ದೇಶದ ಪ್ರಗತಿಗಾಗಿ ಜನಸಂಖ್ಯೆ ನಿಯಂತ್ರಣ ಅತೀ ಮುಖ್ಯ: ತಾಲೂಕಾ ಆರೋಗ್ಯಾಧಿಕಾರಿ ಡಾ. ಲಮಾಣಿ

ಲೋಕದರ್ಶನ ವರದಿ

ಶಿರಹಟ್ಟಿ 16: ಜನಸಂಖ್ಯೆ ಮಾನವ ಸಂಪನ್ಮೂಲ ರೂಪದಲ್ಲಿ ಬಳಸಿದರೆ ಅದು ಮಾರಕವಲ್ಲ ಆದರೆ ದಿನಬಳಕೆ ವಸ್ತುಗಳು, ಆಹಾರ, ಪರಿಸರ ನಾಶ ಹಾಗೂ ದೇಶದ ಪ್ರಗತಿ ಇವೆಲ್ಲವನ್ನೂ ನೋಡಿದರೆ ಜನಸಂಖ್ಯೆಯ ನಿಯಂತ್ರಣ ತುರ್ತಾ ಆಗಲೇಬೇಕು ಎಂದು ತಾಲೂಕಾ ಆರೋಗ್ಯಾಧಿಕಾರಿ ಚಂದ್ರು ಲಮಾಣಿ ಕರೆ ನೀಡಿದರು.

ಅವರು ಪಟ್ಟಣದ ಎಫ್ ಎಂ ಡಬಾಲಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತಾ, ಸಮಾಜದಲ್ಲಿ ಜನಸಂಖ್ಯೆ ನಿಯಂತ್ರದ ಕುರಿತು ಅರಿವು ಮೂಡಿಸುವ ಕಾರ್ಯ ಅತೀ ಮುಖ್ಯವಾಗಿದ್ದು, ಇದರ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯವಾಗಿದೆ ಎಂದು ಮಾತನಾಡಿದರು. 

ಕಾಲೇಜಿನ ಪ್ರಾಂಶುಪಾಲ ಮಹಾಂತೇಶ ಭಜಂತ್ರಿ ಯುವಕ ಯುವತಿಯರಲ್ಲಿ ಜನಸಂಖ್ಯೆ ನಿಯಂತ್ರಣ ಬಗ್ಗೆ ಸವಿವರವಾಗಿ ಉಪನ್ಯಾಸ ಮಾಡಿದರು. 

ನಂತರ ತಾಲೂಕಾ ಶಿಕ್ಷಣಾಧಿಕಾರಿ ಗೀತಾ ಎಂ.ಎಚ್ ಮಾತನಾಡುತ್ತಾ, ಅತಿಯಾದ ವೇಗದಲ್ಲಿ ಹಾಗೂ ನಿಯಂತ್ರಣ ತಪ್ಪಿ ಬೆಳೆಯುತ್ತಿರುವ ಈ ಜನಸಂಖ್ಯೆಯನ್ನು ಮಂದಗತಿಯಲ್ಲಿ ಸಾಗುವಂತೆ ಮಾಡಬೇಕೆಂದರೆ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

ಕಾಲೇಜಿನ ಉಪನ್ಯಾಸಕಿ ಎಸ್ ಎಸ್ ಹುಚ್ಚಣ್ಣವರ ಜನಸಂಖ್ಯೆಯ ನಿಯಂತ್ರಣ ಬಗ್ಗೆ ಸವಿವರವಾಗಿ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎನ್ ಹನುಮರಡ್ಡಿ, ಎಂ.ಕೆ ಲಮಾಣಿ, ಪಿ.ಎನ್ ಕುಲಕಣರ್ಿ, ಎಂ ಎನ್ ನದಾಫ, ಎಫ್ ಎ ಬಾಬುಖಾನವರ, ನಂದೀಶ ಕಾಳಜಿ ಇನ್ನೂ ಅನೇಕರು ಉಪಸ್ಥಿತರಿದ್ದರು.