ಹಾವೇರಿ14: ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾದ ಮನೆಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ಕುರಿತು ಟಿ.ವಿ. ಸುರೇಶ, ಡಿಎಸ್ಪಿ ರಾಣೇಬೆನ್ನೂರ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಲಿಂಗನಗೌಡ ನೆಗಳೂರು ಸಿಪಿಐ ರಾಣೇಬೆನ್ನೂರ ಶಹರ ಮತ್ತು ಮಂಜಣ್ಣ ಪಿಎಸ್ಐ ಶಹರ ಠಾಣೆರವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಫೆ. 13ರಂದು ಆರೋಪಿಗಳಾದ ಅಕ್ಬರ್ಸಾಬ್ ತಂದೆ ರಹಿಮಾನ್ಸಾಬ್ ಜಮಖಾನಿ, ಖಾಲೀದ್ಅಹ್ಮದ ತಂದೆ ಶಬ್ಬೀರ್ಅಹ್ಮದ ಕರ್ಜಗಿ,ಸಂತೋಷ ತಂದೆ ತುಳಜಪ್ಪ ಶಿಂದೆ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡು ತಾವು ಕಳವು ಮಾಡಿದ ಒಟ್ಟು 80 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ಆಭರಣಗಳನ್ನು ಅಮಾನತ್ತು ಪಡಿಸಿಕೊಂಡಿದ್ದು ಅಮಾನತ್ತುಪಡಿಸಿದ ಅಂದಾಜು ಮೌಲ್ಯ 3,00,000/- ರೂ. ವಸ್ತುಗಳನ್ನು ಹಾಜರುಪಡಿಸಿದ್ದರು.
ಈ ಕಾಯರ್ಾಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿಗಳಾದ ಕೆ.ಸಿ.ಕೋಮಲಾಚಾರ್ ಎಎಸ್ಐ ಮತ್ತು ರಾಣೇಬೆನ್ನೂರ ಶಹರ ಠಾಣೆ ಸಿಬ್ಬಂದಿಗಳಾದ ರಾಜು ವಡ್ಡರ, ವಸಂತ ನಾಯಕ, ವಿಶ್ವನಾಥ ನಾಯಕ, ಪಿ.ಕೆ ಸನದಿ, ಎಂ.ಎನ್ ಕುಂಟಗೌಡ ಮತ್ತು ಅರುಣ ಅಂಗಡಿ ಇವರು ಪಾಲ್ಗೊಂಡಿದ್ದರು.
ಈ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಹಾವೇರಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾವೇರಿರವರು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದರು.