ದೆಹಲಿಯಲ್ಲಿ ನಡೆಯಲಿರುವ ‘ಲೈನ್‌ಮನ್ ದಿವಸ’ ಕ್ಕೆ ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಆಯ್ಕೆ..!

Powerman Anand Herwade of Ugara Hescom sub-division has been selected for the 'Lineman's Day' to be

ದೆಹಲಿಯಲ್ಲಿ ನಡೆಯಲಿರುವ ‘ಲೈನ್‌ಮನ್ ದಿವಸ’ ಕ್ಕೆ  ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಆಯ್ಕೆ..! 

ಕಾಗವಾಡ 19 :   ತಾಲೂಕಿನ ಉಗಾರ ಹೆಸ್ಕಾಂ ಉಪ ವಿಭಾಗದ ಪವರ್‌ಮನ್ ಆನಂದ ಆರ್‌. ಹೇರವಾಡೆ ದೆಹಲಿಯಲ್ಲಿ ಮಾ. 04 ರಂದು ನಡೆಯಲಿರುವ ಲೈನ್‌ಮನ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ರಾಜ್ಯದಿಂದ ಆಯ್ಕೆಗೊಂಡಿರುವ ಐವರ ಪೈಕಿ ಇವರು ಒಬ್ಬರಾಗಿದ್ದಾರೆ. ಕೇಂದ್ರ ವಿದ್ಯುತ್ ಪ್ರಾಧಿಕಾರದ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳ ವಿದ್ಯುತ್ ಇಲಾಖೆಯ ಅಧಿಕಾರಗಳು ಮತ್ತು ಲೈನ್‌ಮನ್‌ಗಳು ಭಾಗವಹಿಸಲಿದ್ದು, ಕರ್ನಾಟಕದಿಂದ 5 ಜನರು ಆಯ್ಕೆಗೊಂಡಿದ್ದಾರೆ. ಈ ಪೈಕಿ ಬೆಳಗಾವಿ ಗ್ರಾಮಾಂತರ ಕಾಕತಿ ಹೆಸ್ಕಾಂ ಉಪವಿಭಾಗದ ಗ್ರೇಡ್‌-2 ಮೆಕ್ಯಾನಿಕ್ ಉತ್ತಮ ಕುಮನಾಚೆ ಮತ್ತು ಉಗಾರ ಹೆಸ್ಕಾಂ ಉಪವಿಭಾಗದ ಪವರ್‌ಮನ್ ಆನಂದ ಹೇರವಾಡೆ ಬೆಳಗಾವಿ ಜಿಲ್ಲೆಯಿಂದ ಆಯ್ಕೆಗೊಂಡಿದ್ದು ಜಿಲ್ಲೆಯ ಹೆಸ್ಕಾಂನ 659 ಸಂಘಟನೆಯ ಕಾರ್ಯದರ್ಶಿ ಮಾರುತಿ ದೊಡಮನಿ ಮತ್ತು ಪದಾಧೀಕಾರಿಗಳು ಅಭಿನಂದಿಸಿದ್ದಾರೆ.