ಧಾರವಾಡ 03: ಆದರ್ಶ ಬಾಲಿಕಾ ಪ್ರೌಢಶಾಲೆ ಮತ್ತು ನಿವೇದಿತಾ ಪ್ರಾಥಮಿಕ ಶಾಲೆ ರಾಮನಗರ, ಧಾರವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಅ.1ರಂದು ಪ್ಲಾಸ್ಟಿಕ್ ಮುಕ್ತ ಶಾಲೆ ಕಾರ್ಯಕ್ರಮದಲ್ಲಿ ಸೈಕಲ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಸೈಕಲ್ ರ್ಯಾಲಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ಖಾಜಿಯವರು ಚಾಲನೆ ಮಾಡಿ ಮಾತನಾಡುತ್ತ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾಥರ್ಿಗಳಿಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಹುಬ್ಬಳ್ಳಿ-ಧಾರವಾಡ ಸಹಾಯಕ ಅಭಿಯಂತರ ಆರ್.ಎಂ.ಕುಲಕಣರ್ಿ ವಹಿಸಿದ್ದರು. ಅತಿಥಿಗಳಾಗಿ ಸಹಾಯಕ ನಿದರ್ೇಶಕ ಜಿ.ಎನ್.ಗುತ್ತಿ ಹಾಗೂ ಪರಿಸರ ಅಭಿಯಂತರ ನವೀನ, ಮದಾರಮಡ್ಡಿ ಕ್ಲಸ್ಟರಿನ ಸಿ.ಆರ್.ಪಿ ವಾಯ.ಎಸ್.ಪಾಟೀಲ ಭಾಗವಹಿಸಿದ್ದರು.
ಎಚ್.ವಾಯ್ ಉಪ್ಪಾರ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ಪಿ.ಎಸ್.ಸಜ್ಜನರ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕ ಬಿ.ಎಂ.ಮಲ್ಲಿಗವಾಡ ಮುಖ್ಯೋಪಾಧ್ಯಾಯ ಎಸ್.ಎಂ.ಕಡೆತೋಟದ, ಎಸ್.ಪಿ.ಲೋಕರೆ ಭಾಗವಹಿಸಿದ್ದರು. ಇನ್ನುಳಿದ ಶಿಕ್ಷಕರಾದ ಎಸ್.ಪಿ.ಉಪ್ಪಿನ, ಬಿ.ಎಂ.ಕಲ್ಲೂರ, ಶೂಪರ್ಾಲಿ ಪಟ್ಟಣಕೋಡಿ, ಮಮತಾ, ಪಾಟೀಲ ಮತ್ತು ಶಾಲೆಯ ಎಲ್ಲ ಶಿಕ್ಷಕರು ಭಾಗವಹಿಸಿದ್ದರು. ವಿದ್ಯಾಥರ್ಿಗಳು ಉತ್ಸಾಹದಿಂದ ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.