ಕಾರವಾರ 1: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು. ಸಮಾಜದ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಅವರ ಸತತ ಪರಿಶ್ರಮ ನೆನಪಿಡುವಂತಹದ್ದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್.ಕೆ. ಅಭಿಪ್ರಾಯಪಟ್ಟರು.
ಕಾರವಾರದ ಪತ್ರಿಕಾಭವನದಲ್ಲಿ ಉತ್ತರ ಕನ್ನಡ ಜರ್ನಲಿಸ್ಟ ಯೂನಿಯನ್ ಹಾಗೂ ವಾತರ್ಾ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧಿಜೀ ಹೇಳುವಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನಾವು ಮಾಡುವ ಕೆಲಸದ ಫಲ ಸಿಗುವಂತಿದ್ದರೆ , ಆ ಕೆಲಸವನ್ನು ನಿರ್ಭಯದಿಂದ ಮಾಡಿ ಎಂಬ ಮಾತನ್ನು ಪತ್ರಕರ್ತರು ನೆನಪಿಡಬೇಕು. ಇವತ್ತು ಸಮಾಜ ಅತ್ಯಂತ ಸೂಕ್ಷ್ಮವಾಗಿದೆ. ಇಲ್ಲಿನ ಆಗಿಹೋಗುಗಳನ್ನು ಎಲ್ಲರೂ ಗಮನಿಸುತ್ತಿರುತ್ತಾರೆ. ಹಾಗಾಗಿ ಪತ್ರಕರ್ತರ ಜವಾಬ್ದಾರಿ ಇವತ್ತು ಹೆಚ್ಚಿದೆ ಎಂದರು.
ಇಂಗ್ಲೀಷ್ ಪತ್ರಿಕೆಗಳ ಓದುಗರು ಕಡಿಮೆ. ಆದರೂ ಇಂಗ್ಲೀಷ್ ಬಲ್ಲವರು ಇಂಗ್ಲೀಷ್ ಬಾರದ ಅತ್ಯಂತ ದೊಡ್ಡ ಸಮೂಹವನ್ನು ಆಳುತ್ತಾರೆ ಮತ್ತು ನೀತಿ ನಿರೂಪಣೆಗಳನ್ನು ರೂಪಿಸುವಂತಾಗಿದೆ. ಹಾಗಾಗಿ ಕೆಲವೊಮ್ಮೆ ಸವರ್ಾಧಿಕಾರಿ ಧೋರಣೆಯ ಅಪಾಯವೂ ಇದೆ. ಹಾಗಾಗಿ ಕನ್ನಡ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಬೇಕಿದೆ. ಅಲ್ಲದೇ ಬಹುದೊಡ್ಡ ಜನ ಸಮುದಾಯದ ಬೇಕು ಬೇಡಗಳನ್ನು ನಿರ್ಧರಿಸಲು ಕನ್ನಡ ಬಲ್ಲ ಅಧಿಕಾರಿ ವರ್ಗವೂ ಸಹ ಮುಖ್ಯವಾಗುತ್ತದೆ. ಪತ್ರಿಕೆಗಳು ಧನಾತ್ಮಕ ಅಂಶಗಳನ್ನು ವರದಿ ಮಾಡುವಂತೆ. ಸಮಾಜವನ್ನು ತಿದ್ದುವ ಕೆಲಸವನ್ನು ಸಹ ಮಾಡಬೇಕು. ಆದರೆ ಅತೀಯಾದ ಗಾಸಿಪ್ ಮತ್ತು ಋಣಾತ್ಮಾಕ ಅಂಶಗಳಿಗೆ ಹೆಚ್ಚು ಒತ್ತು ಕೊಡಬಾರದು ಎಂದರು. ಆದರೆ ವಿರೋಧ ಪಕ್ಷದಂತೆ ಪತ್ರಿಕೆಗಳು ಕೆಲಸ ಮಾಡಬೇಕು ಎಂದರು. ಜನಪ್ರತಿನಿಧಿಗಳಿಗೆ ಸಮಸ್ಯೆಗಳನ್ನು ತಲುಪಿಸಲು ಅಧಿಕಾರಿಗಳ ಧ್ವನಿಗಿಂತ ಪತ್ರಕರ್ತರ ಧ್ವನಿ ಗಟ್ಟಿಯಾದುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ನುಡಿದರು.
ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ : ಸುವರ್ಣ ಟಿವಿಯ ಕರೆಂಟ್ ಆಫೇರ್ರ್ಸ ಎಡಿಟರ್ ಜಯಪ್ರಕಾಶ್ ಶೆಟ್ಟಿ ಅವರಿಗೆ 2019ನೇ ಸಾಲಿನ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹಾಗೂ ಜರ್ನಲಿಸ್ಟ ಯೂನಿಯನ್ ಜಿಲ್ಲಾ ಅಧ್ಯಕ್ಷ ಕಡತೋಕ ಮಂಜು ಅವರು ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಜಯಪ್ರಕಾಶ್ ಶೆಟ್ಟಿ ಮಾತನಾಡಿ ದಕ್ಷಿಣ ಕನ್ನಡದ ನನಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಲು ಸಂತೋಷವಾಗುತ್ತಿದೆ. ಮಾಧ್ಯಮಗಳು ಆಳುವ ಸಕರ್ಾರ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಆದರೆ ವಿರೋಧ ಪಕ್ಷಗಳಿಗಾಗಿ ಕೆಲಸ ಮಾಡಬಾರದು. ಜನರಿಗೆ ನ್ಯಾಯ ಸಿಗುವಂತೆ, ಅವರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸ್ಪಂದಿಸುವಂತೆ ಕೆಲಸ ಮಾಡಬೇಕು. ಅಷ್ಟು ಒಳ್ಳೆಯ ಕೆಲಸ ಮಾಡಿದರೆ ಸಮಾಜ ನಮ್ಮನ್ನು ನೆನಪಿಡುತ್ತದೆ. ಪತ್ರಕರ್ತರು ಅನೇಕ ಒತ್ತಡಗಳ ನಡುವೆ ಕೆಲಸ ಮಾಡಬೇಕು. ಆದರೂ ಜನಪರ ಧೋರಣೆ ಬಿಡಬಾರದು ಎಂದರು.
ಪತ್ರಿಕೋದ್ಯಮದ ಬಿಕ್ಕಟ್ಟುಗಳ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಪತ್ರಿಕೋದ್ಯಮದ ಮುಂದೆ ಹಲವಾರು ಸವಾಲುಗಳಿವೆ. ಕನ್ನಡ ದೃಶ್ಯ ಮಾಧ್ಯಮ ಅತ್ಯಂತ ಸಂಕ್ರಮಣ ಸನ್ನಿವೇಶದಲ್ಲಿದ್ದು ವಿಶ್ವಾಸರ್ಹತೆ ಉಳಿಸಿಕೊಳ್ಳುವ ಸವಾಲು ಎದುರಿಸುತ್ತಿದೆ. ಭ್ರಮಾತ್ಮಕ ಲೋಕದಿಂದ ವಾಸ್ತವದ ಲೋಕಕ್ಕೆ ಮಾಧ್ಯಮ ಜಗತ್ತು ಬರಬೇಕಿದೆ. ಹರ್ಮನ್ ಮೊಗ್ಲಿಂಗ್, ಅಂಬೇಡ್ಕರ್, ಗಾಂಧಿಜೀ, ಲಂಕೇಶ್ ಪತ್ರಕರ್ತರಾಗಿ ಮಾಡಿದ ಕೆಲಸವನ್ನು ಒಮ್ಮೆ ಅವಲೋಕನ ಮಾಡುವುದು ಒಳಿತು ಎಂದರು,
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ.ಶಿವಾನಂದ ನಾಯಕ ಜಯಪ್ರಕಾಶ್ ಶೆಟ್ಟಿ ಅವರ ಸಾಮಾಜಿಕ ಕಳಕಳಿ ನೆನಪಿಡುವಂತಹದ್ದು ಎಂದರು.
ಅಧ್ಯಕ್ಷತೆವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಪತ್ರಕರ್ತರು ಸತ್ಯ ಸಂಗತಿಗಳನ್ನು ಬರೆಯಬೇಕು. ಮಾಧ್ಯಮಗಳು ವಿಶ್ವಾಸರ್ಹತೆ ಉಳಿಸಿಕೊಳ್ಳಬೇಕು ಎಂದರು. ಶಾಸಕಿಯಾಗಿ ಒಂದು ವರ್ಷದಲ್ಲಿ ಮನಮುಟ್ಟಿ ಕೆಲಸ ಮಾಡುತ್ತಿದ್ದೇನೆ ಎಂದರು.
ವಾತರ್ಾಧಿಕಾರಿ ಹಿಮಂತರಾಜು ಮಾತನಾಡಿ ಸತ್ಯವಲ್ಲದ,ಗಾಳಿ ಸುದ್ದಿಗಳನ್ನು ಹರಡುವುದನ್ನು ತಪ್ಪಿಸಲು ಹಾಗೂ ಜನರಿಗೆ ಖಚಿತ ಮಾಹಿತಿ ನೀಡಲು ಪತ್ರಿಕೆ ತರುತ್ತೇನೆ ಎಂದಿದ್ದ ಹರ್ಮನ್ ಮೊಗ್ಲಿಂಗ್ ಪತ್ರಕರ್ತರ ಆದರ್ಶವಾಗಬೇಕು ಎಂದರು. ಪ್ರಸ್ತಾವಿಕವಾಗಿ ಜರ್ನಲಿಸ್ಟ ಯೂನಿಯನ್ ಜಿಲ್ಲಾಧ್ಯಕ್ಷ ಕಡತೋಡ ಮಂಜು ಮಾತನಾಡಿದರು. ದೀಪಕ್ ಶೆಣ್ವಿ ಸ್ವಾಗತಿಸಿದರು. ಸಮಾಜದ ಗಣ್ಯರು, ವಿವಿಧ ಕಾಲೇಜುಗಳ ಉಪನ್ಯಾಸಕರು, ಪ್ರಾಚಾರ್ಯರು, ವಿದ್ಯಾಥರ್ಿನಿಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.