ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಭರ್ಜರಿ ಸಿದ್ಧತೆ

ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಭರ್ಜರಿ ಸಿದ್ಧತೆ  Preparations underway for immersion of Ganesh idols in various squares

ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಭರ್ಜರಿ ಸಿದ್ಧತೆ  

ಆಲಮೇಲ 29: ಪ್ರಥಮ ಪೂಜಿತ ಗಣೇಶನಿಗೆ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶೇಷ ಸ್ಥಾನವಿದ್ದು ಯಾವುದೇ ರೀತಿಯ ಪೂಜೆ, ವೃತಮಾಡಿದರೂ ಗಣೇಶನಿಗೆ ಮೊದಲ ಪೂಜೆ ಸಲ್ಲಿಸಲಾಗುತ್ತದೆ. ತನ್ನ ಅಪಾರ ಮಹಿಮೆಗಳಿಂದ ಗಣೇಶ ಭಕ್ತ ಜನರ ಮನಸ್ಸಿನಲ್ಲಿ ಸದಾ ನೆಲೆಸಿದ್ದಾನೆ. 

ಪಟ್ಟಣದಲ್ಲಿ ವಿವಿಧ ಚೌಕಗಳ ಗಣೇಶ ಮೂರ್ತಿಗಳ ವಿಸರ್ಜನೆಗೆ ಸಿದ್ಧತೆ ಭರ್ಜರಿಯಾಗಿ ನಡೆದಿದೆ. ಭವ್ಯ ಮೆರವಣಿಗೆ, ಝಾಂಜ್‌ಪಾಕೆ, ಕೋಲಾಟ ಹತ್ತಾರು ಜಾನಪದ ತಂಡಗಳು ಮೆರವಣಿಗೆಗೆ ಮೆರಗು ನೀಡಲು ಅಣಿಯಾಗುತ್ತಿವೆ. 

ಇಲ್ಲಿಯ ಗಣೇಶ ವಿಸರ್ಜನೆ ಕರ್ನಾಟಕದಲ್ಲಿಯೆ ಪ್ರಸಿದ್ಧಿ ಪಡೆದಿದೆ. ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ ಮತ್ತು  ಆಂಧ್ರಪದೇಶ, ರಾಜ್ಯದ ಕಲಬುರಗಿ ಬಾಗಲಕೋಟೆ, ಯಾದಗಿರಿ ಸೇರಿದಂತೆ ಅನೇಕ ಜಿಲ್ಲೆಗಳಿಂದ ಮತ್ತು ಸುತ್ತ-ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಿಂದ ಗಣೇಶೋತ್ಸವ ನೋಡಲು ಜನರು ಆಗಮಿಸುತ್ತರೆ. ಈಗಾಗಲೇ ಗಣೇಶ ವಿಸರ್ಜನೆ ಸಿದ್ದತೆಗಳು ನಡೆಯುತ್ತಿವೆ.ಇದೇ ಅಗಸ್ಟ್‌ 31ರಂದು ರವಿವಾರ 5ನೇ ದಿನದ ಗಣಪತಿ ವಿರ್ಸಜನೆ ನಡೆಯುವುದರಿಂದ  ಆಲಮೇಲದ ಎಲ್ಲಾ ಚೌಕಗಳು ಅದೇ ದಿನ ವಿರ್ಸಜನೆಗೊಳ್ಳುವುದರಿಂದ ಸ್ಥಬ್ಧ ಚಿತ್ರಗಳು ಭರದಿಂದ ತಯಾರಾಗುತ್ತಿವೆ. 

ಪಟ್ಟಣದ 15 ಗಣೇಶ ಮಂಡಳಿಗಳಿಗೆ ಒಂದು ಗಜಾನನ ಮಹಾಮಂಡಳ ರಚನೆಯಾಗುತ್ತದೆ. ಇದರ ಅಡಿಯಲ್ಲಿ 15ಚೌಕಗಳು ಇರುತ್ತವೆ ಮತ್ತು ಸಣ್ಣ ಪುಟ್ಟ ಗಣಪತಿಗಳು ಕೂಡಾ ಅದೇ ದಿನ ಸಾಯಂಕಾಲದಲ್ಲಿ ಬ್ಯಾಂಜೋ ಮೂಲಕ ಮೆರವಣಿಗೆ ನಡೆಯುತ್ತವೆ. 

ಕಲಾಕೃತಿಗಳ ಮೆರಗು: ವಿಸರ್ಜನೆ ಮೆರವಣಿಗೆಯಲ್ಲಿ ಅನೇಕ ಕಲಾಕೃತಿಗಳು ಗಮನ ಸೆಳೆಯಲಿವೆ. ಗಣೇಶ ನಗರದ ಮಂಡಳಿಯಿಂದ ಹಣಮಂತ ಶಿವನ್ನು ಪೂಜಿಸುವ ಸ್ಥಬ್ಧ ಚಿತ್ರ  ಬಸವನಗರದ ಮಂಡಳಿಯಿಂದ ವಾಸುದೇವ ಮತ್ತು ಕೃಷ್ಣ ಮುಳಮಠ ಮಂಡಳದವತಿಯಿಂದ ಆರ್‌ಸಿಬಿಯ ಕಪ್ ಗೆಲ್ಲುತ್ತಿರುವದು     ಜೈ ಭಾವನಿ ಮಂಡಳದಿಂದ ಉಗ್ರನರಸಿಂಹ ಭವಾನಿ ಕಟ್ಟಿಯಿಂದ ವಿಷ್ಣುವಿನರೂಪ  ದತ್ತನಚೌಕ ವೆಲ್ಲೂರು ಗೋಲ್ಡನ್ ಟೆಂಪಲ್ ದಿಂದ ರಾಘವೇಂದ್ರ ಚೌಕ ಪಂಡಾರಾಪೂರದ ವಿಠಲ್ ದಿಂದ  ಸಾವಳಗಿ ಲಿಂಗೇಶ್ವರ ಚೌಕ ಗಾಣದೇವತೆ  ದಿಂದ ಕಾಮನಕಟ್ಟಿ ದಿಂದ ಸೋಲ್ಲಾಪೂರದ ಸಿದ್ದರಾಮೇಶ್ವರ ವೀರಭದ್ರಶೇಶ್ವರ ಚೌಕ ದಿಂದ    ಕಾಮಕ್ಯದೇವಿ ಗಾಂಧಿ ಚೌಕ ದಿಂದ ಬದ್ರಕಾಳಿ   ಹೀಗೇ ಅನೇಕ ಬಗೆಯ ಸನ್ನಿವೇಶಗಳ ಕಲಾಕೃತಿಗಳು ರಾರಾಜಿಸಲಿವೆ.