ಪೊಲೀಸ್ ದಾಳಿ: ಅನಧಿಕೃತವಾಗಿ ಬೆಳೆದಿದ್ದ ಗಾಂಜಾ ಗಿಡಗಳು ವಶ, ಆರೋಪಿ ಬಂಧನ
Police raid: Illegally grown marijuana plants seized, suspect arrested
ಪೊಲೀಸ್ ದಾಳಿ: ಅನಧಿಕೃತವಾಗಿ ಬೆಳೆದಿದ್ದ ಗಾಂಜಾ ಗಿಡಗಳು ವಶ, ಆರೋಪಿ ಬಂಧನ
ರಾಯಬಾಗ 14: ತಾಲೂಕಿನ ನಿಡಗುಂದಿ ಗ್ರಾಮದ ಜಮೀನಿನಲ್ಲಿ ಅನಧಿಕೃತವಾಗಿ ಬೆಳೆದಿದ್ದ ಗಾಂಜಾ ಮಾದಕ ಪದಾರ್ಥ ಗಿಡಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಬೆಳಗಾವಿ ಎಸ್.ಪಿ ಭೀಮಾಶಂಕರ ಗುಳೇದ ಅವರ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯೊಂದಿಗೆ ರಾಯಬಾಗ ಸಿಪಿಐ ಬಿ.ಎಸ್.ಮಂಟೂರ ಅವರ ನೇತೃತ್ವದ ಪೊಲೀಸ ತಂಡ ಶನಿವಾರ ಬೆಳಿಗ್ಗೆ ತಾಲೂಕಿನ ನಿಡಗುಂದಿ ಗ್ರಾಮದ ಸಿಂಗಾಡಿ ಮಾಳಪ್ಪ ಹಿರೇಕೊಡಿ ಇತನ ಜಮೀನಿನಲ್ಲಿ ಕಾರ್ಯಾಚರಣೆ ನಡೆಸಿ, ಜಮೀನದಲ್ಲಿನ ಕಬ್ಬಿನ ಬೆಳೆಯಲ್ಲಿ ಅನಧಿಕೃತವಾಗಿ ಬೆಳೆದಿದ್ದ ಸುಮಾರು 205 ಹಸಿ ಗಾಂಜಾ ಗಿಡಗಳು, ಹೂ, ಕಾಂಡ, ಬೇರು ಸಮೇತ ಒಟ್ಟು 441 ಕೆ.ಜಿ 830 ಗ್ರಾಂ ತೂಕಿನ ಅಂದಾಜು 22 ಲಕ್ಷ ರೂ. ಮೌಲ್ಯದ ಹಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಸಿಂಗಾಡಿ ಹಿರೇಕೋಡಿ ಇತನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ನರಸಿಂಹರಾಜು ಹಾಗೂ ಪೊಲೀಸ ಸಿಬ್ಬಂದಿ ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 