ನವದೆಹಲಿ 4 (ಯುಎನ್ಐ): ಪ್ರಸಾರ ಭಾರತಿ ಹೊಂದಿರುವ ಸ್ವಾಯತ್ತತೆ ಮಹತ್ವದ್ದಾಗಿದ್ದು, ಅದನ್ನು ಹಾಗೆಯೇ ಮುಂದುವರಿಸಲಗುವುದು ಎಂದು ಕೇಂದ್ರ ವಾತರ್ಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಮಂಗಳವಾರ ಹೇಳಿದ್ದಾರೆ.
ನವದೆಹಲಿಯಲ್ಲಿ ದೂರದರ್ಶನ ಸುದ್ದಿ ವಿಭಾಗ ಹೊಸದಾಗಿ ಪಡೆದುಕೊಂಡಿರುವ 17 ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ ( ಡಿ ಎಸ್ ಎನ್ ಜಿ) ವ್ಯಾನ್ ಗಳಿಗೆ ಹಸಿರು ನಿಶಾನೆ ತೋರಿಸಿದ ನಂತರ ಅವರು ಮಾತನಾಡುತ್ತಿದ್ದರು.
ಪ್ರಸಾರ ಭಾರತಿ, ಡಿಜಿಟಲ್ ವಿಸ್ತರಣೆ ಯುಗದಲ್ಲಿ ಹೊಸ ಹೊಸ ಮಾರ್ಗಗಳನ್ನು ಸಂಶೋಧಿಸಬೇಕು. ಕಳೆದ ಐದು ವರ್ಷಗಳಲ್ಲಿ ದೂರದರ್ಶನ ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಂಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ವಾತರ್ಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದಶರ್ಿ ಅಮಿತ್ ಖರೆ, ನಿಖರ ಸುದ್ದಿ ಪ್ರಸಾರದಿಂದಾಗಿ, ದೂರದರ್ಶನ ಹಾಗೂ ಅಕಾಶವಾಣಿ ಇನ್ನಿತರ ವಾಹಿನಿಗಳಿಗಿಂತ ಸಾಕಷ್ಟು ಮುಂದಿದ್ದು, ಜನರ ವಿಶ್ವಾಸಾರ್ಹತೆ ಉಳಿಸಿಕೊಂಡಿದೆ ಎಂದು ಹೇಳಿದರು. ಪ್ರಸಾರ ಭಾರತಿ ಅಧ್ಯಕ್ಷ ಎ. ಸೂರ್ಯಪ್ರಕಾಶ್ ಹಾಗೂ ಸಿಇಓ ಶಶಿ ಶೇಖರ್ ವೆಂಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.