ಮಕ್ಕಳ ಸ್ಟೇಜ್ ಕರೇಜ್ ಗೆ ಪ್ರತಿಭಾ ಕಾರಂಜಿ ಸಹಕಾರಿ:ಬಿಇಒ ವಸಂತ
ಆಲಮಟ್ಟಿ 09: ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ಸೃಜನಾತ್ಮಕ ಸಾಂಸ್ಕೃತಿಕ ಕಲಾ ಚಟುವಟಿಕೆಗಳನ್ನು ಹೊರಹಾಕಲು ಪೂರಕವಾಗಿರುವ "ಪ್ರತಿಭಾ ಕಾರಂಜಿ-ಕಲೋತ್ಸವ" ಕಾರ್ಯಕ್ರಮ ಮಕ್ಕಳಿಗೆ ವೇದಿಕೆ ಮೇಲೆ ನಿಲ್ಲುವ ಆತ್ಮಸ್ಥೈರ್ಯ ತುಂಬುತ್ತದೆ.ಅಲ್ಲದೇ ಎಳೆ ಬಾಲ ಮನದಲ್ಲಿ ದಿಟ್ಟತೆಯ ಸ್ಟೇಜ್ ಕರೇಜ್ ದ ಕವರೇಜ್ ಗೆ ಸಹಕಾರಿಯಾಗಿದೆ ಎಂದು ಬಸವನ ಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಅಭಿಪ್ರಾಯಿಸಿದರು.
ಸಮೀಪದ ಗೊಳಸಂಗಿ ಗ್ರಾಮದ ಎಸ್.ಆರ್.ಎ.ಡಿ.ಪ್ರೌಢಶಾಲೆ,ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಹಾಗೂ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಜಿಪಂ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ, ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಬಸವನ ಬಾಗೇವಾಡಿ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಪ್ರಾಥಮಿಕ, ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಎಳೆಯ ಬಾಲ-ಬಾಲೆಯರ ಮೊಗ್ಗಿನ ಮನಭಾವದಲ್ಲಿ ಪ್ರತಿಭಾ ಕಾರಂಜಿಯು ಉತ್ಸಾಹದ ಚಿಲುಮೆ ಮೂಡಿಸಿ ದಿಟ್ಟತೆಯಿಂದ ಸ್ಪಧಾ9 ಮನೋಭಾವ ಚಿಮ್ಮಿಸುವಲ್ಲಿ ವಿಶಿಷ್ಟ ರೀತಿಯಲ್ಲಿ ಯಶಸ್ವಿಯಾಗುತ್ತಲ್ಲಿದೆ ಎಂದರು. 2002 ರಿಂದ ಶಿಕ್ಷಣ ಇಲಾಖೆ ಆರಂಭಿಸಿರುವ ವಿನೂತನ ಅನುಭವದ ಸ್ವಾದ ಮಕ್ಕಳಿಗೆ ನೀಡುವ ಈ ಪ್ರತಿಭಾ ಕಾರಂಜಿ ವಿಶಿಷ್ಟಾದ್ವೈತ ಚಟುವಟಿಕೆಯ ಸ್ಪರ್ಧಾತ್ಮಕ ಕಾರ್ಯಕ್ರಮವಾಗಿದೆ. ಇದಕ್ಕೆ ಈಗ 22 ವರ್ಷ ತುಂಬಿವೆ. 2017 ಕ್ಕೆ ಇದರಲ್ಲಿ ಕಲೋತವ ಸೇರಿದೆ. ಪ್ರತಿ ವರ್ಷವೂ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅತ್ಯೋತ್ಸಾಹದಿಂದ ಭಾಗವಹಿಸಿ ನಲಿವಿನ ಹರ್ಷದಲ್ಲಿ ಮಿಂದೇಳಿ ತಮ್ಮ ಕಲಾ ಪ್ರೌಢಿಮೆಯನ್ನು ಸಾದರಪಡಿಸಿ ಖುಷಿ ಹಂಚಿಕೊಳ್ಳುತ್ತಿರುವದು ಪೋಷಕರಿಗೆ, ಗುರು ಬಳಗಕ್ಕೆ ಹಾಗೂ ಇಲಾಖೆಗೆ ಸಂತಸಾನುಭವ ತಂದಿದೆ ಎಂದರು.
ಶಾಲಾ ಹಂತದಿಂದ ಪ್ರಾರಂಭವಾಗಿ ಶೈಕ್ಷಣಿಕ ಪ್ರತಿಭೆಗಳನ್ನು ಹೊರತೆಗೆಯಲು ಇಂಥ ಕಾರ್ಯಕ್ರಮಗಳು ಪೂರಕವಾಗಿವೆ. ಮಕ್ಕಳ "ಕಲ್ಚರ್ ಆ್ಯಕ್ಟ್ಯೂವಿಟಿ- ಟ್ಯಾಲೆಂಟ್" ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಸಾಕ್ಷಿಯಾಗಿದೆ. ಹಲವಾರು ಕ್ರಿಯಾಶೀಲ ಚಟುವಟಿಕೆ ಸ್ಪರ್ಧೆಗಳು ಒಳಗೊಂಡಿರುವ ಪ್ರತಿಭಾ ಕಾರಂಜಿ ರಾಜ್ಯ ಹಂತದವರೆಗೂ ನಡೆಯುತ್ತದೆ. ಮಕ್ಕಳ ಪ್ರತಿಭೆ ಗುರುತಿಸಿ ಅವರ ಸರ್ವೋಭಿವೃಧ್ಧಿಗೆ ಪುಷ್ಟೀಕರಣ ನೀಡುತ್ತಲ್ಲಿದೆ. ಆ ದಿಸೆಯಲ್ಲಿ ಪಾಲಕರು,ಶಿಕ್ಷಕರು ಮಕ್ಕಳ ಕಲಾ,ಕೌಶಲ್ಯ ಸೂಕ್ಷ್ಮವಾಗಿ ಗಮನಿಸಿ,ಗುರುತಿಸಿ ಪ್ರೋತ್ಸಾಹಿಸಬೇಕು.ಪ್ರೇರೇಪಿಸಬೇಕು.ಹುರಿದುಂಬಿಸಬೇಕು ಎಂದರು.
ಬರಿ ಓದಾಭ್ಯಾಸಕ್ಕೆ ಮಕ್ಕಳನ್ನು ಸೀಮಿತಗೊಳಿಸದೇ ಮನೋ ಸಂತಸದಾಯಕದಂಥ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳವಂತೆ ಉತ್ತೇಜಿಸಬೇಕು. ಶಾಲಾ ಹಂತದಲ್ಲಿ ಎಲ್ಲ ಮಕ್ಕಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಲ್ಲದೇ ಯಾವುದೇ ರೀತಿಯ ತಾರತಮ್ಯ ಮಾಡದೇ ಸೂಕ್ತ ಪ್ರತಿಭೆ ಗುರುತಿಸಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಬೆಳಗುವಂತೆ ಶಿಕ್ಷಕರು ಶ್ರಮಿಸಬೇಕೆಂದು ಬಿಇಒ ವಸಂತ ರಾಠೋಡ ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಸ್ಪರ್ಧಾ ನಿರ್ಣಾಯಕರು ಪ್ರತಿಭೆಯುಳ್ಳ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದರು. ಅತಿಥಿಗಳಾಗಿ ಮಾತನಾಡಿದ ಸಹಕಾರ ಮಹಾಮಂಡಲದ ನಿರ್ದೇಶಕ ಐ.ಸಿ.ಪಟ್ಟಣಶೆಟ್ಟರ, ಪ್ರತಿಭಾ ಕಾರಂಜಿ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ.ಪ್ರತಿಯೊಬ್ಬ ಭಾಗಿಯಾಗಿರುವ ಮಕ್ಕಳನ್ನು ಸೂಕ್ತವಾಗಿ ಗುರುತಿಸಿ ನಿರ್ಣಯ ಕೈಗೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಮುತ್ತಗಿ ಹಿರೇಮಠದ ವೀರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಜಿ, ಮಕ್ಕಳಲ್ಲಿರುವ ಸೃಜನಶೀಲತೆ ಪ್ರತಿಭೆಗೆ ಪ್ರಾಮುಖ್ಯತೆ ನೀಡಬೇಕು. ಅವರಲ್ಲಿನ ಕಲಾಸಕ್ತಿಗೆ ಪ್ರೋತ್ಸಾಹದ ಇಂಬು ದೊರಕಬೇಕು.ಇಂದು ಬಹುತೇಕ ಅಲ್ಲಲ್ಲಿ ಅನಾರೋಗ್ಯದ ತಾಂಡವಾಡುತ್ತಿದೆ.ಕಾರಣ ಮಕ್ಕಳಿಗೆ ಬಾಲ್ಯದಲ್ಲೇ ಕ್ರಿಯಾಶೀಲರಾಗುವಂತೆ ಪಾಠಗಳ ಜೊತೆಗೆ ಆಟೋತ್ಸವದಲ್ಲಿ ಸಂತಸದಿಂದ ತೋಡಗಿಸಿಕೊಳ್ಳಬೇಕು.ಮಕ್ಕಳಲ್ಲಿ ಹುದುಗಿರುವ ಸುಪ್ತಾವಸ್ಥೆಯ ಪ್ರತಿಭೆ ಪ್ರಾಮಾಣಿಕ ಬದ್ದತೆಯಿಂದ ಅನಾವರಣೊಳಿಸಬೇಕು. ಮಕ್ಕಳು ಮೊಬೈಲ್ ಚಟದಿಂದ ಸ್ವಲ್ಪ ದೂರು ಉಳಿದರೆ ಒಳ್ಳೆಯದು. ಆ ದಿಸೆಯಲ್ಲಿ ಪಾಲಕ,ಪೋಷಕರು ತಮ್ಮ ದೈನಂದಿನ ಜಂಜಾಟದ ಮಧ್ಯೆ ನಿಗಾ ವಹಿಸಿ ಗಮನ ಹರಿಸಬೇಕು.
ಉತ್ತಮ ಸಂಸ್ಕೃತಿ, ಸಂಸ್ಕಾರದೆಡೆಗೆ ಕೊಂಡೊಯ್ಯಲು ಮನಸ್ಸು ಮಾಡಬೇಕು ಎಂದರು.ಹಿರಿಯ ನ್ಯಾಯವಾದಿ ಬಿ.ಕೆ.ಕಲ್ಲೂರ ಮಾತನಾಡಿ, ಇಂದಿನ ಯುವ ಪೀಳಿಗೆ ಮೊಬೈಲ್ ಮಾಯಾಂಗನೆ ಸೆಳೆತಕ್ಕೆ ಒಳಗಾಗಿದ್ದಾರೆ. ಮೊಬೈಲ್ ಫೋನ್ ಇಲ್ಲದೇ ಜೀವನವೇ ಇಲ್ಲ. ಮೊಬೈಲ್ ವೇ ಎಲ್ಲಾ ಎನ್ನುವಂತಾಗಿದೆ. ಪುಟ್ಟ ಮಕ್ಕಳಿಗೂ ಸಹ ಮೊಬೈಲ್ ಹುಚ್ಚು ಹಿಡಿಸಿದೆ. ಅವರ ಕೈಗೆ ಮೊಬೈಲ್ ಕೊಟ್ಟರೆ ಮಾತ್ರ ಊಟ ಮಾಡುವಂತಹ ಪರಿಸ್ಥಿತಿ ಬಂದು ನಿಂತಿದೆ. ಇಷ್ಟೊಂದು ಮೊಬೈಲ್ ಮನದಾಳದಲ್ಲಿ ಜೀವಗಳು ತೇಲಿ ಹಲಬುತ್ತಿವೆ. ತಾಯಿಂದಿರು ಮೊದಲು ಜಾಗರೂಕತೆಯಿಂದ ಮಕ್ಕಳಿಗೆ ಮೊಬೈಲ್ ಹಂಬಲ ಬಿಡಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದೆ ಗಂಡಾಂತರದ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಪ್ರತಿ ಮಕ್ಕಳಲ್ಲೂ ಅಗಾಧ ಪ್ರತಿಭೆಗಳಿವೆ. ಅದರೆ ಅವರಿಗೆ ಸೂಕ್ತ ವೇದಿಕೆಗಳಿರಲಿಲ್ವ. ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಪವಾರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ, ಸುರೇಶ ಬಿರಾದಾರ, ಸಿ.ಟಿ.ಮಾದರ, ಅಮರೇಶ ನಾಡಗೌಡ, ರಮೇಸ ಬೆಳ್ಳುಬ್ಬಿ, ಮಲ್ಲನಗೌಡ ಪಾಟೀಲ, ಎಸ್.ಎಮ್.ದಳವಾಯಿ, ಹೆಚ್.ಜಿ.ಗುಳೇದಗುಡ್ಡ, ಬಿ.ಎಸ್.ಪಾರ್ವತಿಮಠ, ಶಿವಾನಂದ ಮಂಗಾನವರ, ಎ.ಎಲ್.ಗಂಗೂರ, ಎಸ್.ಎನ್.ಮಿಣಜಗಿ ಸೇರಿದಂತೆ ಎಸ್.ಡಿ.ಎಂ.ಸಿ ಅಧ್ಯಕ್ಷರು, ಪ್ರಾಥಮಿಕ, ಪ್ರೌಢಶಾಲೆಯ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ತಾಲೂಕಿನ ಇ.ಸಿ.ಓ,, ಬಿ.ಆರಿ್ಪ, ಸಿ.ಆರಿ್ಪ, ಬಿ.ಆಯ್.ಇ.ಆರಿ್ಟ ಅಧಿಕಾರಿಗಳು ಭಾಗವಹಿಸಿದರು.ಗ್ರಾಮದ ವಿವಿಧ ಶಾಲಾ ಮುಖ್ಯಸ್ಥರು, ಸಿಬ್ಬಂದಿಗಳು, ಸಂಘ,ಸಂಸ್ಥೆಳ ಪ್ರಮುಖರು, ಗ್ರಾಮಸ್ಥರು ಇತರರಿದ್ದರು.
ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು, ಶಿಕ್ಷಕಿಯರು ತಮ್ಮ ಶಾಲಾ ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರುಪೋಟೋ 1 : ಗೊಳಸಂಗಿಯಲ್ಲಿ ನಡೆದ 2024-25 ನೇ ಸಾಲಿನ ಬಸವನ ಬಾಗೇವಾಡಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.ಪೋಟೋ 2: ಗೊಳಸಂಗಿ ಗ್ರಾಮದಲ್ಲಿ ಜರುಗಿದ 2024-25 ನೇ ಸಾಲಿನ ಬಸವನ ಬಾಗೇವಾಡಿ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಬಿಇಒ ವಸಂತ ರಾಠೋಡ ಮಾತನಾಡಿದರು.