೆ ಪೋಷಕರು ನಿಗಾ ಇಡಬೇಕು. ಪ್ರೀತಿಸಬೇಕು. ತಪ್ಪು ಮಾಡಿದಾಗ ತಿದ್ದಬೇಕು ಎಂದರು.
ಹಿರಿಯ ಸಿವ್ಹಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಟಿ.ಗೋವಿಂದಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯುವಕರು ಮಾದಕ ದ್ರವ್ಯಗಳಿಂದ ದೂರವಿದ್ದು, ಪಠ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳತ್ತ ಮನಸ್ಸು ಹರಿಸಬೇಕು. ಹೆಚ್ಚು ಸಾಹಿತ್ಯವನ್ನು ಓದಬೇಕು ಎಂದರು. ರಾಮಕೃಷ್ಣ ಆಶ್ರಮದ ಭವೇಶಾನಂದ ಮಹಂತ್ ಹಾಗೂ ವಕೀಲ ಎ.ಆರ್.ಬಿ. ಡಿಸೋಜಾ ಮತ್ತು ಕಾಲೇಜು ಪ್ರಿನ್ಸಿಪಾಲ ಡಾ. ಸ್ಟ್ಯಾನಿ ಪಿಂಟೊ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಮುನ್ನಾ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾಥರ್ಿಗಳು ಮಾದಕ ದ್ರವ್ಯ ವಿರೋಧಿ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಅಜ್ಜಪ್ಪ ಸೊಗಲದ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ
ಪ್ರಥಮ ಪಿ.ಯು.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯ ವಿದ್ಯಾಥರ್ಿಗಳು ಹಾಜರಿದ್ದು ಹಾಗೂ ಸುರಭಿ ವ್ಯಸನ ಮುಕ್ತ ಕೇಂದ್ರದ ಫಲಾನುಭವಿಗಳು ಭಾಗವಹಿಸಿದ್ದರು.