ಪಾಲಬಾವಿ ಗ್ರಾಮದಲ್ಲಿ ಸತತ 21 ವರ್ಷಗಳವರೆಗೆ ಪಾದಯಾತ್ರೆ ಭಕ್ತರಿಗೆ ಪ್ರಸಾದ ವ್ಯವಸ್ಥೆ
Prasad arrangement for Padayatra devotees for 21 consecutive years in Palabavi village
ಪಾಲಬಾವಿ, 28 : ಆಂಧ್ರ್ರದೇಶದ ಸುಪ್ರಸಿದ್ಧ ಧರ್ಮ ಕ್ಷೇತ್ರವಾದ ಶ್ರೀಶೈಲಂ ಶ್ರೀ ಮಲ್ಲಿಕಾರ್ಜುನ ದೇವರ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ 1 ಹಾಗೂ 2ರಂದು ಎರಡು ದಿನಗಳವರೆಗೆ ಪಾದಯಾತ್ರೆಯ ಭಕ್ತರಿಗೆ ಗ್ರಾಮದ ಹಿರೇಮಠ ಹಾಗೂ ಗೋಡಿ ತೋಟದಲ್ಲಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಸತತ 21ನೇ ವರ್ಷಗಳ ಪ್ರಸಾದ ವ್ಯವಸ್ಥೆಯನ್ನು ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಯಿಂದ ನಡೆಯುತ್ತಿದೆ ಎಂದು ಪ್ರಸಾದ ಸಮಿತಿ ಸದಸ್ಯರು ಬರಮಪ್ಪ ಗೋಡಿ ತಿಳಿಸಿದ್ದಾರೆ. ಇಂದು ಮಾರ್ಚ್ 1ರಂದು ರವಿವಾರ ಹಾಗೂ ಸೋಮವಾರ 2ರಂದು ಎರಡು ದಿನಗಳ ವರೆಗೆ ಸಂಜೆ 6ಗಂಟೆಗೆ ಖಾನಟ್ಟಿಯ ಶ್ರೀ ಬಸವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಗ್ರಾಮದ ಶಾಂತಮಲ್ಲ ಕುಟೀರ ವೀರಯ್ಯ ಸ್ವಾಮೀಗಳ ಸಾನಿಧ್ಯಲ್ಲಿ ಪ್ರವಚನ ಹಾಗೂ ಭಜನಾ ಕಾರ್ಯಕ್ರಮವು ನೆರವೇರುವುದು ಎಂದು ಸುಭಾಷ ಹಿರೇಮಠ, ಗಿರೇಪ್ಪ ಗೋಡಿ ಪ್ರಕಟಿನಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 