ಲೋಕದರ್ಶನ ವರದಿ
ಹಾವೇರಿ11: ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿರುವ ಮಹಷರ್ಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಹಾಗೂ 9ರಂದು ಮಹಷರ್ಿ ವಾಲ್ಮೀಕಿ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಸಮಾಜ ಬಾಂಧವರು ಜಾತ್ರೆಯ ಯಶಸ್ವಿಗೆ ಕೈಜೋಡಿಸುವಂತೆ ಮಹಷರ್ಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿ ಕರೆ ನೀಡಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಆಯೋಜಿಸಿದ ಮಹಷರ್ಿ ವಾಲ್ಮೀಕಿ ಜಾತ್ರೆಯ ಹಾವೇರಿ ತಾಲೂಕಿನ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು, ಎರಡು ದಿನಗಳಲ್ಲಿ ಶ್ರೀಮಠದ 21ನೇ ವಾಷರ್ಿಕೋತ್ಸವ, ಲಿಂ.ಜಗದ್ಗುರು ಶ್ರೀಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 12 ವರ್ಷದ ಪುಣ್ಯಾರಾಧನೆ ಹಾಗೂ ತಮ್ಮ ಪಟ್ಟಾಧಿಕಾರದ 11ನೇ ವರ್ಷದ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಾಲ್ಮೀಕಿ ಜಾತ್ರಾ ಸಮಿತಿಯ ಪ್ರಾದಾಧಿಕಾರಿಗಳು ನಿರ್ಧರಿಸಿದ್ದಾರೆ. ವಾಲ್ಮೀಕಿ ಜಾತ್ರೆಯಲ್ಲಿ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀಮರ್ಾನಿಸಲಾಗಿದ್ದು, ಸಮುದಾಯ ಹಾಗೂ ಸಮಾಜ ಬಾಂಧವರು ಒಟ್ಟಾಗಿ ಈ ಜಾತ್ರೆಯನ್ನು ಯಶಸ್ವಿಗೊಳಿಸಲು ಮುಂದಾಗಬೇಕಿದೆ ಎಂದು ಅವರು ಹೇಳಿದರು.
ವಾಲ್ಮೀಕಿ ಗುರುಪೀಠದಲ್ಲಿ 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥರ್ಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಕೇವಲ 50 ಮಕ್ಕಳಿಗೆ ಮಾತ್ರ ಸಕರ್ಾರ ಅನುದಾನ ನೀಡುತ್ತಿದೆ. ಉಳಿದ 250 ಮಕ್ಕಳ ವಿದ್ಯಾಭ್ಯಾಸದ ಹಾಗೂ ಊಟ ಮತ್ತಿತರ ಖಚರ್ು ವೆಚ್ಚಗಳನ್ನು ಭಕ್ತರು ನೀಡುವ ಕಾಣಿಕೆಯಲ್ಲಿ ಸರಿದೂಗಿಸಲಾಗುತ್ತಿದೆ ಎಂದರು.
ಗ್ರಾಮ ಪಾದಯಾತ್ರೆ: ಭಕ್ತರು ನೀಡುವ ಕಾಣಿಕೆಯನ್ನು ಬ್ಯಾಂಕ್ನಲ್ಲಿ ಡಿಪಾಜಿಟ್ ಮಾಡುತ್ತಾ ಬರಲಾಗಿದ್ದು, ಈ ಹಣವನ್ನು ಶ್ರೀಮಠವು ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗೆ ಬಳಸುತ್ತಿದೆ. ರಾಜ್ಯಾದ್ಯಂತ ತಾವು ಗ್ರಾಮ ಪಾದಯಾತ್ರೆ ನಡೆಸಿ ಭಕ್ತರು ನೀಡುವ ಧವಸ, ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ಶ್ರೀಮಠಕ್ಕೆ ಬರುವ ಭಕ್ತರಿಗೆ, ವಿದ್ಯಾಥರ್ಿಗಳ ಪ್ರಸಾದಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಸೋಮನಗೌಡ ಪಾಟೀಲ ಆಯ್ಕೆ: ಸಭೆಯಲ್ಲಿ ಮಹಷರ್ಿ ವಾಲ್ಮೀಕಿ ಜಾತ್ರೆ ಉತ್ಸವದ ಹಾವೇರಿ ತಾಲೂಕಾ ಅಧ್ಯಕ್ಷರೆಂದು ಸಮಾಜದ ಹಿರಿಯರಾದ ಸೋಮನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.
ಮೋಹನ ನಾಗಮ್ಮನವರಿಗೆ ಸಂತಾಪ: ಸಭೆಯ ಆರಂಭದಲ್ಲಿ ಇತ್ತೀಚೆಗೆ ಅಗಲಿದ ತಾಲೂಕಿನ ಅಗಡಿಗ್ರಾಮದ ಸಾಹಿತಿ ದಿ.ಮೋಹನ ನಾಗಮ್ಮನವರ ಭಾವಚಿತ್ರಕ್ಕೆ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿಜಿ ಸಾನಿಧ್ಯದಲ್ಲಿ ಪುಷ್ಪ ನಮನ ಸಲ್ಲಿಸಿ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಕೃಷ್ಣ ಜವಳಿ, ಮಾಲತೇಶ ಓಲೇಕಾರ, ಬಸವರಾಜ ಭೀಮಕ್ಕನವರ, ಮಲ್ಲಿಕಾಜರ್ುನ ಬೂದಗಟ್ಟಿ, ಕರಬಸಪ್ಪ ಕರಡಿ, ಶೇಖರ ಕರಬಸಮ್ಮನವರ,ನಾಗರಾಜ ಬಡಮ್ಮನವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.