ಲೋಕದರ್ಶನ ವರದಿ
ಕಲಬುಗರ್ಿ04.: ಧರ್ಮ ಯಶಸ್ಸು ನೀತಿ ದಕ್ಷತೆ ಮತ್ತು ಒಳ್ಳೆಯ ಮಾತುಗಳನ್ನು ಅನುಸರಿಸಿ ಬಾಳಿದರೆ ಜೀವನದಲ್ಲಿ ಶ್ರೇಯಸ್ಸು ಕಾಣಲು ಸಾಧ್ಯ. ನೀತಿ ಧರ್ಮಗಳ ಪರಿಪಾಲನೆ ಜೀವನ ಉತ್ಕರ್ಷತೆಗೆ ಅಡಿಪಾಯವೆಂದು ಬಾಳೆಹೊನ್ನೂರು ರಂಭಾಪುರಿ ಡಾ|| ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆ ಆಲೇರು ಮಂಡಲ ವ್ಯಾಪ್ತಿಯಲ್ಲಿ ಬರುವ ಕೊಲನಪಾಕ ಚಂಡಿಕಾಂಬಾ ಸಮೇತ ಸ್ವಯಂಭು ಸೋಮೇಶ್ವರ ದೇವಸ್ಥಾನದಲ್ಲಿ ಜರುಗಿದ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಹಣ ಎಷ್ಟೇ ಸಂಪಾದನೆ ಮಾಡಲಿ. ಆದರೆ ಅತಿಯಾದ ದುರಾಶೆ ಬೇಡ. ದುಡಿಮೆಯನ್ನು ನಂಬಿ ಆದರೆ ದೇವರನ್ನು ಮರೆಯಬೇಡಿ. ಒಳ್ಳೆಯದಕ್ಕೆ ಮನ ಕೆಟ್ಟದ್ದಕ್ಕೆ ಧನವೇ ಮೂಲ.
ಮನುಷ್ಯ ಕಲಿಯಬೇಕಾದದ್ದು ಸಾಗರದಷ್ಟು. ಆದರೆ ಕಲಿತಿರುವುದು ಸಾಸವೆಯಷ್ಟು ಎಂಬದನ್ನು ಮರೆಯಬಾರದು.
ಜೀವನದಲ್ಲಿ ಅಡೆ ತಡೆಗಳು ಬಂದಾಗ ದಾರಿ ಬದಲಿಸಬೇಕೆ ವಿನ: ನಾವು ಕಣ್ಣಿಟ್ಟಿರುವ ಮಹತ್ತರ ಗುರಿಯನ್ನಲ್ಲ. ನೀರಿನಿಂದ ಸ್ನೇಹ, ಇರುವೆಯಿಂದ ಪ್ರಯತ್ನ ಗೋವಿನಿಂದ ವಾತ್ಸಲ್ಯ, ಕಾಗೆಯಿಂದ ಸಹಭೋಜನ, ಕತ್ತೆಯಿಂದ ನಿಸ್ವಾರ್ಥ ಸೇವೆ, ಸಿಂಹದಿಂದ ಶೌರ್ಯ, ಭೂಮಿಯಿಂದ ತಾಳ್ಮೆ, ನಾಯಿಯಂದ ಕೃತಜ್ಞತೆ ಕಲಿತುಕೊಳ್ಳುವ ಅವಶ್ಯಕತೆ ಬಹಳಷ್ಟಿದೆ.
ಜಗದ್ಗುರು ರೇಣುಕಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿಯ ಮೂಲಕ ಮಾನವ ಧರ್ಮದ ಆದರ್ಶ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ ಎಂದರು.
ಬೆಂಗಳೂರಿನ ಬಿ.ಬಿ.ಎಂ.ಪಿ.ಇಂಜನಿಯರ್ ವಿ.ನಟರಾಜು ಅವರು 'ರಂಭಾಪುರಿ ಬೆಳಗು' ಜನೇವರಿ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮೇಹಕರ ಹಿರೇಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಂಬಿಕೆಯೇ ಜೀವನ. ಸಂಶಯವೇ ಮರಣ. ನಂಬಿಕೆಯಿಂದ ಅದ್ಭುತ ಕಾರ್ಯ ಸಾಧಿಸಲು ಸಾಧ್ಯ. ಸಂಶಯದಿಂದ ಸರ್ವ ನಾಶಕ್ಕೆ ಕಾರಣವಾಗುತ್ತದೆ. ದೇವರು ಧರ್ಮ ಗುರುವಿನಲ್ಲಿ ನಮ್ಮ ನಂಬಿಗೆ ಶ್ರದ್ಧೆ ಅಚಲವಾಗಿರಬೇಕೆಂದರು.
ಬಿಚಗುಂದ ಸೋಮಲಿಂಗ ಶ್ರೀಗಳು, ಹಳ್ಳಿಖೇಡದ ಶ್ರೀಪತಿ ಪಂಡಿತಾರಾಧ್ಯ ಶ್ರೀಗಳು, ಸಂಗೊಳ್ಳಿ ಗುರುಲಿಂಗ ಶ್ರೀಗಳು, ಬಿಳಕಿ ರಾಚೋಟೇಶ್ವರ ಶ್ರೀಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ದಾರುಕಶಾಸ್ತ್ರಿಗಳಿಂದ ಭಕ್ತಿ ಗೀತೆ ಜರುಗಿತು.
ಕಾರ್ಯದಶರ್ಿ ಅಣ್ಣಾರಾವ್ ಬಿರಾದಾರ ಸ್ವಾಗತಿಸಿದರು. ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು. ಕಲಬುಗರ್ಿಯ ಗಿರಿಯಪ್ಪ ಮುತ್ತ್ಯಾ ದಾಸೋಹ ಸೇವೆ ಸಲ್ಲಿಸಿದರು.
ವಿಶೇಷ ಪೂಜೆ : ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ಕೊಲನಪಾಕ ಸ್ವಯಂಭು ಸೋಮೇಶ್ವರ ಮಹಾಲಿಂಗಕ್ಕೆ ಏಕಾದಶ ರುದ್ರಾಭಿಷೇಕ ಮಹಾಪೂಜಾ ಹಾಗೂ ಶಕ್ತಿಮಾತೆ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ವಿಶೇಷ ಪೂಜೆ ಜರುಗಿತು.