ಲಸಿಕೆ ಹಾಕಿಸಿ ರೇಬಿಸ್ ತಡೆಗಟ್ಟಿಸಿ: ಡಾ.ಕೆ.ಶೋಭಾಸಲಹೆ
Prevent rabies by getting vaccinated: Dr. K. Shobha advises
ಲಸಿಕೆ ಹಾಕಿಸಿ ರೇಬಿಸ್ ತಡೆಗಟ್ಟಿಸಿ: ಡಾ.ಕೆ.ಶೋಭಾಸಲಹೆ
ಬಳ್ಳಾರಿ 24: ರೇಬಿಸ್ ಗಂಭೀರ ಮಾರಣಾಂತಿಕ ಕಾಯಿಲೆಯಾಗಿದ್ದು, ನಾಯಿ ಕಚ್ಚಿದ ತಕ್ಷಣ ನಿರ್ಲಕ್ಷ್ಯ ಮಾಡದೇ ಮತ್ತು ಗಿಡಮೂಲಿಕೆಗಳ ಓಷಧಿ ಕೊಡಿಸದೇ ಹತ್ತಿರದ ಆರೋಗ್ಯ ಕೇಂದ್ರದಲ್ಲಿ ರೇಬಿಸ್ ಇಮ್ಯೂನೊಗ್ಲೊಬಿಲಿನ್ ಲಸಿಕೆ ಹಾಕಿಸಬೇಕು ಎಂದು ಮಿಲ್ಲರ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಶೋಭಾ ಅವರು ಹೇಳಿದರು.
ಮಿಲ್ಲರ್ ಪೇಟೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹನುಮಾನ್ ನಗರ ಬಡಾವಣೆಯಲ್ಲಿ ನಾಯಿ ಕಚ್ಚುವುದರಿಂದ ಬರುವ ರೇಬೀಸ್ ಕಾಯಿಲೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಾಯಿ ಕಡಿತದ ಜಾಗದಲ್ಲಿ ಸ್ವಚ್ಛ ನೀರಿನಿಂದ 10 ರಿಂದ 15 ನಿಮಿಷಗಳ ಕಾಲ ಸೋಪಿನಿಂದ ಚೆನ್ನಾಗಿ ತೊಳೆಯಬೇಕು. ರಕ್ತ ಸ್ರಾವ ಆಗುತ್ತಿದ್ದಲ್ಲಿ ಆ ಭಾಗಕ್ಕೆ ಸ್ವಚ್ಛವಾದ ಬಟ್ಟೆಯಿಂದ ಅಥವಾ ಹತ್ತಿಯಿಂದ ನಿಧಾನವಾಗಿ ಒತ್ತಿ ಸಾಧ್ಯವಾದಷ್ಟು ಬೇಗ ರಕ್ತಸ್ರಾವ ನಿಲ್ಲಿಸಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಅಥವಾ ಆ ಬಡಾವಣೆಯ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ಶರತ್ ಸಿ.ಆರ್., ಚೇತನ್ ಎಂ.ಕೆ., ಎಂ.ಎಲ್.ವಿ ಸೋಮಶೇಖರ್ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ತಾಯಮ್ಮ, ನವೀನ, ಶ್ರುತಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 