ಸೆ,6 ರಂದು ಕೃಷ್ಣೆ ಒಡಲಿಗೆ ಮುಖ್ಯಮಂತ್ರಿ ಬಾಗಿನ ಅರೆ​‍್ಣ ಆಲಮಟ್ಟಿ ಅಂಗಳದಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ-ಎಸ್‌.ಪಿ.

ಸೆ,6 ರಂದು ಕೃಷ್ಣೆ ಒಡಲಿಗೆ ಮುಖ್ಯಮಂತ್ರಿ ಬಾಗಿನ ಅರೆ​‍್ಣ ಆಲಮಟ್ಟಿ ಅಂಗಳದಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ-ಎಸ್‌.ಪಿ. Police deploy tight security at the Alamati courtyard of the Chief Minister's residence for Krishna

ಸೆ,6 ರಂದು ಕೃಷ್ಣೆ ಒಡಲಿಗೆ ಮುಖ್ಯಮಂತ್ರಿ ಬಾಗಿನ ಅರೆ​‍್ಣ ಆಲಮಟ್ಟಿ ಅಂಗಳದಲ್ಲಿ ಪೋಲಿಸ್ ಬಿಗಿ ಭದ್ರತೆ ನಿಯೋಜನೆ-ಎಸ್‌.ಪಿ. 

ಆಲಮಟ್ಟಿ 4: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೆ.6 ಶನಿವಾರ ಮಧ್ಯಾಹ್ನ 12 ಕ್ಕೆ ಕೃಷ್ಣಗೆ ಆಲಮಟ್ಟಿಯಲ್ಲಿ ಬಾಗಿನ ಅರ​‍್ಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಲಾಲ್ ಬಹದ್ದೂರ್ ಜಲಾಶಯ  ಸೇರಿದಂತೆ ಆಲಮಟ್ಟಿ ಸುತ್ತಲೂ ಪೋಲಿಸ್ ಬಿಗಿ ಬಂದೋಬಸ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ  ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಹೇಳಿದರು. 

    ಗುರುವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. 

 ಬಾಗಿನ ಅರೆ​‍್ಣಯ ನಂತರ ಪ್ರವಾಸಿ ಮಂದಿರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದರು. 

ರೈತರು, ಸಾರ್ವಜನಿಕರಿಗೆ ಮುಖ್ಯಮಂತ್ರಿಗಳಿಗೆ ಅಹವಾಲು ಸಲ್ಲಿಸಲು ಪ್ರವಾಸಿ ಮಂದಿರದ ಬಲಬದಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಮನವಿ ಸಲ್ಲಿಸುವವರು ಮೊದಲೇ ಸ್ಥಳೀಯ ಠಾಣೆಯಲ್ಲಿ ಅನುಮತಿ ಪಡೆಯಬೇಕು, ಒಂದು ಮನವಿಗೆ ನಾಲ್ವರಿಗೆ ಅವಕಾಶ ನೀಡಲಾಗುತ್ತದೆ ಎಂದರು. 

ಈ ಬಾರಿ ಭದ್ರತೆ ಹೆಚ್ಚಿಸಲಾಗಿದ್ದು ಸಾರ್ವಜನಿಕ ಪ್ರವೇಶ ನಿಷೇಧವಿದೆ ಎಂದರು. 

ಮಧ್ಯಾಹ್ನ 3 ಕ್ಕೆ ಆಲಮಟ್ಟಿಯಿಂದ ಅವರು ಬೆಂಗಳೂರಗೆ ತೆರಳಲಿದ್ದಾರೆ. ಎಂದರು. 

ಬೆಳಗಾವಿ ಐಜಿಪಿ ಬಂದೋಬಸ್ತ ನೇತೃತ್ವ ವಹಿಸಲಿದ್ದಾರೆ. ಇಬ್ಬರು ಎಸ್‌.ಪಿ, ಆರು ಜನ ಡಿವೈಎಸ್ ಪಿ, 13 ಸಿಪಿಐ, 32 ಪಿಎಸ್‌ಐ 24 ಎಎಸ್‌ಐ,  90 ಜನ ಹೆಡ್ ಕಾನ್ಸಟೇಬಲ್, 242 ಪೊಲೀಸ್ ಕಾನ್ಸಟೇಬಲ್, 24 ಜನ ಮಹಿಳಾ ಕಾನ್ಸಟೇಬಲ್ ಜತೆಗೆ ಕೆಎಸ್‌ಐ ಎಸ್ ಎಫ್ ಪೊಲೀಸರು ಬಂದೋಬಸ್ತಗಾಗಿ ನಿಯೋಜನೆಗೊಳಿಸಲಾಗುತ್ತಿದೆ ಎಂದರು. 

ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂರ್ಣ ಕುಂಭ ಸ್ವಾಗತ ಇಲ್ಲ ಎಂದರು. 

ಸುದ್ದಿಗೋಷ್ಠಿಯಲ್ಲಿ ಸಿಇ ಡಿ.ಬಸವರಾಜ, ಎಸ್ ಇ ವಿ.ಆರ್‌. ಹಿರೇಗೌಡರ, ಹೆಚ್ಚುವರಿ ಎಸ್ ಪಿ ರಾಮನಗೌಡ ಹಟ್ಟಿ, ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ, ರವಿ ಚಂದ್ರಗಿರಿಯವರ, ಅಶೋಕ ಚವ್ಹಾಣ ಮತ್ತಿತರರು ಇದ್ದರು.