ಪತ್ರಕರ್ತರ ಸಂಘದಲ್ಲಿ ಭರವಸೆ ಸೃಷ್ಟಿಸಿದ ಅಧ್ಯಕ್ಷ ಹನುಮಂತ ಹಳ್ಳಿಕೇರಿ
ಕೊಪ್ಪಳ 08: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕದಲ್ಲಿ ಇತ್ತೀಚಿಗಷ್ಟೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಸಂಘದ ಚುಕ್ಕಾಣಿ ಹಿಡಿದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಸಂಘ ಸಂಘಟಿಸುವಲ್ಲಿ ಮತ್ತು ವಿವಿಧ ಕಾರ್ಯಕ್ರಮ ಗಳನ್ನು ಕೈಗೊಳ್ಳುವಲ್ಲಿ ಉತ್ತಮ ಹೆಜ್ಜೆ ಇಟ್ಟು ಸಂಘದಲ್ಲಿ ಭರವಸೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದೆ.
ಸಂಘದ ಜಿಲ್ಲಾಧ್ಯಕ್ಷರಾಗಿದ್ದ ಬಸವರಾಜ್ ಗುಡಲಾನೂರ್ ರವರು ಸಹ ಉತ್ತಮ ಕೆಲಸ ಮಾಡಿ ಅಧ್ಯಕ್ಷ ಸ್ಥಾನದ ಉಳಿದಿರುವ ಅಲ್ಪಾವಧಿ ಹನುಮಂತ ಹಳ್ಳಿಕೇರಿ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಿಲ್ಲಾಧ್ಯಕ್ಷರಾಗಿ ಅವಿರೋಧ ಆಯ್ಕೆಗೊಂಡ ಸ್ವಲ್ಪ ಸಮಯ ದಲ್ಲಿಯೇ ನೆನೆಗುದಿಗೆ ಬಿದ್ದಿದ್ದ ಪತ್ರಕರ್ತರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಮಾಡುವ ಕೆಲಸ ಪೂರ್ಣ ಗೊಳಿಸಿ ದಾಖಲೆ ನಿರ್ಮಿಸಿದ್ದಾರೆ, ಇವರ ಒಳ್ಳೆಯ ಕಾರ್ಯಗಳನ್ನು ಮನಗೊಂಡು ರಾಜ್ಯ ಸಮಿತಿ ಅಧ್ಯಕ್ಷರಾದ ಶಿವಾನಂದ ತಗಡೂರು ರವರು ದಿಢೀರನೆ ಕೊಪ್ಪಳ ಜಿಲ್ಲೆಗೆ ರಾಜ್ಯಮಟ್ಟದ ಮೂರು ಕಾರ್ಯಕ್ರಮ ಏಕಕಾಲಕ್ಕೆ ನಡೆಯಲು ಘೋಷಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ, ಸಂಘದ 91 ನೇ ಸರ್ವ ಸಾಮಾನ್ಯ ಸದಸ್ಯರ ವಾರ್ಷಿಕ ಮಹಾಸಭೆ, ಹಾಗೂ ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಇದೆ ಮಾರ್ಚ್ 9 ರಂದು ಕೊಪ್ಪಳದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರ ಮಾರ್ಗದರ್ಶನದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿ ಕೇರಿ ಯವರ ಸಾರಥ್ಯದಲ್ಲಿ ನಡೆಯಲಿದೆ, ಜಿಲ್ಲಾ ಕೇಂದ್ರವಾದ ಕೊಪ್ಪಳ ನಗರದಲ್ಲಿ ್ರ್ರಥಮ ಬಾರಿಗೆ ಏಕಕಾಲಕ್ಕೆ ಮೂರು ರಾಜ್ಯಮಟ್ಟದ ಕಾರ್ಯಕ್ರಮ ನಡೆಯುತ್ತಿರುವುದು ಐತಿಹಾಸಿಕ ಘಳಿಗೆ ಎಂದು ಹೇಳಬಹುದು, ಅಲ್ಲದೆ ಇದು ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ಹೆಮ್ಮೆ ಮತ್ತು ಸಂತಸ ಉಂಟು ಮಾಡಿದೆ, ಎಲ್ಲರೂ ಒಗ್ಗೂಡಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ.
ರಾಜ್ಯ ಸಮಿತಿಯ ಕಾರ್ಯಕಾರಣಿ ಸದಸ್ಯ ಸಾಧಿಕ್ ಅಲಿ, ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಸದಸ್ಯ ಎಚ್‌ಎಸ್ ಹರೀಶ್, ರಾಷ್ಟ್ರೀಯ ಮಂಡಳಿ ಸದಸ್ಯ ಜಿಎಸ್ ಗೋನಾಳ, ನಿಕಟಪೂರ್ವ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರ್ ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್‌ಎಂ ದೊಡ್ಡಮನಿ ರವರುಗಳ ಸಹಕಾರದೊಂದಿಗೆ ಇತರ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ರುದ್ರಗೌಡ ಪಾಟೀಲ್,ವೆಂಕಟೇಶ್ ಕುಲಕರ್ಣಿ ಜಿಲ್ಲಾ ಕಾರ್ಯದರ್ಶಿಯಾದ ವೀರಣ್ಣ ಕಳ್ಳಿ ಮನಿ, ಮಂಜುನಾಥ್ ಅಂಗಡಿ, ಚಾಂದ್ ಸಿಂಗ್ ಕಾರಟಗಿ, ಜಿಲ್ಲಾ ಖಜಾಂಚಿ ರಾಜು ಬಿ ಆರ್ ಮತ್ತು ವಿಶೇಷವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ನಾಗರಾಜ್ ರವರ ಸಹಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಹನುಮಂತ ಹಳ್ಳಿ ಕೇರಿ ಯವರು ಉತ್ತಮ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಶ್ರಮಿಸುತ್ತಿದ್ದಾರೆ,
ಪತ್ರಿಕಾ ಭವನ ಕಟ್ಟಡ ಕಾಮಗಾರಿ ಕೂಡ ವೇಗವಾಗಿ ನಡೆಯಲಿ ಸಂಘ ಇನ್ನಷ್ಟು ಗಟ್ಟಿಗೊಳ್ಳಲಿ, ಪತ್ರಕರ್ತರಿಗೆ ಸಿಗಬಹುದಾದ ಸೌಕರ್ಯಗಳನ್ನು ಇವರ ಅವಧಿಯಲ್ಲಿ ಸಿಗುವಂತಾಗಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಗೊಳ್ಳಲಿ ದಿ, 9 ರಂದು ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮಗಳು ಕೊಪ್ಪದಲ್ಲಿ ಇತಿಹಾಸ ಸೃಷ್ಟಿಸುವಂತಾಗಲಿ ,ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ಒಳ್ಳೆಯ ಆತಿಥ್ಯ ಸಿಗಲಿ ಎಂದು ಜಿಲ್ಲೆಯ ಸದಸ್ಯ ಪತ್ರಕರ್ತರು ಶುಭ ಹಾರೈಸಿದ್ದಾರೆ.